Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಯುವ ವಿದ್ಯಾರ್ಥಿಗಳಲ್ಲಿ ಗುರುಹಿರಿಯರಿಗೆ ಹಾಗೂ ಸಮಾಜದ ಬಗ್ಗೆ ಮೌಲ್ಯ ಕಡಿಮೆಯಾಗುತ್ತಿರುವುದು ವಿಚಾರ ಮಾಡುವಂತಹದು ಎಂದು ತೋರಣಾ ಸಂಪನ್ಮೂಲ ಶಿಕ್ಷಕಿ ಮಹಾನಂದಾ ಎಂಡೆ ಹೇಳಿದರು.ಸಂತಪೂರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ 57ನೇ ಪುನಶ್ಚೇತನ ಕಾರ್ಯಕ್ರಮ ಹಾಗೂ ಸಂತಪುರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಧನಾತ್ಮಕ ದೊಡ್ಡ ಕನಸು ಇಟ್ಟುಕೊಂಡು ಪರಿಶ್ರಮ ಮೂಲಕ ಯಶಸ್ವಿ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಸದಾ ಉತ್ಸಾಹ ಮತ್ತು ಸಂತೋಷದಿಂದ ಇರಬೇಕು. ಬುದ್ಧಿವಂತಿಕೆ ಮತ್ತು ಪರಿಶ್ರಮದಿಂದ ಪ್ರತಿಭಾವಂತರಾಗಿ ಹೋಗಬೇಕು ಎಂದರು.

ಸಂತಪೂರ್ ಪಿಎಸ್ಐ ಸಿದ್ದಣ್ಣ ಗಿರಿಗೌಡರು ಮಾತನಾಡಿ ಜವಾಬ್ದಾರಿಯುತವಾದ ವ್ಯಕ್ತಿಯ ಮೇಲೆ ಕುಟುಂಬಸ್ಥರು ಮತ್ತು ನೆರೆಹೊರೆಯವರು ಅವಲಂಬನೆಯಾಗಿರುತ್ತಾರೆ. ಅಂಥವರು ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬೇರೆಯವರಿಗೆ ಆಶ್ರಿತರಾಗಬೇಕು ಎಂದರು. ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ ಹಾಗೂ ಮಾದಕ ವಸ್ತುವಿಗೆ ಬಲಿ ಆಗಬಾರದು ಅದರಿಂದ ಯಾರಿಗೂ ಒಳ್ಳೆಯದಾಗಿಲ್ಲ ಎಂದು ಹೇಳಿದರು.

ಪ್ರಾಂಶುಪಾಲ ನವೀಲಕುಮಾರ್ ಉತ್ಕಾರ್ ಮಾತನಾಡಿದರು. ಉಪನ್ಯಾಸಕರಾದ ಮೀರಾತಾಯಿ ಕಾಂಬಳೆ, ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಈರಮ್ಮ ಕಟಗಿ, ಅಂಬಿಕಾ ವಿಶ್ವಕರ್ಮ ಹಾಗೂ ಇತರರಿದ್ದರು