Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರ್: ರಸಗೊಬ್ಬರ ಬಗ್ಗೆ  ನಾನು ರೈತರ ಜತೆ ಸರಿಯಾಗಿ ಮಾತನಾಡಿಲ್ಲ ಎನ್ನುವ ಸುದ್ದಿಯು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ಮಾತನಾಡಿರುವ ವ್ಯಕ್ತಿ ರೈತನಲ್ಲ. ಓರ್ವ ಸರಕಾರಿ ಶಾಲೆಯ ಸಹ ಶಿಕ್ಷಕ ಎಂಬುದು ನಿಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವ್ಯಕ್ತಿಯು (ರೈತನ್ನು) ನನ್ನೊಂದಿಗೆ ಜೂನ್ 10 ರಂದು ರಾತ್ರಿ 10.52 ನಿಮಿಷದಿಂದ 11.32 ನಿಮಿಷದವರೆಗೆ ಮೂರು ನಾಲ್ಕು ಬಾರಿ ಕರೆ ಮಾಡಿದಾಗ,

ನಾನು ಏನಾದರೂ ತುರ್ತು ಕೆಲಸವಿದ್ದಿರಬಹುದು ಎಂದು ಅದೇ ದಿನ ರಾತ್ರಿ. 11.35 ನಿಮಿಷಕ್ಕೆ ಪುನಃ ಕರೆ ಮಾಡಿ ಮಾತಾಡಿದ್ದೇನೆ.

ಆದರೆ, ಮಾತನಾಡುವಾಗ ಆ ವ್ಯಕ್ತಿಯು ರಸಗೊಬ್ಬರ ಬಗ್ಗೆ ಕೇಳುತ್ತಾ ಆಕ್ಷೇಪಾರ್ಯ ಪದಗಳನ್ನು ಬಳಸಿದ. ಆದರೆ, ನಾನು ಯಾವ ಮಾತುಗಳಿಗೆ ಉತ್ತರಿಸಬೇಕು ಅಷ್ಟಕ್ಕೆ ಮಾತ್ರ ಉತ್ತರಿಸಿದ್ದೇನೆ ಎಂದು ಭಗವಂತ ಖೂಬಾ ಸ್ಪಷ್ಟಪಡಿಸಿದರು.

ಎನಿದುವಿವಾದ?

ರಸಗೊಬ್ಬರ ವಿತರಣೆ ವಿಚಾರವಾಗಿ ತಮಗೆ ಕರೆ ಮಾಡಿದ ರೈತನೋರ್ವನಿಗೆ ಕೇಂದ್ರ ಸಚಿವ ಭಗವಂತ ಖೂಬಾ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತ ದೂರವಾಣೀ ಸಂಭಾಷಣೆಯ ಆಡಿಯೋ ಕೂಡ ವೈರಲ್ ಆಗಿತ್ತು. ರೈತನಿಗೆ ಅವಾಚ್ಯ ಶಬ್ಧಗಳಿಂದ ಖೂಬಾ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಸಚಿವರಿಗೆ ದೂರವಾಣಿ ಕರೆ ಮಾಡಿದ್ದ ರೈತ, ನಮ್ಮ ಊರಿನಲ್ಲಿ ಗೊಬ್ಬರ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದ ಎನ್ನಲಾಗಿದೆ. ಇದಕ್ಕೆ ಖಾರವಾಗಿ ಪ್ರತ್ಯುತ್ತರ ನೀಡಿದ್ದ ಗೊಬ್ಬರ ಸಿಗದಿದ್ದರೆ ನಾನೇನು ಮಾಡಲಿ ಎಂದು ಕೇಳಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತ ಆಡಿಯೋ ವೈರಲ್ ಆಗಿ, ಕೇಂದ್ರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಆದರೆ ಈ ಆರೋಪಗಳಿಗೆ ಇದೀಗ ಖುದ್ದು ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವ ಭಗವಂತ ಖೂಬಾ, ತಮಗೆ ಕರೆ ಮಾಡಿದಾತ ರೈತನಲ್ಲ ಬದಲಿಗೆ ಸರಕಾರಿ ಶಾಲೆಯ ಓರ್ವ ಸಹ ಶಿಕ್ಷಕ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕರೆಯ ಕುರಿತ ವಿವರಗಳನ್ನು ಖೂಬಾ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.