Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಔರಾದ :ಅಲೆಮಾರಿ ಮತ್ತು ಅರೆ ಅಲೆಮಾರಿ ಕುಟುಂಬಗಳಿಗೆ ನಿವೇಶನ ಒದಗಿಸಲು ಸರ್ಕಾರದಿಂದ 2 ಎಕ್ಕರೆ ಜಮೀನು ಮಂಜೂರಾದರೂ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ನಿವೇಶನ ಹಂಚಿಕೆಗೆ ಮಾಡಿಲ್ಲ.

ಈ ವಿಷಯವನ್ನು ವಿರೋಧಿಸಿ ಇಂದು ಭಟ್ಕೆ ಸಮಾಜ ಸುಧಾರಣಾ ಸಮಿತಿ, ಅಖಂಡ ಕರ್ನಾಟಕ ಗೋದಳಿ ಸಮಾಜ ಸಂಘ ವತಿಯಿಂದ ಔರಾದ ಪಟ್ಟಣದ ಮಿನಿ ವಿಧಾನ ಸೌಧ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಿದರು.

ಕೂಡಲು ನಮಗೆ ನಿವೇಶನ ಮಂಜೂರು ಮಾಡಿಕೊಡಬೇಕು ಎಂದು ಅಲೆಮಾರಿ ಜನಾಂಗ ಆಗ್ರಹಿಸಿದರು, ಪ್ರತಿಭಟನೆ ನೇತೃತ್ವ ನಾಗನಾಥ್ ವಾಕುಡೆ, ವಹಿಸಿದರು ಪ್ರತಿಭಟನಾ ನಿರತರಿಗೆ ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ಸುಧಾಕರ ಕೊಳ್ಳುರ ಅವರು ಬೆಂಬಲ ಸೂಚಿಸಿ, ಮಾತನಾಡಿ ಸುಮಾರು ವರ್ಷಗಳಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ಈ ಸಮುದಾಯಗಳು ಜನರು ಹೋರಾಟ ನಡೆಸುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಯಾರು ಬಂಧಿಸುತ್ತಿಲ್ಲ ಇವರ ಜೀವನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋತರ ಇವರ ಬದುಕಿನಲ್ಲಿ ಸರ್ಕಾರ ಭೂಮಿ ಮಂಜೂರಾತಿ ಮಾಡಿಕೊಟ್ಟರು ಅಧಿಕಾರಿಗಳು ನಿವೇಶನ ಹಂಚಿಕೆ ಮಾಡಿಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಬಂಟಿ ದರಬಾರೆ ಮಾತನಾಡಿ ಕೂಡಲೆ ನಿವೇಶನ ಕೊಡುವಲ್ಲಿ ಮುಂದಾಗಬೇಕು ಇಲ್ಲದ್ದಿದರೆ ಜಿಲ್ಲಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂಧರ್ಭದಲ್ಲಿ ಬಸವರಾಜ್ ಶೆಟಕಾರ, ಸಂತೋಷ್ ಸಿಂದೆ, ರಾಜೇಂದ್ರ ನಾಯಕ್, ಲಕನ್ ಲಾಧೇಕರ್,ದಿಲೀಪ್ ಮುಂತಾದವರು ಉಪಸ್ಥಿತರಿದ್ದರು.
ಸ್ಥಳಕ್ಕೆ ತಹಸಿಲ್ದಾರ್ ಅರುಣ್ಕುಮಾರ್ ಕುಲಕರಣಿ, ಉಪ ತಹಸೀಲ್ದಾರ ಮಲಶೇಟ್ಟಿ ಚಿದ್ರೆ, ಬಿಸಿಎಂ ತಾಲೂಕ ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಭೇಟಿನೀಡಿ ವಾರದೊಳಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಹೇಳಿದ ನಂತರ ಪ್ರತಿಭಟನೆ ಹಿಮ್ಮ ಪಡೆಯಲಾಯಿತು,