Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ನವದೆಹಲಿ: ಜರ್ಸಿ ನಂಬರ್​ 7 ಅಂದಾಗಲೇ ಥಟ್ಟನೇ ನಮಗೆ ನೆನಪಾಗುವುದು ಟೀಮ್​ ಇಂಡಿಯಾ ಮಾಜಿ ನಾಯಕ ಎಂ.ಎಸ್​. ಧೋನಿ ಹೆಸರು. ನಂ.7ಕ್ಕೂ ಧೋನಿಗೂ ಅವಿನಾಭಾವ ಸಂಬಂಧವಿದೆ. ಅದು ಏನು ಅಂತಾ ಸ್ವತಃ ಧೋನಿ ಅವರೇ ಇದೀಗ ತಿಳಿಸಿದ್ದಾರೆ.

2007ರಲ್ಲಿ ಟೀಮ್​ ಇಂಡಿಯಾಗೆ ಕಾಲಿಟ್ಟ ಕ್ಷಣದಿಂದಲೂ ಧೋನಿ ಅವರು ನಂ.7ರ ಜರ್ಸಿಯನ್ನು ತೊಡುತ್ತಿದ್ದಾರೆ. ಒಮ್ಮೆಯು ಅವರು ಸಂಖ್ಯೆಯನ್ನು ಬದಲಾಯಿಸಿದ್ದನ್ನು ಯಾರೂ ಕಂಡಿಲ್ಲ. ಹಾಗಾದರೆ, ನಂ. 7 ಧೋನಿಗೆ ಯಾಕೆ ಅಷ್ಟೊಂದು ಇಷ್ಟ ಅಂತಿರಾ… ಅದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ…

ಐಪಿಎಲ್​ 15ನೇ ಆವೃತ್ತಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೆನ್ನೈ ಸೂಪರ್ಸ್​ ಕಿಂಗ್​ (ಸಿಎಸ್​ಕೆ) ತಂಡ ಅಭಿಮಾನಿಗಳಿಗಾಗಿ ನಡೆಸಿದ ಈವೆಂಟ್​ನಲ್ಲಿ ಫ್ಯಾನ್ಸ್​ ಜತೆ ಕ್ಯಾಪ್ಟನ್ ಎಂ.ಎಸ್​.​ ಧೋನಿ ಸಂವಾದ ನಡೆಸಿದರು. ಈ ವೇಳೆ ಹಲವು ಸಂಗತಿಗಳನ್ನು ಧೋನಿ ತಿಳಿಸಿದ್ದು, ಅದರಲ್ಲಿ ಜರ್ಸಿ ನಂ.7 ಕೂಡ ಒಂದು.

ಜರ್ಸಿ ನಂ. 7ರ ಹಿಂದೆ ಯಾವುದೇ ಮೂಢನಂಬಿಕೆ ಕಾರಣ ಇಲ್ಲ ಎಂದು ಧೋನಿ ಹೇಳಿದ್ದಾರೆ. ಆರಂಭದಲ್ಲಿ ಅನೇಕ ಜನರು ನಂ. 7 ನನಗೆ ಅದೃಷ್ಟದ ಸಂಖ್ಯೆ ಎಂದು ಭಾವಿಸಿದರು ಆದರೆ, ನಾನು ಆ ನಂಬರ್​ ಅನ್ನು ಆಯ್ಕೆ ಮಾಡಿಕೊಳ್ಳಲು ಇರುವ ಕಾರಣ ಬಹಳ ಸರಳವಾದದ್ದು ಎಂದು ಹೇಳಿದರು.

ನಾನು ಜುಲೈ 7 ರಂದು ಜನಿಸಿದೆ. ಜುಲೈ ಕೂಡ ಏಳನೇ ತಿಂಗಳಾಗಿದೆ. ಹೀಗಾಗಿ ನಾನು ಜರ್ಸಿ ನಂ. 7ನ್ನು ಆಯ್ಕೆ ಮಾಡಿಕೊಂಡೆ ಎಂದು ಕಾರಣವನ್ನು ತಿಳಿಸಿದರು. ಯಾವುದು ಉತ್ತಮ ಸಂಖ್ಯೆ ಮತ್ತು ಇನ್ನಿತರ ವಿಭಿನ್ನ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಂಬರ್​ ಪಡೆಯುವ ಬದಲು, ನನ್ನ ಜನ್ಮ ದಿನಾಂಕವನ್ನು ಸಂಖ್ಯೆಯಾಗಿ ಬಳಸಬೇಕೆಂದು ನಾನು ಭಾವಿಸಿದೆ. ನಂತರದಲ್ಲಿ ಜನರು ಕೂಡ ನನ್ನನ್ನು ಕೇಳಲು ಆರಂಭಿಸಿದರು. ಅದಕ್ಕೆ ನಾನು ಜನಸಿದ ವರ್ಷ 81, 8-1 = 7, 7 ಎಂಬುದು ತಟಸ್ಥ ಸಂಖ್ಯೆ ಎಂದು ಎಲ್ಲರಿಗೂ ಹೇಳುತ್ತಿದ್ದೆ ಎಂದರು.

ಬಹಳಷ್ಟು ಜನರು 7 ಅನ್ನು ತಟಸ್ಥ ಸಂಖ್ಯೆ ಎಂದು ಹೇಳಿದರು ಮತ್ತು ಅದು ನಿಮಗೆ ಕೆಲಸ ಮಾಡದಿದ್ದರೂ, ಅದು ನಿಜವಾಗಿಯೂ ನಿಮ್ಮ ವಿರುದ್ಧ ಹೋಗುವುದಿಲ್ಲ ಎಂದರು. ಅದನ್ನೂ ನಾನು ಉತ್ತರವಾಗಿ ಅನೇಕರಿಗೆ ಹೇಳಿದೆ. ಆದರೆ, ನಾನು ಅದರ ಬಗ್ಗೆ ಹೆಚ್ಚು ಮೂಢನಂಬಿಕೆ ಹೊಂದಿಲ್ಲ, ಆದರೆ ಇದು ನನ್ನ ಹೃದಯಕ್ಕೆ ಹತ್ತಿರವಿರುವ ಒಂದು ಸಂಖ್ಯೆ ಮತ್ತು ನಾನು ಅದನ್ನು ತುಂಬಾ ವರ್ಷಗಳಿಂದ ನನ್ನೊಂದಿಗೆ ಇಟ್ಟುಕೊಂಡಿದ್ದೇನೆ ಎಂದು ನಂ. 7ರ ಮೇಲಿನ ಅಭಿಮಾನವನ್ನು ತಿಳಿಸಿದರು.

ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಧೋನಿ ಮತ್ತೊಮ್ಮೆ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಮಾರ್ಚ್ 26 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ತಂಡವು ತನ್ನ ಮೊದಲ ಪಂದ್ಯವನ್ನು ಆಡಲಿದೆ. (ಏಜೆನ್ಸೀಸ್)