Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಅನ್ನೋ ಹಾಗೆ.. ಈ ಬಿಟ್ ಕಾಯಿನ್ ಅನ್ನ ಕಂಡು ಹಿಡಿದ ಸತೋಷಿ ನಾಕಾಮೊಟೊ ಅನ್ನೋ ಪುಣ್ಯಾತ್ಮ ಯಾರಪ್ಪ? ಅನ್ನೋ ಪ್ರಶ್ನೆಗೂ 14 ವರ್ಷಗಳಿಂದಲೂ ಉತ್ತರವೇ ಸಿಗ್ತಿರಲಿಲ್ಲ.. ಈಗ ಅದ್ಯಾರು ಅನ್ನೋದಕ್ಕೆ ಸಿಕ್ಕಿದೆ ಉತ್ತರ..!

ಸತೋಷಿ ನಾಕಾಮೊಟೊ ಯಾರು? ಅನ್ನೋ ಪ್ರಶ್ನೆಗೂ ಉತ್ತರ ಕೊನೆಗೂ ಸಿಕ್ಕೇ ಬಿಟ್ಟಿತಾ? ಅನ್ನೋ ಪ್ರಶ್ನೆಯನ್ನ ಈಗ ಎಲಾನ್ ಮಸ್ಕ್ ಹುಟ್ಟುಹಾಕಿದ್ದಾರೆ. ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ, ಟೆಸ್ಲಾ ಓನರ್, ಸ್ಟಾರ್ ಲಿಂಕ್ ಅನ್ನೋ ತನ್ನದೇ ಇಂಟರ್ನೆಟ್ ವ್ಯವಸ್ಥೆ ಹೊಂದಿರೋ ಈ ಎಲಾನ್ ಮಸ್ಕ್ ಮಾಡಿರೋ ಟ್ವೀಟ್ ಒಂದು ಈಗ ಇಡೀ ವಿಶ್ವದಲ್ಲೇ ಟ್ರೆಂಡ್ ಸೃಷ್ಟಿ ಮಾಡಿದೆ.

ಏನಿದು ಬಿಟ್​ ಕಾಯಿನ್ ಅಥವಾ ಕ್ರಿಪ್ಟೋ ಕರೆನ್ಸಿ?

ಕ್ರಿಪ್ಟೋ ಕರೆನ್ಸಿ ಅಂದರೆ ಫಿಸಿಕಲ್ ಮನಿ ಅಥವಾ ನಾವು ಮುಟ್ಟಬಹುದಾದಂಥ.. ನಮ್ಮ ಪಾಕೆಟ್​ನಲ್ಲಿ ಇಟ್ಟುಕೊಂಡು ತಿರುಗಬಹುದಾದಂಥ ಹಣವಲ್ಲ. ಬದಲಿಗೆ ಡಿಜಿಟಲಿ ಜನರೇಟ್ ಮಾಡಿದ ಕರೆನ್ಸಿ ಇರುತ್ತೆ.. ಅಂದ್ರೆ ಕ್ರಿಪ್ಟೋಗ್ರಾಫಿ ಅನ್ನೋ ಸಾಫ್ಟ್​ವೇರ್​ನಿಂದ ಇದು ಜನರೇಟ್ ಆಗಿರುತ್ತೆ. ಹಾಗಂತ ಎಲ್ಲರೂ ಇದನ್ನು ಜನರೇಟ್ ಮಾಡೋಕೆ ಆಗೋದಿಲ್ಲ.. ರೆಜಿಸ್ಟರ್ಡ್​ ಕಂಪನಿಗಳು ಇದನ್ನು ಹುಟ್ಟುಹಾಕಬಹುದು.. ಆದ್ರೆ ಇದಕ್ಕೆ ಮಿತಿ ಇರುತ್ತೆ.. ಮನಸ್ಸಿಗೆ ಬಂದಷ್ಟು ತಯಾರು ಮಾಡಲು ಸಾಧ್ಯವಿಲ್ಲ. ಪ್ರತಿ ಡಿಜಿಟಲ್ ಕರೆನ್ಸಿಗೂ ಒಂದು ಮಿತಿ ಇರುತ್ತೆ.. ಉದಾಹರಣೆಗೆ ಹೇಳೋದಾದ್ರೆ ಇಡೀ ಜಗತ್ತಿನಲ್ಲಿ ಕೇವಲ 22 ಲಕ್ಷ ಬಿಟ್​ ಕಾಯಿನ್​ ಅನ್ನು ಮೈನ್ ಮಾಡಬಹುದು.. ಸುಮಾರು 40 ಸಾವಿರ ಸೂಪರ್​ ಕಂಪ್ಯೂಟರ್​ಗಳು ಇದನ್ನು ಜನರೇಟ್ ಮಾಡುತ್ತೆ.. ಬೇಡಿಕೆ ಬಂದ ಹಾಗೆ ಜೊತೆಗೆ ಗ್ರಾಹಕರು ಮೈನಿಂಗ್​ ಮಾಡಿದ ಹಾಗೆ ಬಿಟ್​ ಕಾಯಿನ್ ಜನರೇಟ್ ಆಗುತ್ತೆ.. ಜೊತೆಗೆ ಬೇಡಿಕೆ ಆಧಾರದಲ್ಲಿ ಅದರ ಮೌಲ್ಯ ನಿರ್ಧರಿತವಾಗುತ್ತೆ.. ಆ ಮೌಲ್ಯ ಹೆಚ್ಚಾಗಲೂ ಬಹುದು, ಕುಸಿಯಲೂ ಬಹುದು? ಹಾಗಿದ್ರೆ ಈಗ್ಯಾಕೆ ಇದರ ಚರ್ಚೆ?

ಬಿಟ್​ ಕಾಯಿನ್ ಹುಟ್ಟಿದ್ದು ಹೇಗೆ? ಅದನ್ನು ಕಂಡು ಹಿಡಿದಿದ್ದು ಯಾರು?

2008, ಆಗಸ್ಟ್​ 18 ರಂದು bitcoin.org ಅನ್ನೋ ವೆಬ್​ಸೈಟ್ ಒಂದು ರೆಜಿಸ್ಟರ್​ ಆಗಿತ್ತು. ಅಕ್ಟೋಬರ್ 31, 2008ರಲ್ಲಿ ಸತೋಷಿ ನಾಕಾಮೊಟೊ ಅನ್ನೋ ಅನಾಮಧೇಯ ಹೆಸರೊಂದು : A Peer-to-Peer Electronic Cash System ಅನ್ನೋ ಸಂಶೋಧನಾ ಪೇಪರ್​ ಅನ್ನು ಕ್ರಿಫ್ಟೋಗ್ರಾಫಿ ಮೇಲಿಂಗ್​ ಲಿಸ್ಟ್​ನಲ್ಲಿ ಪಬ್ಲಿಷ್ ಮಾಡಿತ್ತು. ಸತೋಷಿ ನಾಕಾಮೊಟೊ ಬಿಟ್​ಕಾಯಿನ್ ಸಾಫ್ಟ್​ವೇರ್​ ಅನ್ನು ಓಪನ್​ ಸೋರ್ಸ್​ ಕೋಡ್​​ ಮಾಡಿದ್ದಲ್ಲದೇ 2009ರಲ್ಲಿ ರಿಲೀಸ್​ ಮಾಡಿದ್ರು.. ಬಳಿಕ 2014-15ರ ನಂತರದ ಅವಧಿಯಲ್ಲಿ ಇದು ಜನರ ಗಮನ ಸೆಳೆಯಲು ಆರಂಭಿಸಿತ್ತು. ಬಳಿಕ ಅದರ ಬೆಳವಣಿಗೆ ದರ ಮಾತ್ರ ಯಾರೂ ಊಹಿಸಲಾಗದ ಹಂತಕ್ಕೆ ಬಂದು ತಲುಪಿದೆ.. ಇಂದು ಬಿಟ್​ ಕಾಯಿನ್​ನ ಒಟ್ಟು ಮೌಲ್ಯ ಸುಮಾರು 880 ಕೋಟಿ ಡಾಲರ್ ಅಂದ್ರೆ ಸುಮಾರು 70 ಸಾವಿರ ಕೋಟಿ ರೂಪಾಯಿಗಳಿಗೆ ತಲುಪಿದೆ. ಇಷ್ಟಾದರೂ ಸತೋಷಿ ನಾಕಾಮೊಟೊ ಅನ್ನೋದು ವ್ಯಕ್ತಿ ಹೆಸರಾ? ಸಂಸ್ಥೆ ಹೆಸರಾ? ವ್ಯಕ್ತಿಗಳ ಹೆಸರಾ? ತಂಡದ ಹೆಸರಾ? ಅನ್ನೋದು ಮಾತ್ರ ಇನ್ನೂ ಬಹಿರಂಗವಾಗದೇ ಇರೋದು ಕುತೂಹಲ ಕೆರಳಿಸುತ್ತಲೇ ಇದೆ.. ಆ ಕುತೂಹಲಕ್ಕೆ ತೆರೆ ಎಳೆಯುವಂಥ ಪ್ರಯತ್ನವನ್ನು ಈಗ ಎಲಾನ್ ಮಸ್ಕ್ ಮಾಡಿದ್ದಾರೆ.

ಯಾರಿದು ಸತೋಷಿ ನಾಕಾಮೊಟೊ?

ಬಿಟ್​ ಕಾಯಿನ್ ಕಂಡು ಹಿಡಿದ ಸತೋಷಿ ನಾಕಾಮೊಟೊ ಯಾರು? ಅನ್ನೋ ಪ್ರಶ್ನೆ ಸುಮಾರು 14 ವರ್ಷಗಳಿಂದ ಕಾಡುತ್ತಲೇ ಇದೆ. ಈ ಹದಿನಾಲ್ಕು ವರ್ಷ ವನವಾಸ ಈಗ ಕಂಪ್ಲೀಟ್ ಆದ ಹಾಗೆ ಆಗಿದೆ. ಎಲಾನ್​ ಮಸ್ಕ್ ಪ್ರಕಾರ ಈ ಸತೋಷಿ ನಾಕಾಮೊಟೊ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಗಿದ್ದರೆ ಈ ಸತೋಷಿ ನಾಕಾಮೊಟೊ ಅನ್ನೋರು ಯಾರು?

ಇಷ್ಟು ದಿನ ಬಹುತೇಕರು ಸತೋಷಿ ನಾಕಾಮೊಟೊ ಅನ್ನೋ ವ್ಯಕ್ತಿ ಜಪಾನೀಸ್ ಆಗಿರಬಹುದು. ಅದೂ ಅಮೆರಿಕಾದಲ್ಲಿರೋ ವ್ಯಕ್ತಿ ಇಂಥ ಹೆಸರಲ್ಲಿ ಕಾರ್ಯ ನಿರ್ವಹಿಸುತ್ತಿರಬಹುದು.. ಅನ್ನೋ ಗುಮಾನಿ ಮೂಡುತ್ತಿತ್ತು. ಆದ್ರೆ ಈಗ ಎಲಾನ್ ಮಸ್ಕ್ ಹೇಳಿರೋ ಪ್ರಕಾರ ನೊಡಿದ್ರೆ ಇದು ವ್ಯಕ್ತಿಯೂ ಅಲ್ಲ.. ತಂಡವೂ ಅಲ್ಲ.. ಬದಲಿಗೆ ನಾಲ್ಕು ಬೃಹತ್ ಮಲ್ಟಿ ನ್ಯಾಷನಲ್ ಕಂಪನಿಗಳ ಮೊದಲ ಹೆಸರು.. ಅಂದ್ರೆ ಈ ನಾಲ್ಕು ಕಂಪನಿಗಳೇ ಬಿಟ್​ ಕಾಯಿನ್ ಜನಕರು ಅನ್ನೋದು ಸ್ಪಷ್ಟವಾಗುತ್ತೆ.

ಯಾವವು ಆ ನಾಲ್ಕು ಕಂಪನಿ?

ಎಲಾನ್ ಮಸ್ಕ್ ಟ್ವೀಟ್ ಅನ್ನ ಗಮನಿಸಿದ್ರೆ ಸ್ಯಾಮ್​ಸಂಗ್, ತೋಷಿಬಾ, ನಾಕಾಮಿಚಿ ಹಾಗೂ ಮೊಟೊರೊಲಾ ಕಂಪನಿಗಳೇ ಆ ಅನಾಮಧೇಯ ಸತೋಷಿ ನಾಕಾಮೊಟೊನಾ? ಅನ್ನೋ ಗುಮಾನಿ ಬಲಗೊಳ್ಳುತ್ತೆ. ಯಾಕಂದ್ರೆ ಆ ಟ್ವೀಟ್ ಪ್ರಕಾರ, SAMSUNG ನಿಂದ SA.. TOSHIBA ದಿಂದ TOSHI, NAKAMICHI ಇಂದ NAKA ಹಾಗೂ MOTOROLA ದಿಂದ MOTO ಆಯ್ದು ಈ ಹೆಸರು ಅಂದ್ರೆ SATOSHI NAKAMOTO ಅನ್ನು ಸೃಷ್ಟಿಸಲಾಗಿದೆ. ಎಸ್​​, ಇವರೇ ಬಿಟ್​ ಕಾಯಿನ್ ಜನಕರ ಅನ್ನೋ ಪ್ರಶ್ನೆ ಈಗ ಇಡೀ ವಿಶ್ವಕ್ಕೇ ದಿಗಿಲು ಮೂಡಿಸಿದ್ದು.. ಟ್ರೆಂಡಿಂಗ್ ವಿಷಯವಾಗಿದೆ.

Bitcoin full form