Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬಸವಣ್ಣನವರ‌ ಮೂರ್ತಿಗೆ ಅವಮಾನ: ಹಣ್ಮು ಪಾಜಿ ಖಂಡನೆ

ಬೀದರ: ಇತ್ತಿಚೆಗೆ ಚಿತ್ತಾಪೂರದಲ್ಲಿ ಬಸವಣ್ಣನವರ ಮೂರ್ತಿಗೆ ಅವಮಾನ ಮಾಡಿರುವ ಘಟನೆಯನ್ನು ಉತ್ತರ ಕರ್ನಾಟಕ ಹೋರಾಟ ಸಮಿತಿ ಬೀದರ ಜಿಲ್ಲಾ ಅಧ್ಯಕ್ಷ ಹಣ್ಮು ಪಾಜಿ ಖಂಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಡಿಗೆ ಸಮಾನತೆಯನ್ನು ಸಾರಿದ ಮಹಾಮಾನವತಾವಾದಿ ಬಸವಣ್ಣನವರ ಮೂರ್ತಿಯನ್ನು ಅವಮಾನ ಮಾಡಿರುವುದು ಅತ್ಯಂತ ಖಂಡನೀಯವಾದುದು.
12ನೇ ಶತಮಾನದಲ್ಲಿಯೇ ತಮ್ಮ ವಚನಗಳ ಮೂಲಕ ಮನುಕುಲಕ್ಕೆ ದಾರಿದೀಪವಾಗಿದ್ದರು. ಎಲ್ಲರನ್ನು ನಮ್ಮವರೆಂದು ಜಗದ ಜನರೆಲ್ಲರನ್ನೂ ಅಪ್ಪಿಕೊಂಡು ಜಾತಿ, ವರ್ಗ, ಲಿಂಗ, ವರ್ಣಭೇದಗಳನ್ನು ಅಳಿಸಿ, ಸರ್ವರಿಗೂ ಲೇಸನ್ನಬಯಸಿದ್ದ ಯುಗಪುರುಷ ಬಸವಣ್ಣನವರಿಗೆ ಈ ರೀತಿ ಅವಮಾನಿಸಿದ್ದು ಅತ್ಯಂತ ನೋವಿನ ಸಂಗತಿ.

ಸಮಾಜದಲ್ಲಿ ಶಾಂತಿ ಕದಡಲು ಕೆಲ ಸಮಾಜಘಾತುಕ ವ್ಯಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ. ಅಪರಾಧಿಗಳು ಯಾರೇ ಆದರೂ ಸೂಕ್ತ ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಬೇಕು. ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.