Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ರೈತರ ಹೊಲದಲ್ಲಿ ಕ್ಷೇತ್ರೋತ್ಸವ

       ದಿನಾಂಕ :- 09 – 04 – 2022 ರಂದು ಎಫ್.ಎಂ.ಸಿ. ಕಂಪನಿಯ ವತಿಯಿಂದ ಶ್ರೀ ಮುಸ್ತಫಾ ಲಾಡಜೀ ಮುನಂದಗಾಂವ ತಾ.ಹುಮನಾಬಾದ ಜಿ.ಬೀದರ ಈ ರೈತರ ಜಮೀನಿನಲ್ಲಿ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ರೈತ ಮುಸ್ತಫಾ ಇವರು ಸುಮಾರು ವರ್ಷಗಳಿಂದ ತೋಟಗಾರಿಕೆ ಬೆಳೆ ಕಲ್ಲಂಗಡಿ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ, ಕೀಟ ಹಾಗೂ ರೋಗ ಬಾಧೆಯಿಂದ ಸರಾಸರಿ 22 ರಿಂದ 25 ಟನ್ ಇಳುವರಿ ಪಡೆಯುತಿದ್ದರು. ಈ ರೈತ ಎಫ್.ಎಂ.ಸಿ, ಬೇನಿವಿಯಾ ಕೀಟನಾಶಕವನ್ನು ಬಳಸಿ ಪ್ರಸಕ್ತ ಸಾಲಿನಲ್ಲಿ 32 ರಿಂದ 35 ಟನ್ ಕಲ್ಲಂಗಡಿ ಇಳುವರಿ ಪಡೆದು ಯಶಸ್ವಿಯಾದರು ಹಾಗೂ ಒಳ್ಳೆ ದರವು ಕೂಡ ಸದರಿಯವರಿಗೆ ಲಭಿಸಿದೆ. TH ವಿಷಯವನ್ನು ಸದರಿ ರೈತರು ಈ ಕ್ಷೇತ್ರೋತ್ಸವದಲ್ಲಿ ತಮ್ಮ ವಿಚಾರವನ್ನು ವ್ಯಕ್ತಪಡಿಸಿದರು

.
          ಈ ಕ್ಷೇತ್ರೋತ್ಸವದ ಉದ್ಘಾಟನೆಯನ್ನು ಶ್ರೀ ಕೆ.ಬಿ. ಸ್ವಾಮಿ ಆಗ್ರೊ ಏಜೆನ್ಸಿ ಹುಮನಾಬಾದ ರವರು ಯಶಸ್ವಿಯಾಗಿ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಕೃಷ್ಣಾ ಎಕಲುರೆ, ರೀಜನಲ್ ಮಾರ್ಕೆಟಿಂಗ್ ಮ್ಯಾನೇಜರ್, ಎಫ್.ಎಂ.ಸಿ ರವರು ವಿಷಯ ಮಂಡಿಸಿದರು. ಮಲ್ಲಿಕಾರ್ಜುನ ಪಟ್ಟಣ ಮಾರ್ಕೆಟಿಂಗ್ ಸಂಯೋಜಕರು ಕಾರ್ಯಕ್ರಮದ ಸಂಚಾಲನ ಮಾಡಿದರು. ಯಂಕರೆಡ್ಡಿ , ಮಾರ್ಕೆಟಿಂಗ್ ಸಂಯೋಜಕರು ಹೆಚ್ಚಿನ ಇಳುವರಿಯ ಕುರಿತು ಮಾಹಿತಿ ನೀಡಿದರು. ಅಮಿತ ಜೀರ್ಗೆ ಸೇಲ್ಸ್ ಆಫೀಸರ್, ರತಿಕಾಂತ ಹುಗ್ಗೆ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿಗಳು ಬಸವರಾಜ ಸ್ವಾಮಿ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮವನ್ನು ಸಂಯೋಜಿಸಿದರು . ಹಾಗೂ ರೈತ ಸಂಘದ ಮುಖಂಡರು, ಯುವ ರೈತ ಸತೀಶ ರಾಂಪರ ವಕೀಲರು, ಸತೀಶ ಆನೀಲಕುಮಾರ ಹಿಂದೊಡ್ಡ ಉಪಸ್ಥಿತರಿದ್ದರು. ಹಾಗೂ ಸುಮಾರು 250 ಕ್ಕೂ ಹೆಚ್ಚು ತೋಟಗಾರಿಕೆ ರೈತರು ಈ ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡರು.