Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಬದಲಾವಣೆಯ ನಿರೀಕ್ಷೆ?

ಪ್ರಭು ಚವ್ಹಾಣ ವಿರುದ್ಧ ಕಣಕ್ಕಿಳಿರುವ ಕಾಂಗ್ರೆಸ್ ನಾಯಕರ ನಡುವೆಯೇ ಪೈಪೋಟಿ

ಲಿಂಗಾಯತರು ಮತ್ತು ದಲಿತರು ಈ ಬಾರಿ ಚವ್ಹಾಣಗೆ ಕೈಕೊಡುವ ಸಾಧ್ಯತೆ

ಸ್ಥಳೀಯ ಕಾಂಗ್ರೆಸ್ ಪಕ್ಷದ ನಾಯಕರಿಂದ ಮತ ಗಳಿಕೆಗೆ ಬೇರುಮಟ್ಟದ ಸಿದ್ಧತೆ

ಹಳ್ಳಿಗಳನ್ನೇ ಒಳಗೊಂಡಿರುವ ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಬಿಸಿಲಿನ ಜೊತೆ ಜೊತೆಗೆ ನೀರಿನ ಬರದ ಹಾಗೆ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿನಲ್ಲಿ ಬಿರುಕು ತಳಮಟ್ಟದ ಕಾರ್ಯಕರ್ತರಲ್ಲಿ ಶುರುವಾಗಿದೆ,ಹಾಲಿ ಶಾಸಕ ಪ್ರಭು ಚವ್ಹಾಣ ಮಂತ್ರಿ ಗಿರಿಯಲ್ಲಿ ಬ್ಯುಸಿ ಆಗಿದ್ದಾರೆ,ಕೆಡಿಪಿ ಸಭೆ ಬಿಟ್ಟರೆ ಯಾವ ಅಧಿಕಾರಿಗಳ ಜೊತೆಗೂ ಮಹ್ವತದ ಸಭೆ ನಡೆಸಿಲ್ಲ,ಕಾಂಗ್ರೆಸ್ ಪಕ್ಷ ಕಳೆದ  ಮೂರು ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಸಲಾ ಅಭ್ಯರ್ಥಿಯನ್ನು ಬದಲಾಯಿಸುತ್ತಾ ಬಂದಿದೆ ಅದೇ ಕಾರಣಕ್ಕಾಗಿ ಈ ಬಾರಿ ವಿಜಯಕುಮಾರ ಕೌಡ್ಯಳೆ ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಅಷ್ಟೊಂದು ಲಾಭಿ ಮಾಡುತ್ತಿಲ್ಲ ಅನಿಸುತ್ತಿದೆ,ಇನ್ನೊಂದು ಕಡೆ ಬಂಟಿ ದರಬಾರೆ ಕಾಂಗ್ರೆಸ್ ಡಿಜಿಟಲ್ ಸದಸ್ಯತಾ ಅಭಿಯಾನದಲ್ಲಿ ಅತಿ ಹೆಚ್ಚು ‌ಸದಸ್ಯತ್ವ ಮಾಡಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಕಾರ್ಯಕರ್ತ ಮನ ಗೆದ್ದು ತಾಲೂಕಿನ ತಮ್ಮದೇ ಯುವಕರ ಪಡೆ ಹೊಂದಿದ್ದಾರೆ  ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸಿ ಟಿಕೆಟ್ ಗಾಗಿ ಆಕಾಂಕ್ಷಿಯಾಗಿ ಹೊರಹೊಮ್ಮುತ್ತಿದ್ದಾರೆ.ಕಾಂಗ್ರೆಸ್ ನಾಯಕರಿಗೆ ಬಿಜೆಪಿ ನಾಯಕರುಗಳ ತಪ್ಪುಗಳು ಬಿಟ್ಟರೆ ಪ್ರಚಾರಕ್ಕಾಗಿ ಯಾವ ಅಂಶಗಳು ಸಹ ಅವರ ಹತ್ತಿರಯಿಲ್ಲ , ಆಪರೇಷನ್ ಕಮಲ ಅದ ಮೇಲೆ ಕಾಂಗ್ರೆಸ್ ಸರಕಾರ ಪತನಗೊಂಡು ಬಿಜೆಪಿಯ ಸರಕಾರ ಉದಯವಾಗಿತ್ತು,ಅದಕ್ಕಾಗಿಯೇ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಸರಕಾರ ಮಾಡಿದ ಯೋಜನೆಗಳ ಹೆಸರಲ್ಲಿ ಪ್ರಚಾರ ನಡೆಸುವ ಸಾಧ್ಯತೆ ಹೆಚ್ಚಾಗಿದೆ,

ಇನ್ನು ಯಾವುದೇ ಪಕ್ಷದ ಜೊತೆ  ಗುರುತಿಸಿಕೊಳ್ಳದ ರವಿಸ್ವಾಮಿ 

ರವಿಸ್ವಾಮಿ

ಕಳೆದ ಕೆಲವು ವರ್ಷಗಳಿಂದ ಏಕ್ತಾ ಫೌಂಡೇಶನ್ ಮೂಲಕ ತಾಲ್ಲೂಕಿನ ಬಡ ಜನರ ಸೇವೆ ಮಾಡುತ್ತಿರುವ ರವಿ ಸ್ವಾಮಿ ಎಲ್ಲ ಜಾತಿಗಳ ಯುವಕರಲ್ಲಿ ಅವರು ಉತ್ತಮ ನಾಯಕರಾಗಿ ಗುರುತಿಸಿಕೊಂಡಿದ್ದಾರೆ,ರವಿಸ್ವಾಮಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ ಅವರು ಖಂಡಿತಾವಾಗಿ ಗೆಲ್ಲುತ್ತಾರೆ ಎಂಬುವುದು ತಾಲ್ಲೂಕಿನ ಯುವಕರ ಮಾತಾಗಿದೆ,ರವಿ ಸ್ವಾಮಿ ಕರೋನ ಅಲೆಯ ಸಮಯದಲ್ಲಿ ಬಡ ಜನರಿಗೆ ಆಹಾರದ ವ್ಯವಸ್ಥೆ ಮಾಡಿ ಮನೆ ಮಾತಾಗಿದ್ದರೆ,ಆದರೆ ಅವರ ಜಾತಿ ಪ್ರಮಾಣ ಪತ್ರದ ವಿರುದ್ಧ ಕೆಲವು ಹೋರಾಟ ನಡೆಯುತ್ತಿದ್ದು ಇದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಹೊರಬಿದಿಲ್ಲ,ಆದರೆ ಅವರು ಮಾಡಿರುವ ಸಮಾಜ ಸೇವೆಯಿಂದ ಅನೇಕರು ಇವರು ಶಾಸಕರಾಗಬೇಕು ಎಂದು ಜನ ಬಯಸುತ್ತಿದ್ದಾರೆ,

ಪಂಚರಾಜ್ಯ ಚುನಾವಣೆ ಸೋಲಿನ ನಂತರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಲ್ಲಿ ಆತಂಕ

ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಭಾರಿ ಮಟ್ಟದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಆತಂಕ ಪಡುವ ಪರಿಸ್ಥಿತಿ ಉದ್ಭವವಾಗಿದೆ,ಕಾಂಗ್ರೆಸ್ ಪಕ್ಷದ ನಾಯಕರುಗಳು ಬಿಜೆಪಿಗೆ ಸೇರಿದ್ದರೆ ಅವರು ಶಾಸಕರಾಗುವ ಕನಸ್ಸು ಕನಸಾಗಿಯೇ ಉಳಿಯುತ್ತದೆ ಎಂಬ ಆತಂಕ,

ಕಣ್ಮರೆಯಾದ ಕಳೆದ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ 

ಕಳೆದ ಭಾರಿಯ ಜೆಡಿಎಸ್ ಅಭ್ಯರ್ಥಿ ಧನಾಜಿ ಜಾಧವ್ ಔರಾದ ಜನರಲ್ಲಿ ಪ್ರಭು ಚವ್ಹಾಣರವರ ಬಿ ಟೀಮ್ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ,ಕಳೆದ ಭಾರಿ ಜೆಡಿಎಸ್ ಪಕ್ಷದ ಟಿಕೆಟ್ ಗಾಗಿ ಭಾರಿ ಲಾಭಿ ನಡೆಸಿದ ವಿಶ್ವನಾಥ ದಿ ನೆ ಕಾಂಗ್ರೆಸ್ ಪಕ್ಷ ಸೇರಿರುವುದು ಅಚ್ಚರಿ ಮೂಡಿಸಿದೆ,

ತಾಲೂಕಿನ ಜೆಡಿಎಸ್ ನಲ್ಲಿ ಮತ್ತೊಂದು ಹೊಸ ಮುಖ 

ಹುಮನಾಬಾದ ಕ್ಷೇತ್ರದ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ರಮೇಶ ಡಾಕುಳಗಿ ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಕೆಲವು🎑🎑

ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ತೊರೆದು 👌👌👌👌👌👌👌👌👌👌👌👌👌👌👌👌👌👌👌👌👌👌👌👌💐👌👌👌👌👌👌👌👌👌👌👌👌👌👌👌👌👌👌👌👌👌👌22👌 ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜನತಾ ದಳ ಪಕ್ಷದಲ್ಲಿ ಸೇರ್ಪಡೆಯಾಗಿದ್ದಾರೆ. ರಮೇಶ ಡಾಕುಳಗಿ ಅವರಿಗೆ ತಾಲೂಕಿನ ಜನ ಕೈ ಹಿಡಿಯುತ್ತಾರೆ ಎಂಬುದು ಕಾದುನೋಡಬೇಕಾಗಿದೆ.

ಕೈ ಟಿಕೆಟ್ ಗೆ ಕಾಯುತ್ತಿರುವ ಸಿಂಧೆ,ದಿನೆ,ಸೊರಳಿಕ್ಕರ್,ಬಂಟಿ 

ಕಳೆದ ಚುನಾವಣೆಯಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಯತ್ನಿಸುತ್ತಿರುವ ಭೀಮಸೇನರಾವ ಸಿಂಧೆ ಅವರು ಈ ಭಾರಿ ಚುನಾವಣೆ ಕಣಕ್ಕಿಳಿಯುವ ಅಲೋಚನೆಯಲ್ಲಿದ್ದಾರೆ.ಈ ಬಾರಿ ಭೀಮಸೇನಾರಾವ ಸಿಂಧೆ ಅವರಿಗೆ ಟಿಕೆಟ್ ಸಿಗದಿದ್ದರೆ ಸ್ವಾತಂತ್ರ್ಯವಾಗಿ ಚುನಾವಣಾ ಕಣಕ್ಕೆ ಬರಲಿದ್ದಾರೆ ಎಂಬುವುದು ಅವರ ಆಪ್ತರ ಹೇಳಿಕೆ

ಈ ಬಾರಿ ಜಾತಿಯ ಲೆಕ್ಕಾಚಾರವೇ ಬೇರೆ/ ಲಿಂಗಾಯತ ನಾಯಕರು ಚವ್ಹಾಣಗೆ ಕೈ ಬಿಡುವ ಸಾಧ್ಯತೆ

ಕಳೆದ ಕೆಲವು ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಮತಗಳು ನೇರವಾಗಿ ಪ್ರಭು ಚವ್ಹಾಣ ವರಿಗೆ ಸಿಗುತ್ತಿದ್ದವು ಆದರೆ ಈ ಭಾರಿ ಲೆಕ್ಕಾಚಾರವೇ ಬೇರೆಯಾಗಿದೆ,ಕಳೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪ್ರಭು ಚವ್ಹಾಣ ಲಿಂಗಾಯತ ನಾಯಕರಿಗೆ ಟಿಕೆಟ್ ವಂಚಿಸಿ ತಮ್ಮ ಸ್ವಜಾತಿಯವರಿಗೆ ಟಿಕೆಟ್ ನೀಡಿದ ಆರೋಪ ಲಿಂಗಾಯತ ಜನರಲ್ಲಿ ಆಕ್ರೋಶ ಮನೆಮಾಡಿದೆ, ಶಾಸಕರಿಂದ ಹಲವು ಪ್ರಭಾವಿ ಲಿಂಗಾಯತ ಮುಖಂಡರುಗಳು ಅಂತರ ಕಾಯಿದುಕೊಂಡಿರುವುದು ಅವರಲ್ಲಿ ಆತಂಕ ಶುರುವಾಗಿದೆ,ಇನ್ನೊಂದು ಕಡೆ ದಲಿತ ಪರ ಸಂಘಟನೆಗಳು ಅವರ ವಿರುದ್ಧ ರಾಜ್ಯಾವ್ಯಾಪ್ತಿ ಹೋರಾಟ ನಡೆಸುತ್ತಿದು ,ದಲಿತರ ಮತಗಳು ಈ ಬಾರಿ ನೇರವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿವೆ, ಶಾಸಕರು ತಮ್ಮ ಸ್ವಜಾತಿಯವರಿಗೆ ಹೆಚ್ಚಿನ ಆದ್ಯತೆ ನೀಡಿ ಲಿಂಗಾಯತ ನಾಯಕರಿಗೆ ಅವರ ಹತ್ತಿರ ಬೆಳೆಯಿಲ್ಲದಂತಾಗಿದೆ ಎನ್ನುತ್ತಿದ್ದಾರೆ ಕೆಲವು ಲಿಂಗಾಯತ ಮುಖಂಡರುಗಳು,

ಸದಾಶಿವ ಆಯೋಗ ವರದಿ ಒಪ್ಪಲ್ಲ ಎಂದ ಪ್ರಭು ಚವ್ಹಾಣ

ಪ್ರಭು ಬಿ ಚವ್ಹಾಣ

ಪ್ರಭು ಚವ್ಹಾಣ ಸದಾಶಿವ ಆಯೋಗ ವರದಿ ಒಪ್ಪಲ್ಲ ಎಂದ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅವರಿಗೆ ಕಪ್ಪುಪಟ್ಟಿ ತೋರಿಸಿ ದಲಿತ ಸಂಘಟನೆಗಳು ಅವರ ವಿರುದ್ಧ ಹೋರಾಟ ಮಾಡಿದ್ದು ರಾಜ್ಯಾವ್ಯಾಪ್ತಿ ಸುದ್ದಿಯಾದ ವಿಷಯ ,ಅದಕ್ಕಾಗಿ ಈ ಬಾರಿ ಅವರ ಕ್ಷೇತ್ರದಲ್ಲಿರುವ ದಲಿತರ ಮತಗಳು ಒಡೆದು ನೇರವಾಗಿ ದಲಿತ ಅಭ್ಯರ್ಥಿಗಳಿಗೆ ಹೋಗುವ ಸಾಧ್ಯತೆ ಇದೆಇದರ ಸಂಪೂರ್ಣ ಲಾಭವನ್ನು ಪಡೆಯಲು ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಪೂರ್ಣ ಪ್ರಮಾಣದ ಪ್ರಯತ್ನ ನಡೆಸುತ್ತಿರುವುದು ಎಂದು ಕಾಣಿಸುತ್ತಿದೆ,ಬಿಜೆಪಿಯಿಂದ ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿರುವ ಪ್ರಭು ಚವ್ಹಾಣ ಅವರೇ ಈ ಭಾರಿಯು ಸಹ ಅಖಾಡದಲ್ಲಿಯೇ ಮುಂದುವರಿಯಲಿದ್ದಾರೆ.

ಹಿರಿಯರಿಗೆ ಕೈ ಸಾಥ್ ನೀಡುತ್ತಾ ?

ಔರಾದ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಿದ ಕೀರ್ತಿ ರಾಮಣ್ಣ ವಡೆಯಾರಗೆ ಸಲ್ಲುತ್ತದೆ,ಆದರೆ ಹೊಸ ಮುಖಗಳು ಬಂದು ಹಳೆಯ ನಾಯಕರಿಗೆ ಕಾಂಗ್ರೆಸ್ ಮರೆಯುತ್ತಿದೆ ಎನ್ನುತ್ತಿದ್ದಾರೆ ಹಿರಿಯ ಕಾಂಗ್ರೆಸ್ ಮುಖಂಡರು

ರಾಮಣ್ಣ ವಡಿಯಾರ

ತಾಲೂಕಿನಲ್ಲಿ ನೀರಿನ ಬರಗಾಲ ತಾಂಡವವಾಡುತ್ತಿದು,  ಶಾಶ್ವತವಾಗಿ ಕುಡಿಯುವ ನೀರಿನ ಪರಿಹಾರ ನೀಡುವಲ್ಲಿ ಪ್ರಭು ಚವ್ಹಾಣ ಕಳೆದ 10 ವರ್ಷಗಳಿಂದ ವಿಫಲವಾಗಿದ್ದು ಅವರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ,ಕಳೆದ 14 ವರ್ಷಗಳಿಂದ ಔರಾದ ತಾಲ್ಲೂಕಿನ ಜನರಿಗೆ ಪ್ರಭು ಚವ್ಹಾಣ ಏನು ಮಾಡಿದ್ದಾರೆ ಈ ಬಾರಿ ಬೇರೆಯವರಿಗೆ ಮತ ನೀಡಬೇಕು ಎಂದು ಯುವಕರು ಮಾತನಾಡುತ್ತಿದ್ದಾರೆ,ಸಿಂಧೆ,ದಿನೆ, ಬಂಟಿ ದರಬಾರೆ, ಸೊರಳಿಕ್ಕರ ಹೀಗೆ ಅನೇಕ ನಾಯಕರು ಈ ಭಾರಿ ಟಿಕೆಟ್ ಗಾಗಿ ಲಾಭಿ ಮಾಡುತ್ತಿದ್ದಾರೆ

ವರದಿ:ಹಣಮಂತ ದೇಶಮುಖ ಸಂಪಾದಕರು( justbidar.com)