Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸ್ವಾಮೀಜಿಯವರ ಜನ್ಮದಿನಾಚರಣೆ
ಔರಾದ ಪಟ್ಟಣದ ಕನ್ನಡಾಂಬೆ ವೃತ್ತ ಬಳಿ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಶ್ರೀ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮ ದಿನೋತ್ಸವದ ಅಂಗವಾಗಿ ಪಟ್ಟಣದ ಕನ್ನಡಾಂಬೆ ವೃತ್ತ ಬಳಿ ಅವರ ಭಾವ ಚಿತ್ರಕ್ಕೆ ಪೂಜೆ ಮಾಡಿ ನಮನ ಸಲ್ಲಿಸಿ ದಾಸೋಹ ವ್ಯವಸ್ತೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅಥಿತಿಯಾಗಿ ನೂತನ ಪ ಪಂಚಾಯತ್ ಮುಖ್ಯಧಿಕಾರಿ ಶಿವಕುಮಾರ ಘಾಟೆ, ಔರಾದ ಪೊಲೀಸ್ ಠಾಣೆಯ ಪಿ ಎಸ್ ಐ ಮಡಿವಾಳಪ್ಪ ಬಾಗೊಡಿ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಹಾಗೂ ಶ್ರೀ ಮಠದ ಹಳೆಯ ವಿದ್ಯಾರ್ಥಿ ಕೈಲಾಸಪತಿ ಕೇದಾರೆ,ಗಜಾನಂದ ಮಳ್ಳಾ,ಸೂರ್ಯಕಾಂತ ಎಕಲಾರ, ಇವರು ಶ್ರೀ ಮಠದಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.ಪ್ರತಿ ವರ್ಷ ಶ್ರೀ ಗಳ ಜನ್ಮದಿನದಂದು ಪ್ರಸಾದ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾದರು.ಈ ಸಂದರ್ಭದಲ್ಲಿ ಕಸಾಪ ನಿಕಟ ಪೂರ್ವ ಅದ್ಯಕ್ಷ ಜಗನಾಥ ಮುಲಗೆ,ತಾಲೂಕು ಕಸಾಪ ಅದ್ಯಕ್ಷ ಶಾಲಿವಾನ ಉದಗಿರೆ,ಶಿವಾಜಿರಾವ ಪಾಟೀಲ್ ಮುಂಗನಾಳ,ಮಲ್ಲಿಕಾರ್ಜುನ ಟಂಕಸಾಲೆ,ಮಹಾದೇವ ಚಿಟಗಿರೆ,ಶಿವಾಜಿ ಚಿಟಗಿರೆ,ಬಾಲಾಜಿ ಅಮರವಾಡಿ,ಕೇರಬಾ ಪವಾರ,ಅಶೋಕ ಶೆಂಬೆಳ್ಳಿ, ಪಂಡರಿ ಅಡೆ,  ಪ್ರಶಾಾಂತ, ಶಿವಾಜಿ ಚವ್ಹಾಣ, ಹಾಗೂ  ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಅದೇರಿತಿ ಈ ಸಂದರ್ಭದಲ್ಲಿ ನೂತನವಾಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಯಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ ಘಾಟೆ ಮತ್ತು ನೂತನವಾಗಿ ಔರಾದ ಪೊಲೀಸ್ ಠಾಣೆಯ ಪಿಎಸ್ಐ ಯಾಗಿ ಅಧಿಕಾರ ವಹಿಸಿಕೊಂಡ ಮಡಿವಾಳಪ್ಪಾ ಬಾಗೊಡಿ ಅವರಿಗೂ ಹಾಗೂ ನೂತನ ತಾಲೂಕು ಕಸಾಪ ಅದ್ಯಕ್ಷ ಶಾಲಿವಾನ ಉದಗಿರೆ ಅವರಿಗೂ ಶ್ರೀ ಮಠದ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.