Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ:ಬೆಲ್ದಾಳ ಗ್ರಾಮದಲ್ಲಿ ಯುವರತ್ನ ಕಾರ್ಯಕರ್ತರಿಂದ ಭಜರಂಗಿಯ ಅಂತ್ಯಕ್ರಿಯೆ

ಶುಕ್ರವಾರ ಬೆಳಗ್ಗೆ ಮರಣ ಹೊಂದಿದ ಭಜರಂಗಿಯನ್ನು ಕಂಡ ಮಲಪ್ಪಾಗೊಂಡ ಅವರು ಯುವರತ್ನ ಯುವಕ ಸಂಘದ ಅಧ್ಯಕ್ಷರಾದ ನವೀನರೆಡ್ಡಿವರನ್ನು ತಿಳಿಸಿದಾಗ ಅವರು ತಮ್ಮ ಸಂಘಟನೆಯ ಕಾರ್ಯಕರ್ತರನ್ನು ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿ ಮರಣ ಹೊಂದಿದ ಭಜರಂಗಿಯನ್ನು ಬಾಜಾ ಭಜಂತ್ರಿಯಿಂದ ಮೆರವಣಿಗೆ ಮಾಡುತ್ತಾ ಗ್ರಾಮದ ಹನುಮಾನ್ ಮಂದಿರಕ್ಕೆ ತಂದು ಅಂತ್ಯಕ್ರಿಯೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ತಂದು ಒಂದು ಮನುಷ್ಯನ ಅಂತ್ಯಕ್ರಿಯೆ ಯಾವ ರೀತಿ ನಡೆಯುತ್ತಿದೆಯೋ ಅದೇ ರೀತಿ ಭಜರಂಗಿಯ ಅಂತ್ಯಕ್ರಿಯೆಯು ಅತಿ ವಿಜೃಂಭಣೆಯಿಂದ ಗ್ರಾಮದ ಓಣಿಗಳ ಮುಖಾಂತರ ಮೆರವಣಿಗೆ ಮಾಡಿ ಹನುಮಾನ್ ಮಂದಿರ ಪಾಕದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.ಈ ಸಂದರ್ಭದಲ್ಲಿ ,ನವೀನರೆಡ್ಡಿ,ಗಜಾನಂದರೆಡ್ಡಿ,ವಿಠಲರೆಡ್ಡಿ,ಗಜಾನಂದ ವಗ್ಗೆ,ನವೀನ್,ಅಂಕೋಶ ಮತ್ತು ಗ್ರಾಮದ ಎಲ್ಲಾ ಗಣ್ಯರು ಉಪಸ್ಥಿತರಿದ್ದರು.