Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ: ಔರಾದ ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ಶುಕ್ರವಾರ ಹೋಳಿ ಹುಣ್ಣಿಮೆಯನ್ನು ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ಮಕ್ಕಳು, ಯುವಕರು ಪರಸ್ಪರ ಬಣ್ಣದಾಟದಲ್ಲಿ ಮಿಂದೆದ್ದರು.
ಮುಂಜಾನೆ 7 ಗಂಟೆಯಿಂದಲೇ ಪುಟ್ಟ ಪುಟ್ಟ ಮಕ್ಕಳು ಬಣ್ಣ ಹಿಡಿದು ಬೀದಿಗೆ ಬಂದು ಹೋಳಿ ಹುಣ್ಣಿಮೆಗೆ ಚಾಲನೆ ನೀಡಿದರು. 10 ಗಂಟೆಯ ಹೊತ್ತಿಗೆ ದೊಡ್ಡವರೂ ಸಹ ಹೊರಬಂದು ಬಣ್ಣದಾಟಕ್ಕೆ ಮೆರಗು ನೀಡಿದರು.  ಯುವಕರು ಗುಂಪು ಗುಂಪಾಗಿ ಸಮೀಪದ ಗಳೆಯರ ಮನೆಗಳಿಗೆ ತೆರಳಿ ಬಣ್ಣ ಎರಚಿ ಸಂತಸಪಟ್ಟರು. ಬಣ್ಣ ಹಚ್ಚಿಕೊಂಡು ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದ ಯುವಕರ ಗುಂಪು ಹೋಳಿಗೆ ವಿಶೇಷ ಮೆರುಗು ತಂದುಕೊಟ್ಟಿತು.
ಈ ಸಂದರ್ಭದಲ್ಲಿ ಸಾಂಖಿಕ ಅಧಿಕಾರಿ ರತಿಕಾಂತ ನೇಳಗೆ, ಗ್ರಾಪಂ ಸದಸ್ಯ ರಾಜಕುಮಾರ್ ಹೆಡೆ, ರವಿಕುಮಾರ ಮಠಪತಿ, ಪ್ರಶಾಂತ ಚಿಮಕೋಡೆ, ಸೋಮನಾಥ ಮಠಪತಿ, ಸಚಿನ್ ಸ್ವಾಮಿ, ಭರತ್ ಸ್ವಾಮಿ, ಸಂಗಮೇಶ, ಆಕಾಶ್, ಅನಿಲ್ ಸ್ವಾಮಿ, ಪರಮೇಶ್, ಗುಂಡಪ್ಪ ಸೇರಿದಂತೆ ಇತರೆ ಯುವಕರು ಉಪಸ್ಥಿತರಿದ್ದರು.