Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಇಂದು ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ ಖೇಣಿ ರವರ ಗೃಹ ಕಛೇರಿಯಲ್ಲಿ ಮಾನ್ಯ ಶ್ರಿ ಅಶೋಕ ರವರು ಆಯೋಜಿಸಿದ್ದ ಬೀದರ ದಕ್ಷಿಣ ಕ್ಷೇತ್ರದಲ್ಲಿ ಪಿ ಯು ಸಿ ಪರಿಕ್ಷೆಯಲ್ಲಿ 85% ಗಿಂತ  ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗು  ದಕ್ಷಿಣ ಕ್ಷೇತ್ರದ ಉಸ್ತವಾರಿಗಳಾದ ಶ್ರೀಮತಿ ಮಿನಾಕ್ಷಿ ಸಂಗ್ರಾಮ ರವರು ಸನ್ಮಾನಿಸಿದರು

ಅಶೋಕ ಖೇಣಿ ಏಷ್ಯಾ  ಖಂಡದ ಅತಿ ದೊಡ್ಡ ವಸ್ತು ಪ್ರದರ್ಶನ ಉಧ್ಘಾಟಕರಾಗಿರುವ ಹಿನ್ನೆಲೆ ಇಂದು ತುರ್ತು ಆಗಿ ಬೆಂಗಳೂರಿನ ಕಡೆ ಧಾವಿಸಿರುವ ಕಾರಣ ವಿಡಿಯೋ ಕಾಲಿಂಗ್ ಮೂಲಕ ಸಂಪರ್ಕಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸಂಭಾಷಣೆ ನಡೆಸಿದರು.

ಈ ಸಂದರ್ಭದಲ್ಲಿ  ಕಿಸಾನ್ ಸೇಲ್ ಅಧ್ಯಕ್ಷರಾದ ಸಂತೋಷ ಪಾಟೀಲ, ಎಸ್ ಟಿ ಸೇಲ್ ಅಧ್ಯಕ್ಷರಾದ ಸೂರ್ಯಕಾಂತ ಸಿಂದೋಲ , ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸಾಜಿದ ಪಾಶಾ, ಅನ್ ಅರ್ಗನೈಜಡ್  ಲೇಬರ್ ಸೇಲ್ ಅಧ್ಯಕ್ಷರಾದ ಅಮ್ರತರಾವ ಪಾಟೀಲ,  ಸೋನಿಯಾ ಗಾಂಧಿ ಬಿಗ್ರೇಡ್ ಅಧ್ಯಕ್ಷರಾದ ಇಮ್ಯಾನವೇಲ್ ಮಂದಕನಳ್ಳಿ,   ಬ್ಲಾಕ್ ಕಾಂಗ್ರೆಸ ಕಮಿಟಿಯ ಖಂಜಾಚಿಗಳಾದ ರಾಜಕುಮಾರ ಮಡಕಿ,  ಎಕೆಕೆ ಫೌಂಡೇಶನ್ ನ ಅಧ್ಯಕ್ಷರಾದ ಬಸವರಾಜ ವಡ್ಡೆ, ಮುಖಂಡರಾದ ನರಸಪ್ಪಾ, ಶಿವರಾಜ ಹಾವಶಟ್ಟಿ, ಶಿವಕುಮಾರ ಕುತ್ತಾಬಾದ,  ಸೇರಿ ವಿದ್ಯಾರ್ಥಿಗಳ ಪಾಲಕರು ಕಾರ್ಯಕರ್ತರು ಉಪಸ್ಥಿತರಿದ್ದರು.