Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಢಾಕಾ, ಜೂನ್ 5: ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಶಿಪಿಂಗ್ ಕಂಟೇನರ್ ಡಿಪೋದಲ್ಲಿ ಅಗ್ನಿದುರಂತ ಸಂಭವಿಸಿ 40ಕ್ಕೂ ಹೆಚ್ಚು ಮಂದಿ ದಾರುಣ ಸಾವನ್ನಪ್ಪಿದ್ದಾರೆ. ಶನಿವಾರ ಸಂಭವಿಸಿದ ಈ ದುರಂತದಲ್ಲಿ 450 ಮಂದಿಗೆ ಗಾಯವಾಗಿದೆ. ಅನೇಕ ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ರಾಸಾಯನಿಕ ಪದಾರ್ಥಗಳಿಂದಾಗಿ ಬೆಂಕಿ ಹೊತ್ತಿಕೊಂಡಿತು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಫೋಟಗೊಂಡ ಬಳಿಕ ಬೆಂಕಿ ಹೆಚ್ಚು ವೇಗವಾಗಿ ವ್ಯಾಪಿಸಿತು. ಪಕ್ಕ ಪಕ್ಕದಲ್ಲಿದ್ದ ಕಂಟೇನರ್‌ಗಳಿಗೆ ಬೆಂಕಿ ಬಹಳ ಬೇಗ ಹೊತ್ತಿಕೊಳ್ಳುತ್ತಾ ಹೋಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಚಿತ್ತಗಾಂಗ್‌ನ ಪೊಲೀಸ್ ಅಧಿಕಾರಿ ನೂರುಲ್ ಅಲಂ ನೀಡಿರುವ ಮಾಹಿತಿ ಪ್ರಕಾರ, ಶನಿವಾರ ರಾತ್ರಿ 9 ಗಂಟೆಗೆ ಕಂಟೇನರ್ ಡಿಪೋದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮಧ್ಯರಾತ್ರಿಯ ಸುಮಾರಿಗೆ ಸ್ಫೋಟವಾಗಿದೆ. ಅದಾದ ಬಳಿಕ ಬೆಂಕಿ ವಾಯುವೇಗದಲ್ಲಿ ವ್ಯಾಪಿಸಿದೆ. ಮೂಲಗಳ ಪ್ರಕಾರ ಸ್ಫೋಟದ ತೀವ್ರತೆಗೆ ಘಟನಾ ಸ್ಥಳದ ಸಮೀಪದ ಮನೆಗಳ ಕಿಟಕಿ ಗಾಜುಗಳು ಹೊಡೆದುಹೋಗಿವೆ ಎನ್ನಲಾಗಿದೆ.

Bangladesh Containment Depot Explosion and Fire Kill Over 40 People

ರೆಡ್ ಕ್ರೆಸೆಂಟ್ ಯೂತ್ ಎಂಬ ಸ್ವಯಂಸೇವಾ ಸಂಸ್ಥೆಯ ಉನ್ನತ ಅಧಿಕಾರಿ ಇಸ್ತಾಕುಲ್ ಇಸ್ಲಾಮ್ ಪ್ರಕಾರ, “ಈ ದುರ್ಘಟನೆಯಲ್ಲಿ 450 ಮಂದಿಗೆ ಗಾಯವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಅಪಾಯ ಇದೆ.”

ಬೆಂಕಿಯನ್ನು ನಂದಿಸಲು 19 ಅಗ್ನಿಶಾಮಕ ತಂಡಗಳು ಪ್ರಯತ್ನಿಸುತ್ತಿವೆ. ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಆರು ಆಂಬುಲೆನ್ಸ್ ವಾಹನಗಳನ್ನೂ ಬಳಲಾಗುತ್ತಿದೆ. ಎಎನ್‌ಐ ವರದಿ ಪ್ರಕಾರ, ಬೆಂಕಿ ಮೊದಲು ಕಾಣಿಸಿಕೊಂಡಿದ್ದು ರಾತ್ರಿ 9 ಗಂಟೆಗೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವಾಗಲೇ 11:45ರ ಸುಮಾರಿಗೆ ದೊಡ್ಡ ಸ್ಫೋಟವಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಯೇ ಈ ಸ್ಪೋಟಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

Bangladesh Containment Depot Explosion and Fire Kill Over 40 People

ರಾಜಧಾನಿ ಢಾಕಾ ಬಿಟ್ಟರೆ ಚಿತ್ತಗಾಂಗ್ ಅಥವಾ ಚಟಗಾಂವ್ ಬಾಂಗ್ಲಾದೇಶದ ಎರಡನೇ ಅತಿದೊಡ್ಡ ನಗರವಾಗಿದೆ. ಇದು ಸಾವಿರಾರು ವರ್ಷಗಳ ಹಿಂದಿನಿಂದಲೂ ವಿಶ್ವದ ಪ್ರಮುಖ ಬಂದು ಸ್ಥಳವಾಗಿ ಗುರುತಿಸಿಕೊಂಡಿದೆ. ಇದೇ ನಗರದ ಸೀತಾಕುಂಡ ಎಂಬ ಪ್ರದೇಶದಲ್ಲಿ ಹಡಗುಗಳ ಕಂಟೇನರ್‌ಗಳನ್ನು ಇರಿಸುವ ಉಗ್ರಾಣವೊಂದರೊಳಗೆ ಶನಿವಾರ ಸ್ಫೋಟ ಸಂಭವಿಸಿರುವುದು.

At least 40 people have died after a huge fire broke out at a shipping container depot in Bangladesh’s Chittagong Saturday (June 4th) night.