Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಹಲೋ ಸಚಿವರೇ @ಹನಿ ಹನಿ ನೀರಿಗೂ ಪರದಾಡುವ  ಸ್ಥಿತಿ ! ಗ್ರಾಮದ ನಲ್ಲಿಗೆ ನೀರು ಬರುವುದು ಯಾವಾಗ.??

ಮದನೂರ ಜಲ ಜೀವನ ಯೋಜನೆಗೆ ಕಾಯಕಲ್ಪ!   ಇನ್ನು ಬಗೆಹರಿಯದ ಜನರ ಪರದಾಟ

ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಪರದಾಟ

ಕಮಲನಗರ: ತಾಲೂಕಿನ ಮದನೂರ ಗ್ರಾಮದ ಗ್ರಾಮಸ್ಥರೂ ಸತತ ಹತ್ತು ವರ್ಷಗಳಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಹತ್ತಾರು ಪ್ರತಿಭಟನೆ, ಮನವಿ ಸೇರಿದಂತೆ ಇನ್ನಿಲ್ಲದ ಪ್ರಯತ್ನ ಮಾಡಿವೆ, ಅದರ ಫಲವಾಗಿ 2016-17 ವರ್ಷದಲ್ಲಿ ಹೈಕೋರ್ಟ್ ಶಾಶ್ವತ ಕುಡಿಯುವ ನೀರು ಕಲ್ಪಿಸುವಂತೆ ಸರ್ಕಾರ ಸೂಚನೆ ನೀಡಿದೆ. ಸರಿಸುಮಾರು 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಆದರೂ ಒಂದು ಹನಿ ನೀರು ಗ್ರಾಮಕ್ಕೆ ಬಂದಿಲ್ಲ. ಹಾಗಾಗಿ  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜಲಜೀವನ ಮಿಷನ್ ಯೋಜನೆಗೆ ಕಳೆದ  2020-2021ರಲ್ಲಿ ಸರಿಸುಮಾರು 73.50 ಲಕ್ಷ ರೂಪಾಯಿ ವೆಚ್ಚದಲ್ಲಿ 455 ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ಅಳವಡಿಸಲು ಮದನೂರ ಗ್ರಾಮದಲ್ಲಿ ಕೆಲಸಕ್ಕೆ ಅನುಮೋದನೆ ನೀಡಲಾಗಿದೆ.

ಹತ್ತಾರು ವರ್ಷಗಳ ಹೋರಾಟದ ಫಲವಾಗಿ ಈ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈ ಯೋಜನೆಯಿಂದ ನಮ್ಮ ಮನೆ ನಲ್ಲಿಗೆ ನೀರು ಬರಬಹುದೆಂದು ನಿರೀಕ್ಷೆಯಿತ್ತು. ಆದರೆ ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ, ಸಂಪೂರ್ಣ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಈ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ ಹೀಗಾದರೆ ನಮ್ಮ ಮನೆಗೆ ನೀರು ಬರುವುದು ಯಾವಾಗ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಜಲಜೀವನ ಅಭಿಯಾನವು ಜಲ ಜೀವನವನ್ನು ಸುಧಾರಿಸುವುದು ಇನ್ನು ಸಾಧ್ಯವಾಗಲಿಲ್ಲ. ಮೇಲುಸ್ತುವಾರಿ ವಹಿಸಬೇಕಿದ್ದ ಜನಪ್ರತಿನಿಧಿಗಳು ಕೂಡ ಇತ್ತ ಗಮನ ಹರಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ‌ ಮತ್ತು ಪ್ರಶ್ನೆಯಾಗಿದೆ.

ಈ ಯೋಜನೆ ಕಾಮಗಾರಿ ನೋಡಿದರೆ ಮರುಕವಾಗುತ್ತದೆ ವೈಜ್ಞಾನಿಕವಾಗಿ ತಗ್ಗು ತೋಡಿ ಪೈಪು ಹಾಕಿಲ್ಲ ನಲ್ಲಿಗಳ ಜೋಡಣೆಯು ಸರಿಯಾಗಿ ಆಗಿಲ್ಲ. ಎಲ್ಲಿಂದರಲ್ಲಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಆಗುತ್ತವೆ ಜನರಲ್ಲಿ ಕಾಲರ ರೋಗ ಬರುವ ಆತಂಕ ಮೂಡಿದೆ. ಇದೊಂದು ಮನೆಮನೆಗೆ ಗಂಗೆ ಬದಲು ಎಲ್ಲೆಡೆ ಸಮಸ್ಯೆ ಎನ್ನುವ ಯೋಜನೆಯಾಗಿ ಪರಿಣಮಿಸಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಪೂಜಾ ಗುಂಡಪ್ಪಾ ಬೇಲ್ಲೆ ಮದನೂರ ಆರೋಪಿಸಿದ್ದಾರೆ.

ಮದನೂರ ಗ್ರಾಮಸ್ಥರ ಕುಡಿಯುವ ನೀರಿನ ಮನವಿ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಆದೇಶದ ಪ್ರಕಾರ ಮದನೂರ ಶಾಶ್ವತ ಕುಡಿಯುವ ನೀರಿನ ಕಾಮಗಾರಿಯನ್ನು 2016-17 ರ ಆರ್ಥಿಕ ವರ್ಷದಲ್ಲಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗುತ್ತದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೇಳಿರುತ್ತಾರೆ. ಮತ್ತು ಸರಿಸುಮಾರು 50 ಲಕ್ಷ ರೂಪಾಯಿ ಅನುದಾನ ಪಡೆದಿರುತ್ತಾರೆ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ. ಆದರೆ ಇಂದಿನವರೆಗೂ ಗ್ರಾಮಸ್ಥರಿಗೆ ಶಾಶ್ವತ ಕುಡಿಯುವ ನೀರು ಸಿಗುತ್ತಿಲ್ಲ ಇನ್ನು ಈ ಜಲ ಜೀವನ ಯೋಜನೆ ಕೂಡ ಸರಿಯಾಗಿ ಕೆಲಸ ಮಾಡದೇ ಇದ್ದದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಗಾರಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಶಾಶ್ವತ ಕುಡಿಯುವ ನೀರು ಒದಗಿಸುತ್ತಾರೆ ಎಂದು ಕಾದುನೋಡಬೇಕಿದೆ.