Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

14 ವರ್ಷದ ಅವಳಿ ಸಹೊದರರು ಸಾವಿರ ಕೀ ಮೀ ಸೈಕಲ್ ಯಾತ್ರೆ ಸಚಿವರಿಂದ ಚಾಲನೆ*

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಔರಾದ ತಾಲೂಕಿನ ಕೋಳ್ಳುರ ಗ್ರಾಮದ ಅರುಣ ಹಾಗೂ ಕರುಣ ರ‍್ಯಾಕಲೆ ಅವಳಿ ಸಹೋದರರು ಕರ್ನಾಟಕದ ಕಿರಿಟ ಬೀದರ ಜಿಲ್ಲೆಯ ಔರಾದ ಪಟ್ಟಣದ ಸುಕ್ಷೇತ್ರ ಶ್ರೀ ಅಮರೇಶ್ವರ ದೇವಸ್ಥಾನದಿಂದ ಕರ್ನಾಟಕದ ಪಾದ ಚಾಮರಾಜನಗರದ ಶ್ರೀ ಮಲೆ ಮಹದೇಶ್ವರದ ವರೆಗೆ ಕೈಗೊಂಡ *ಸೈಕಲ್ ಯಾತ್ರೆ* ಕಾರ್ಯಕ್ರಮವನ್ನು ಮಾನ್ಯ ಪಶುಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ನಿವೃತ್ತ ಯೊಧರಿಗೆ ಸೂರ್ಯಕಾಂತ ರ್ಯಾಕಲೆ ಪರಿವಾರದಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಸಾಹಿತಿ ಡಾ ಮನ್ಮಥ ಡೊಳೆ ಮಾತನಾಡಿ ಇಂತಹ ಬೇಸಿಗೆ ಕಾಲದಲ್ಲಿ ಸಾವಿರ ಎರಡನೂರು ಕೀ ಮಿ ಸೈಕಲ್ ಮೂಲಕ ತಲುಪುವದು ಸಾಮಾನ್ಯ ಮಾತಲ್ಲ ಇವತ್ತು ರ್ಯಾಕಲೆ ಪರಿವಾರದ 14ವರ್ಷದ ಅರುಣ ರಾಕಲೆ ಹಾಗೂ ಕರುಣ ರಾಕಲೆ ಅವಳಿ ಸಹೋದರರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು .ನಮ್ಮ ತಾಲೂಕಿಗೆ ಹೆಮ್ಮೆ ಪಡುವಂತ ಸಂಗತಿಯಾಗಿದೆ ಅವರ ಪಯಣ ಸುಖಕರ ವಾಗಲಿ ಅಮರೇಶ್ವರರ ಕೃಪೆ ಅವರ ಮೇಲೆ ಸದಾ ಇರುತ್ತೆ ಅವರ ಪಾಲಕರು ಇಂತಹ ಮಕ್ಕಳಿಗೆ ಹೆತ್ತವರು ದೇಶಪ್ರೇಮಿಗಳು ಎಂದರು.

ಅದೇರಿತಿ ಮಕ್ಕಳಿಗೆ ಶುಭಹಾರೈಸಿದ ಚಿಕ್ಕಪ್ಪ ಸೂರ್ಯಕಾಂತ ರಾಕಲೆ,ಶಿವಕಾಂತ ರಾಕಲೆ,ವಿಶ್ವನಾಥ ಸ್ವಾಮಿ ಕೊಳ್ಳುರ.

ಅದೇರಿತಿ ಖ್ಯಾತ ವೈದ್ಯ ಡಾ ಕಲ್ಲಪ್ಪಾ ಉಪ್ಪೆ ಮಾತನಾಡಿ ರಾಕಲೆ ಪರಿವಾರದ ಈ ಎರಡು ಸಹೋದರರು ತೆಗೆದುಕೊಂಡ ತೀರ್ಮಾನ 75 ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕ್ಕೆ ಯಶಸ್ಸು ನೀಡಿದೆ. ಈ ಎರಡು ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಲು ಅವರು ಕೈಗೊಂಡ ಸೈಕಲ್ ಯಾತ್ರೆ ಸುಖಕರವಾಗಲಿ ಎಂದು ಡಾ ಕಲ್ಲಪ್ಪಾ ಉಪ್ಪೆ ಹುರುದುಂಬಿಸಿದರು. ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅದ್ಯಕ್ಷ ರಾಮಶೇಟ್ಟಿ ಪನ್ನಾಳೆ,ಬಂಡೆಪ್ಪಾ ಕಂಟೆ,ಶಿವರಾಜ ಅಲಮಾಜೆ,ಅಶೋಕ ಅಲಮಾಜೆ,ಸಮಾಜ ಸೇವಕ ಗುರನಾಥ ವಡ್ಡೆ,ಶಿವಕುಮಾರ ಘಾಟೆ, ಜಗನಾಥ ಮುಲಗೆ,ಅಮೃತರಾವ ಬಿರಾದಾರ,ಹಾವಪ್ಪಾ ದ್ಯಾಡೆ, ಬಸವರಾಜ ಹಳ್ಳೆ,ಅಶೋಕ ಶೆಂಬೆಳ್ಳಿ, ಆನಂದ ದ್ಯಾಡೆ, ರಿಯಾಜ ಪಾಶಾ ,ಅನೀಲ ಮೇತ್ರೆ,ರಮೇಶ ವಾಘಮಾರೆ ಹಾಗೂ ಮುಖಂಡರು, ಹೋರಾಟಗಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ :- *ಅಂಬಾದಾಸ ನಳಗೆ ಔರಾದ*