Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೋರ್ಗಿ ಗ್ರಾಮದಲ್ಲಿ ಕೋಲಾಟ ಆಡುವುದರ ಮೂಲಕ ಹನುಮಾನ ಜಯಂತಿ ಆಚರಣೆ

ಔರಾದ: ಹಿಂದಿನ ಸಾಂಪ್ರದಾಯಿಕ ಕೋಲಾಟ ಇಂದಿನ ದಿನಮಾನದಲ್ಲಿ ‌ಮರಿಚೀಕೆ‌ ಆಗುತ್ತಿರುವ ಸಂದರ್ಭದಲ್ಲಿ ತಾಲೂಕಿನ ಬೋರ್ಗಿ (ಜೆ) ಗ್ರಾಮದಲ್ಲಿ ಗ್ರಾಮದ ಹಿರಿಯರು ಹಾಗೂ ಯುವಕರು ಸೇರಿ ಜಾನಪದ ಮತ್ತು ದೇಶಭಕ್ತಿ ಗೀತೆಗಳು ಹಾಡುವುದರ ಮೂಲಕ ಕೋಲಾಟ ಪ್ರದರ್ಶನ ಮಾಡಿದರು.

ಗ್ರಾಮದ ಜನತೆ ಯಾವುದೇ ಜಾತಿ-ಭೇಧ ಮಾಡದೇ ಗ್ರಾಮದ ಎಲ್ಲಾ ಧರ್ಮದ ಜನರು ಪರಸ್ಪರ ಒಗ್ಗೂಡಿ ನಾವೇಲ್ಲರೂ ಒಂದೇ ಎಂದು ಸಾರುವುದರ ಮೂಲಕ ಕೋಲಾಟ ಆಡಿರುವುದು ಕಂಡು ಗ್ರಾಮದ ಜನತೆ ‌ಮನರೊಂಜನೆ‌ ಮಾಡುವುದರ ಮೂಲಕ ಹನುಮಾನ ಜಯಂತಿ ಆಚರಿಸಿದರು.
ಗ್ರಾಮದ ಹಿರಿಯರು ಪೂಜ್ಯರ ಸಾನಿಧ್ಯದಲ್ಲಿ ನಸುಕಿನ ಜಾವ ಹನುಮಾನ ಮೂರ್ತಿಗೆ‌ ಅಭಿಷೇಕ ಹಾಗೂ ಪೂಜೆ ‌ನೇರವೇರಿಸಿದ್ದರು.
ನಂತರ ವಿಶೇಷ ಪ್ರಸಾದ ವ್ಯವಸ್ಥೆ ಮಾಡಿ ಗ್ರಾಮದ ಎಲ್ಲಾ ಧರ್ಮದ ಜನರಿಗೆ ಪ್ರಸಾದ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮಹಾದೇವ ಕೌಟಗೆ ಪತ್ರಕರ್ತರೊಂದಿಗೆ ಮಾತನಾಡಿ ಇಂದಿನ ದಿನಗಳಲ್ಲಿ ಯುವಕರಲ್ಲಿ ಸಾಂಪ್ರದಾಯಿಕ ಕಲೆ ದೂರವಾಗಿದೆ. ಕೇವಲ ಸಾಮಾಜಿಕ ಜಾಲತಾಣಕ್ಕೆ ಬಲಿಯಾಗಿದ್ದಾರೆ, ಆದರೆ ಬೋರ್ಗಿ ಗ್ರಾಮದಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ಕೋಲಾಟ ಹಾಗೂ ಜಾನಪದ ಹಾಡುಗಳನ್ನು ಕಲಿತುಕೊಂಡ ಸಾಂಪ್ರದಾಯಿಕ ಕಲೆಗೆ ಬೆಲೆ ನೀಡಿ ಇತರರಿಗೆ ಪ್ರೇರಣೆ ಆಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಚಂದ್ರಪ್ಪಾ ಗೋರನಾಳೆ, ತುಳಸಿರಾಮ ಕೋಳಿ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ನೇಳಗೆ, ಶರಣಪ್ಪಾ ನೇಳಗೆ, ಧನರಾಜ ಜೈನಾಪೂರೆ, ಗಣಪತಿ ಕಾಂಬ್ಳೆ, ಮುಗ್ತಪ್ಪಾ, ಶಾಮರಾವ ಕಳಸೆ, ಬಸಯ್ಯಾ ಸ್ವಾಮಿ, ಯುವಕರಾದ ರೇವಣಪ್ಪಾ, ಲೋಕೇಶ, ಉಮಾಕಾಂತ, ಕಲ್ಪಪ್ಪಾ ಕಾಂಬ್ಳೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.