Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಆರ್ ಆರ್ ಕೆ ಸಮಿತಿ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ

ಔರಾದ ಪಟ್ಟಣದ ರಾಷ್ಟ್ರೀಯ ರಚನಾತ್ಮಕ ಸಮಿತಿಯ ಅಮರೇಶ್ವರ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲದ ಆವರಣದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಶುಸಂಗೋಪನೆ ಸಚಿವರು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ ಚವ್ಹಾಣ ಅವರ ಉಪಸ್ಥಿತಿಯಲ್ಲಿ ಶಾಲಾ ಕಾಲೇಜಿನ ಸವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಯೋಗ ಶಿಬಿರದಲ್ಲಿ ಭಾಗಿಯಾದರು. ಸೂಮಾರು ಒಂದು ಗಂಟೆಗಳ ಕಾಲ ಯೋಗ ಶಿಕ್ಷಕ ರಘನಾಥ ರೆಡ್ಡಿ ನಡೆಸಿಕೊಟ್ಟರು.


ಈ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ ಮಾತನಾಡಿ ಯೋಗ ದಿಂದ ಸ್ವಸ್ಥ ಆರೋಗ್ಯ ರಕ್ಷಣೆ ಮಾಡಬಹುದು ದಿನ ನಿತ್ಯ ಒಂದು ಗಂಟೆ ಮುಂಜಾನೆ ನಾನು ಯೋಗಾಸನ ಮಾಡುತ್ತೆನೆ ತಾವು ಕೂಡಾ ಮಾಡಬೇಕು ಆರೋಗ್ಯ ಕ್ಕೆ ರಾಮ ಬಾಣ ಯೋಗ ವಿದೆ ಎಂದು ವಿದ್ಯಾರ್ಥಿಗಳಿಗೆ ಯೋಗದ ಅರ್ಥ ತಿಳಿಸಿದರು
.

ಅದೇ ಸಂಧರ್ಭದಲ್ಲಿ ಮಕ್ಕಳೊಂದಿಗೆ ಉಪಹಾರ ಸೇವನೆ ಮಾಡಿದ ಸಚಿವ ಚವ್ಹಾಣ.
ಈ ಸಂದರ್ಭದಲ್ಲಿ ಆರ್ ಆರ್ ಕೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪಾ ದೇಶಮುಖ,ಕಾರ್ಯದರ್ಶಿ ಧನರಾಜ ತಾಂಡುರ,ತಹಶಿಲ್ದಾರ ಅರುಣ ಕುಮಾರ ಕುಲಕರ್ಣಿ,ತಾಲೂಕು ಪಂಚಾಯತ ಇ ಓ ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವಕುಮಾರ್ ಘಾಟೆ,ಮುಖಂಡರಾದ ರಾಮಶೇಟ್ಟಿ ಪನ್ನಾಳೆ,ಶರಣಪ್ಪಾ ಪಂಚಾಕ್ಷರೆ,ಪ್ರಕಾಶ ಘುಳೆ,ಅಶೋಕ ಅಲಮಾಜೆ, ಮಹಾವಿದ್ಯಾಲಯದ ಪ್ರಾಂಶುಪಾಲೆ ಶ್ರೀ ಮತಿ ಜಯದೇವಿ ತೆಲಿ ,ಪ್ರಾಚಾರ್ಯ ಶರಣಪ್ಪಾ ಬಿರಾದಾರ,ಉಪನ್ಯಾಸಕರಾದ ಡಿ ಡಿ ಬೊಳೆಗಾವೆ,ಲೊಕೆಶ,ಧನರಾಜ ಬಲ್ಲುರ,ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.