Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಮಯಕ್ಕೆ ಬಸ್ ಬರದೇ ಇರುವ ಕಾರಣ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಔರಾದ್ ವತಿಯಿಂದ ಜಿಲ್ಲಾ ಕಾರ್ಯದರ್ಶಿ ರತ್ನದೀಪ ಕಸ್ತೂರೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬಸ್ ನಡೆದು  ಪ್ರತಿಭಟನೆ ಮಾಡಿದರು.

 ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ರತ್ನದೀಪ ಕಸ್ತೂರೆ ಮಾತನಾಡಿ ಈ ಮೊದಲು 8  ದಿವಸಗಳ ಹಿಂದೆ ಲಿಖಿತ ರೂಪದಲ್ಲಿ ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು ಸಮಸ್ಯೆ ಬಗೆಹರಿಸಿಲ್ಲಾ ಇವತ್ತು ಔರಾದ್ ದಿಂದ ಕರೆಂಜಿ, ರಾಯಪಲ್ಲಿ, ಸುಂದಳ, ತೆಗಂಪೂರ, ನಾಗಮಾರಪಳ್ಳಿಗೆ ಹೋಗುವ ಬಸ್ ಮಧ್ಹಾನ 1 ಗಂಟೆಗೆ ಬರುವ ಸಮಯವಿದ್ದರೆ 3.30 ಗಂಟೆಯಾದರು ಬಸ್ ಇಲ್ಲ, ವ್ಯವಸ್ಥಾಪಕರಿಗೆ ಕರೆ ಮಾಡಿದರೆ ಸ್ಪಂದನೆ ಮಾಡುತೀಲ್ಲಾ ಆದರಿಂದ ಬಸ್ ತಡೆದು ಪ್ರತಿಭಟನೆ ಮಾಡುತಿದ್ದೇವೆ, ಸಚಿವರಾದ ಪ್ರಭು ಚವ್ಹಾಣರವರು ವಿದ್ಯಾರ್ಥಿಗಳ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದರು,

 ಪ್ರತಿಭಟನಕಾರರು ಹೊರಾಟದ ಸಂದರ್ಭದಲ್ಲಿ ಶಾಸಕರಾದ ಪ್ರಭು ಚವ್ಹಾಣ ಹಾಗೂ ಬಸ್ ಘಟಕ ವ್ಯವಸ್ಥಾಪಕ ಸಂಜು ಭಲ್ಕೆರವರಿಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ಅನಿಲ್ ಹೆಡೆ, ಅಜಯ ವರ್ಮಾ, ಆದರ್ಶ ನಾಗುರೆ, ಶಿವಾನಂದ ಚಲ್ವಾ, ವಿದ್ಯಾರ್ಥಿಗಳಾದ ಶಿವಕುಮಾರ, ಸಚಿನ, ಅಭಿಷೇಕ್ ಉಪಸ್ಥಿತರಿದ್ದರು