Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ತಾಲೂಕಿನ ರೈತರಿಗೆ ರಸಗೊಬ್ಬರ ಪೂರೈಸಿ ಕಾಂಗ್ರೆಸ್ ಮುಖಂಡ ಸುಧಾಕರ್ ಆಗ್ರಹಿಸಿದ್ದಾರೆ

ಔರಾದ ತಾಲೂಕಿನ ರೈತರಿಗೆ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ,ಇದರಿಂದ ರೈತರ ಸಂಕಷ್ಟ ಅನುಭವಿಸುತ್ತಿದ್ದಾರೆ, ಈ ಕುರಿತು ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾ ಅಧ್ಯಕ್ಷರಾದ ಸುಧಾಕರ್ ಕೊಳ್ಳುರ ರವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಔರಾದ ತಹಸಿಲ್ದಾರ್ ರವರ ಮುಖಾಂತರ ಸಲ್ಲಿಸಿದರು.


ನಂತರ ಮಾತನಾಡಿದ ಅವರು
ರೈತರಿಗೆ ಬೇಕಾದಷ್ಟು ರಸಗೊಬ್ಬರ ಪೂರೈಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮುಂಗಾರು ಬಿತ್ತನೆ ಪ್ರಾರಂಭವಾಗಿದ್ದು ತಾಲೂಕಿನಲ್ಲಿ ಮಳೆ ಬೀಳುತ್ತಿರುವುದರಿಂದ ರೈತರು ಬಿತ್ತನೆ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ, ಬೀಜಗಳು ದೊರಕಿವೆ ಆದರೆ ರಸಗೊಬ್ಬರ ದೊರಕುತ್ತಿಲ್ಲ ಇದರಿಂದ ರೈತರು ಗೊಂದಲದಲ್ಲಿದ್ದಾರೆ, ರಸಗೊಬ್ಬರ ಪೂರೈಸುವಲ್ಲಿ ತಾಲೂಕು ಆಡಳಿತ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಇದೇ ತಾಲೂಕಿನಿಂದ ಇಬ್ಬರು ಸಚಿವರಿದ್ದಾರೆ, ಒಬ್ಬರು ಕೇಂದ್ರದ ರಾಜ್ಯ ರಸಗೊಬ್ಬರ ಸಚಿವರಿದರೆ, ಇನ್ನೊಬ್ಬರು ರಾಜ್ಯ-ಕೇಂದ್ರ ಕ್ಯಾಬಿನೆಟ್ ದರ್ಜೆ ಸಚಿವರಿದ್ದಾರೆ, ಇಬ್ಬರು ಇದೇ ತಾಲ್ಲೂಕಿನವರು ಇದ್ದರೂ ಕೂಡ ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ದೊರಕುತ್ತಿಲ್ಲ,
ರಾಜ್ಯ ಸರ್ಕಾರದಿಂದ ರಸಗೊಬ್ಬರ ಪೂರೈಸಲು ಆಗುತ್ತಿಲ್ಲ ಇಲ್ಲಿಯ ರೈತರು ಬೇರೆ ರಾಜ್ಯಗಳಿಗೆ ಹೋಗಿ ರಸಗೊಬ್ಬರ ಖರೀದಿ ಮಾಡುತಿದ್ದಾರೆ, ಕೂಡಲೇ ರಸಗೊಬ್ಬರ ಪೂರೈಸುವಂತೆ ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ಸುಧಾಕರ್ ಕೊಳ್ಳುರ ಅವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣ ಔರಾದ ತಾಲೂಕ ಅಧ್ಯಕ್ಷರಾದ ಬಾಲಾಜಿ ಕಾಸಲೆ, ಲಖನ್ ಲಾದೇಕರ, ಲೋಕೇಶ್ ಸ್ವಾಮಿ ಮುಂತಾದ ಉಪಸ್ಥಿತರಿದ್ದರು.