Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸಚಿವ ಪ್ರಭು ಚವ್ಹಾಣ್ ಭ್ರಷ್ಟಾಚಾರ ತಡೆಯುವಲ್ಲಿ ವಿಫಲರಾಗಿದ್ದಾರೆ ಸುಧಾಕರ ಕೊಳ್ಳುರ ಆರೋಪ

ಸೋಮವಾರ ಕಂದಾಯ ಇಲಾಖೆ ಪ್ರಗತಿಪರಿಶೀಲನಾ ಸಭೆಯಲ್ಲಿ ಸಚಿವ ಪ್ರಭು ಚೌಹಾಣ್ ಅವರು ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಮತ್ತು ನನ್ನ ಹೆಸರು ಹೇಳಿಕೊಂಡು ನನ್ನ ಹಳೆಯ ಪಿಎ ಹಾಗೂ ಕೆಲವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿಕೊಂಡಿದ್ದಾರೆ ಈ ವಿಷಯ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದೆ.

ನೀವೆ ಒಬ್ಬ ಜವಾಬ್ದಾರಿಯುತ ಸರ್ಕಾರದ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದರಿ ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುತ್ತಿದ್ದೀರಿ ಹಾಗಾದರೆ ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ನಿಮ್ಮ ಗಮನಕ್ಕೆ ಬಂದಾಗಿನಿಂದ ಇಲ್ಲಿವರೆಗೆ ಎಷ್ಟು ಜನರ ವಿರುದ್ಧ ಕ್ರಮ ಕೈಗೊಂಡಿದ್ದೀರಿ… ಕ್ರಮಕೈಗೊಂಡಿಲ್ಲ ಎಂದರೆ ಅದರಲ್ಲಿ ನಿಮ್ಮ ಪಾಲು ಎಷ್ಟು ನಿಮ್ಮ ಪಾಲು ಇಲ್ಲದಿದ್ದರೆ ಇಲ್ಲಿಯವರೆಗೆ ಏಕೆ ಸುಮ್ನೆ ಕುಂತಿದ್ದಿರಿ,
ನಿಮ್ಮ ನಡೆ ಅನುಮಾನ ಕ್ಕೆ ಎಡೆ ಮಾಡಿಕೊಡುತ್ತಿದೆ. ಎಂದು ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳುರ ಅವರು ಆರೋಪಿಸಿದ್ದಾರೆ.
ನಿಮ್ಮನ್ನು ಸೇರಿಸಿ ತನಿಖೆ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುತ್ತೇನೆ.
ಒಬ್ಬ ರಾಜ್ಯ ಸರಕಾರದ ಸಚಿವ ಇಲ್ಹಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ನೋಡಿದರೆ ರಾಜ್ಯ ಸರ್ಕಾರ ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಅವರು ಒಪ್ಪಿಕೊಂಡ ಹಾಗೆ ಆಗುತ್ತೆ.
ಹೀಗಾಗಿ ಸಚಿವ ಸ್ಥಾನದಿಂದ ದಲ್ಲಿ ಅವರು ಮುಂದುವರಿದು ಯಾವುದೇ ನೈತಿಕ ಹಕ್ಕಿಲ್ಲ
ಮೂರನೇ ಅವಧಿಗೆ ಆಯ್ಕೆಯಾಗಿ ಬಂದಿರುವ ಕ್ಷೇತ್ರದಲ್ಲಿದ್ದ ಭ್ರಷ್ಟಾಚಾರ ತಡೆಯಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂಬುದು ಆದರೆ ನೀವು ಸಚಿವರಾಗಿರುವದು ಯಾವ ಪುರುಷಾರ್ಥಕ್ಕೆ.

ನಿಮ್ಮ ಬಳಿ ಆಪ್ತ ಸಹಾಯಕನಾಗಿ ಕೆಲಸ ಮಾಡಿದ ವ್ಯಕ್ತಿ ನಿಮ್ಮ ಹೆಸರು ಹೇಳಿಕೊಂಡು ಬ್ಲಾಕ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿಕೊಳ್ಳುವ ಬದಲು ಅವರ ವಿರುದ್ಧ ಪೊಲೀಸ್ ದೂರು ನೀಡಿ. ಯಾಕೆ ಇಲ್ಲಿವರೆಗೆ ಪೊಲೀಸರಿಗೆ ದೂರು ನೀಡಿಲ್ಲ.
ಸಚಿವ ಸ್ಥಾನ ನಿರ್ವಹಿಸಲು ಪ್ರಭು ಚವಾಣ್ ಅವರು ಅಸಮರ್ಥರಾಗಿದ್ದಾರೆ
ಹೀಗಾಗಿ ಕೂಡಲೇ ರಾಜೀನಾಮೆ ಕೊಡಬೇಕೆಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ಸುಧಾಕರ್ ಕೊಳ್ಳುರ ರವರು ಆಗ್ರಹಿಸಿದ್ದಾರೆ.