Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love
ಚಿತ್ರ:
ಔರಾದ್ ತಾಲ್ಲೂಕಿನ ತುಳಜಾಪೂರ ಗ್ರಾಮದ ಭವಾನಿ ಮಾತೆ ಮಂದಿರ

ಬೀದರ್: ಔರಾದ್ ತಾಲ್ಲೂಕಿನ ತುಳಜಾಪೂರದಲ್ಲಿ ಭವಾನಿ ಮಾತೆ ಜಾತ್ರಾ ಮಹೋತ್ಸವ ಏಪ್ರಿಲ್ 16 ಹಾಗೂ 17 ರಂದು ನಡೆಯಲಿದೆ.


ಜಾತ್ರೆ ನಿಮಿತ್ತ ಗ್ರಾಮದ ಭವಾನಿ ಮಾತೆ ಮಂದಿರದಲ್ಲಿ ವಿಶೇಷ ಪೂಜೆ, ಮಹಾ ಅಭಿಷೇಕ, ಪ್ರಸಾದ ವಿತರಣೆ, ಪಲ್ಲಕ್ಕಿ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
16 ರಂದು ಬೆಳಿಗ್ಗೆ 7ಕ್ಕೆ ಮಹಾ ಅಭಿಷೇಕ, ಬೆಳಿಗ್ಗೆ 9 ರಿಂದ ಪ್ರಸಾದ ವಿತರಣೆ, ಸಂಜೆ 7ಕ್ಕೆ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ.
ಭವಾನಿ ಮಾತೆ ಜಾತ್ರೆಯು ಸರ್ವ ಧರ್ಮ ಸಮನ್ವಯಕ್ಕೆ ಹೆಸರಾಗಿದೆ. ಗ್ರಾಮ, ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿವಿಧೆಡೆಯ ಸರ್ವ ಧರ್ಮಗಳ ಭಕ್ತರು ಜಾತ್ರೆಗೆ ಬಂದು ಭವಾನಿ ಮಾತೆಗೆ ಪೂಜೆ ಸಲ್ಲಿಸುತ್ತಾರೆ.

ಉದ್ಯೋಗ ಹಾಗೂ ಇತರ ಕಾರಣಗಳಿಂದಾಗಿ ಬೇರೆ ಊರು, ಪಟ್ಟಣ, ನಗರಗಳಲ್ಲಿ ನೆಲೆಸಿರುವ ಗ್ರಾಮದ ಜನ ತಪ್ಪದೇ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಭವಾನಿ ಮಾತೆ ಜಾತ್ರೆಗೆ ಭರದ ಸಿದ್ಧತೆಗಳು ನಡೆದಿವೆ. ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗ್ರಾಮದ ಹಿರಿಯ ಮುಖಂಡರಾದ ಅರವಿಂದ ಪಾರಾ, ಸುಭಾಷ ಪೊಲೀಸ್ ಪಾಟೀಲ, ತಿಪ್ಪೇಶ ವಲ್ಲಾಪುರೆ,ಆರಿಫ್ ಮುಲ್ಲಾ,ಮನವಿ ಮಾಡಿದ್ದಾರೆ.
ಏಪ್ರಿಲ್ 17 ರಂದು ಗ್ರಾಮದಲ್ಲಿ ಹನುಮಾನ ಜಯಂತಿಯೂ ನಡೆಯಲಿದೆ ಎಂದು ತಿಳಿಸಿದ್ದಾರೆ.