Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಕ್ರಿಕೆಟ್ ಫೈನಲ್ ಪಂದ್ಯಾವಳಿಗೆ ಲಕ್ಷ್ಮಣ ಸೊರಳಿಕ್ಕರ ಚಾಲನೆ
ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಳಕುಣಿ ,ಹುಲ್ಯಾಳ ತಂಡಗಳು

ಔರಾದ: ವಿದ್ಯಾರ್ಥಿಗಳು ಪಠ್ಯ ಬೋಧನೆಯ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವಂತಿಕೆಯ ಜೀವನ ಸಾಗಿಸಲು ಮುಂದಾಗಬೇಕೆಂದು ಕಾಂಗ್ರೆಸ್‌ ಮುಖಂಡ ಡಾ| ಲಕ್ಷ್ಮಣ ಸೋರಳ್ಳಿಕರ್‌ ತಿಳಿಸಿದರು.

ತಾಲೂಕಿನ ಬೆಳಕುಣಿ-ಚಿಮ್ಮೆಗಾವ-ಹಂದಿಕೇರಿ-ಮಾಲೆಗಾವ್ ಗ್ರಾಮದ ಶಿವಾರನಲ್ಲಿ ಜೈ ಭವಾನಿ ಕ್ರಿಕೆಟ್‌ ಕ್ಲಬ್‌ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್‌ ಫೈನಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತಾನಾಡಿದರು.

ಸಮಾಜದಲ್ಲಿನ ತಿರುಳನ್ನ ಅರಿತುಕೊಳ್ಳಲು ನಮ್ಮಗೆ ಶಿಕ್ಷಣ ಎಷ್ಟು ಮುಖ್ಯವಾಗಿದೆಯೋ ಅದರಂತೆ ರೋಗಮುಕ್ತ ಜೀವನ ಸಾಗಿಸಲು ಕ್ರೀಡೆ ಅಷ್ಟೆ ಮುಖ್ಯವಾಗಿದೆ. ವಿದ್ಯಾರ್ಥಿಗಳು ಎರಡನ್ನು ಸರಿ ಸಮಾನವಾಗಿ ಜೀವನದಲ್ಲಿ ಅನುಕರಣೆ ಮಾಡಿಕೊಳ್ಳಬೇಕೆಂದರು.ಮತ್ತು ಫೈನಲ್ ಪಂದ್ಯದಲ್ಲಿ ಜಯಗಳಿಸಿದ ತಂಡಕ್ಕೆ ಮತ್ತು ರನ್ನರ್ ಅಪ್ ತಂಡಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಮುಖಂಡ ಶರಣಪ್ಪ ಪಾಟೀಲ್ ಮಾತನಾಡಿ, ಸಾಯಿ ಕ್ರಿಕೆಟ್ ಕ್ಲಬ್‌ನ ಯುವಕರು ಕ್ರಿಕೆಟ್‌ ಪಂದ್ಯಾವಳಿ ಆಯೋಜನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಕಳೆದ ಮೂರ್‍ನಾಲ್ಕು ವರ್ಷದಿಂದ ಕೋವಿಡ್‌ ಇರುವ ಹಿನ್ನೆಲೆಯಲ್ಲಿ ಯಾವುದೇ ಪಂದ್ಯಾವಳಿಗಳು ನಡೆದಿಲ್ಲ. ಪ್ರಸಕ್ತ ದಿನದಲ್ಲಿ ಆಯೋಜನೆ ಮಾಡಿರುವುದು ಸಂತಸದ ವಿಷಯವಾಗಿದೆ ಎಂದರು.

ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಒಟ್ಟು 53ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಬೆಳಕುಣಿ ಬಿ ಹಾಗೂ ದ್ವಿತೀಯ ಬಹುಮಾನವನ್ನು ಹುಲ್ಯಾಳ ತಂಡ ಪಡೆದುಕೊಂಡಿದೆ, ಪ್ರಥಮ ಬಹುಮಾನವಾಗಿ ಐವತ್ತೊಂದು ಸಾವಿರ ರೂಪಾಯಿ ಹಾಗೂ ದ್ವಿತೀಯ ಬಹುಮಾನವಾಗಿ 21 ಸಾವಿರ ರೂಪಾಯಿ ಮೊತ್ತದ ಬಹುಮಾನ ನೀಡಲಾಗಿದೆ

ಇದೆ ವೇಳೆ ಶಂಕು ನಿಷ್ಪತೆ ,ಅನಿಲ್ ಹೆಡೆ ,ಬಬಲು ಪಾಟೀಲ್ ,ಸಂದೀಪ್ ಮಾನೆ,ಅಮುಲ್ ಬಿರಾದಾರ್ ,ಶಿವಕುಮಾರ ದೇಶಮುಖ,ಆನಂದ ಬೆಳಕುಣಿ,ಹೊನ್ನಪ್ಪ ಮೂಳೆ , ಸೇರಿದಂತೆ ಇನ್ನಿತರರು ಇದ್ದರು.