Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ವಡಗಾಂದ(ದೆ) ನಲ್ಲಿ ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ

ನೀರು ಸಕಲ ಜೀವಿಗಳ ಅವಿಭಾಜ್ಯ ಅಂಗ: ಲಕ್ಷ್ಮಣರಾವ ಬುಳ್ಳಾ

ಔರಾದ: ತಾಲೂಕಿನ ವಡಗಾಂವ (ದೆ) ನಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ ಅವರ ನೇತೃತ್ವದಲ್ಲಿ ಬೇಸಿಗೆ ಕಾಲದಲ್ಲಿ ದಣಿದವರಿಗೆ ಸಾರ್ವಜನಿಕರಿಗೆ ಉಚಿತವಾಗಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ನಿಡಲಾಯಿತ್ತು.

ಈ ಸಂದರ್ಭದಲ್ಲಿ ಮುಖಂಡ ಲಕ್ಷ್ಮಣರಾವ ಬುಳ್ಳಾ ಅವರು ಮಾತನಾಡಿ ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ.ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ.ಈ ಸಮಯದಲ್ಲಿ ಮನುಷ್ಯನಿಗೆ ಹೆಚ್ಚು ಅನುಕೂಲಕರವಾಗಿರಬೇಕಾಗಿದ್ದು.ಶುದ್ಧ ಕುಡಿಯುವ ನೀರು ಮನುಷ್ಯನಿಗೆ ಊಟಕ್ಕಿಂತ ನೀರು ಅತಿ ಅವಶ್ಯಕ ಆಗಿದೆ ಆದ ಕಾರಣ ವಡಗಾಂವ ನಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ಮಡಿಕೆ ಮೂಲಕ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ವೈದ್ಯಾಧಿಕಾರಿ ಸಿದ್ದಾರಡ್ಡಿ ಮಾತನಾಡಿ ನೀರು ಮೂಲಭೂತ ಅವಶ್ಯಕತೆಯಾಗಿದೆ ಮತ್ತು
ಜೀವನ ನಿರ್ವಹಣೆಗೆ ಪ್ರಮುಖ ಸಂಪನ್ಮೂಲವಾಗಿದೆ.
ನೀರಿನ ಗುಣಮಟ್ಟದಲ್ಲಿನ ಕುಸಿತವು ಮಾನವರ
ಆರೋಗ್ಯ ಮತ್ತು ಪರಿಸರ ವ್ಯವಸ್ಥೆಗೆ
ಅಪಾಯವನ್ನುಂಟುಮಾಡುತ್ತದೆ.
ಕುಡಿಯಲು ಶುದ್ಧ ನೀರು ಪೂರೈಕೆ. ವ್ಯಕ್ತಿ ವಾಸಿಸುವ ಸ್ಥಳವು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿರಬೇಕು. ಇಂತಹ ನೈರ್ಮಲ್ಯ ಅಭ್ಯಾಸಗಳು ವ್ಯಕ್ತಿಯನ್ನು ರೋಗಗಳಿಂದ ದೂರವಿಡುತ್ತವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಡಾ ಸಿದ್ದಾರೆಡ್ಡಿ,ವೆಂಕಟರಾವ, ಫಿರೋಜ್, ಮಹೇಂದ್ರಸಿಂಗ್, ಶಿವಕುಮಾರ, ಶೇಷರಾವ, ಶಿವಕುಮಾರ ಸೊರಳ್ಳೆ,ಜಿತೇಂದ್ರ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.