Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಸಮುದಾಯ ಭವನ ಉದ್ಘಾಟಿಸಿದ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ಜೂ.11): ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಚಿಟಗುಪ್ಪಾ ತಾಲೂಕಿನ ನಿರ್ಣಾ ಹಾಗೂ ಇತರೆ ಹದಿನೈದು ಗ್ರಾಮಗಳ ಎಸ್ಟಿ ಓಣಿಯಲ್ಲಿ ನಡೆಯಲಿರುವ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ನಿರ್ಣಾ ಗ್ರಾಮದಲ್ಲಿ ಚಾಲನೆ ನೀಡುವ ಮೂಲಕ, ಅದೇ ಗ್ರಾಮದಲ್ಲಿ ಸುಮಾರು ಐವತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಎಸ್.ಟಿ ಸಮುದಾಯ ಭವನವನ್ನು ವಿಧಾನ ಪರಿಷತ್ ಹಂಗಾಮಿ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ವಿಧಾನ ಪರಿಷತ್ ಹಂಗಾಮಿ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆ ರವರು, ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಾಣ ಮಾಡಲಾಗುವ ಸಮುದಾಯ ಭವನಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಅವುಗಳನ್ನು ಒಳ್ಳೆಯ ಕೆಲಸಗಳಿಗೆ, ಶುಭ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದರು.
ಗ್ರಾಮಗಳಲ್ಲಿ ನಿರ್ಮಾಣವಾಗುವ ಸಮುದಾಯ ಭವನಗಳ ನಿರ್ವಹಣೆಗಾಗಿ ಎಲ್ಲರೂ ಸೇರಿ ಸಂಘ ರಚಿಸಿಕೊಂಡು ಅದನ್ನು ನಿರ್ವಹಣೆ ಮಾಡಬೇಕು. ಕಾಲಕಾಲಕ್ಕೆ ಆಗಬೇಕಾಗಿರುವ ದುರಸ್ತಿ ಕೆಲಸಗಳನ್ನು ಆ ಸಂಘದ ಮೂಲಕ ಮಾಡಿಕೊಳ್ಳಬೇಕು. ಸಮುದಾಯದ ಮತ್ತು ಅನ್ಯ ಸಮುದಾಯದ ಶುಭ ಕಾರ್ಯಗಳಿಗೆ ಸಮುದಾಯ ಭವನಗಳನ್ನು ನೀಡಬೇಕು ಎಂದರು.
ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ನಮ್ಮ ಪಕ್ಷ ದೊಡ್ಡಮಟ್ಟದ ಜವಾಬ್ದಾರಿ ನೀಡಿದೆ. ಅದು ನಿಮ್ಮೆಲ್ಲರ ಹಾರೈಯ ಫಲದಿಂದ ಸಾಧ್ಯವಾಗಿದೆ. ಶ್ರೀರಾಮುಲುರವರು ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿಯ ಮುನ್ಸಿಪಾರ್ಟಿಯ ಸದಸ್ಯನಾಗಿದ್ದ ವೇಳೆ ನಾನು ಬಿಜೆಪಿ ಪಕ್ಷದ ಯುವ, ಎಸ್ಟಿ ಮೋರ್ಚಾದ ಅಧ್ಯಕ್ಷನಾಗಿದ್ದೆ. ಆ ವೇಳೆ ಶ್ರೀರಾಮುಲರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದೆ. ಆಗಿನಿಂದಲೂ ಅವರು ನನ್ನನ್ನ ಗೌರವದಿಂದ ಕಾಣುತ್ತಿದ್ದಾರೆ.


ಈಗ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 75 ಲಕ್ಷ ರೂ. ವೆಚ್ಚದ ಐದು ಸಮುದಾಯ ಭವನಗಳನ್ನು ಶ್ರೀರಾಮುಲುರವರು ನನಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮನ್ನಳ್ಳಿ, ಕಮಠಾಣಾ, ಬಗದಲ್, ನಾವದಗೇರಿ, ಠಾಣಾ ಕುಸನೂರು ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತದೆ. ನಾನೇನು ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲ್ಲ. ಆಗೆನಾದರು ಅವಕಾಶ ಸಿಕ್ಕರೆ ನಾನು ಬೀದರ್ ಉತ್ತರ ಕ್ಷೇತ್ರದಲ್ಲಿ ನಿಲ್ಲುತ್ತೇನೆ.
ಸಾಧ್ಯವಾದರೇ ನಮಗೆ ಉಪಕಾರ ಮಾಡಿದವರ ಋಣವನ್ನು ನಾವು ತೀರಿಸಿಬೇಕು. ಅದೇ ನನ್ನ ಸೈದ್ಧಾಂತಿಕ ಸಿದ್ದಾಂತವಾಗಿದೆ. ನಾನು ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ನನಗೆ ಈ ಭಾಗದ ಜನರು ಮತ ನೀಡಿದ್ದಾರೆ. ನಾನು ಆಗಾಗಿ ಆ ಉಪಕಾರ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಗೊಂಡ ಸಮಾಜದ ತಾಂತ್ರಿಕ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ವಿಧಾನ ಪರಿಷತ್ ಹಂಗಾಮಿ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು ಹೇಳಿದರು.
ಬಳಿಕ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ನಿರ್ಣಾ ಗ್ರಾಮದಲ್ಲಿ ಐವತ್ತು ಲಕ್ಷ ರೂ. ಮೌಲ್ಯದ ಎಸ್ಟಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಅದರ ಸದುಪಯೋಗವಾಗಬೇಕು. ಇಲ್ಲಿಯೇ ಅಡುಗೆ ಕೋಣೆಯ ಅವಶ್ಯಕತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಡುಗೆ ಕೋಣೆ ನಿರ್ಮಾಣಕ್ಕೆ ಐದು ಲಕ್ಷ ರೂ. ಅನುದಾನ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ ಎಂದರು.
ಗೊಂಡ ಸಮಾಜದ ತಾಂತ್ರಿಕ ಸಮಸ್ಯೆಯನ್ನು ಸರಿ ಪಡಿಸುವ ನಿಟ್ಟಿನಲ್ಲಿ ದೆಹಲಿಯವರೆಗೂ ನಿಯೋಗಗಳನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗಿದೆ. ಸಮಾಜದ ಜನಪ್ರತಿನಿಧಿಗಳು, ಮುಖಂಡರ ನಿಯೋಗದಿಂದ ಕೇಂದ್ರದ ನಾಯಕರ ಗಮನಕ್ಕೆ ಈ ಸಮಾಜದ ಸಮಸ್ಯೆಯನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗಿದ್ದು, ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ವಿಶ್ವಾಸವಿದೆ.


ನಮ್ಮ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಹಣ ಒದಗಿಸಿಕೊಡುವುದು ಕಷ್ಟಕರವಾಗಿದೆ. ಸಾಧ್ಯವಾದಷ್ಟು ಆ ರೀತಿಯ ಪ್ರಯತ್ನ ಮಾಡುತ್ತೇನೆ. ರಸ್ತೆ ಸುಧಾರಣೆ, ಕುಡಿಯುವ ನೀರಿನ ವ್ಯವಸ್ಥೆ, ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡುವ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.


ಇದೇ ವೇಳೆ ಪ್ರಮುಖರಾದ ಬಸವರಾಜ ಮಾಳಗೆ, ಬಾಬುರಾವ್ ಮಲ್ಕಾಪೂರೆ, ಮಹಾಂತೇಶ ಕೌಜಲಗಿ, ಶಕುಂತಲಾ ಬೆಲ್ದಾಳೆ, ಮಾರುತಿ ಪಂಚಬಾಯಿ, ಅಮೃತರಾವ್ ಚಿಮ್ಕೊಡೆ, ಪತ್ರಕರ್ತ ವೀರೇಶಕುಮಾರ್ ಮಠಪತಿ ಸೇರಿದಂತೆ ಅನೇಕರು ಮಾತನಾಡಿದರು. ಕರಕನಳ್ಳಿಯ ರಾಜಪ್ಪ ಮುತ್ಯಾ, ಭೀರಪ್ಪಾ ಜಿ ಮಾರ್ಥಂಡ, ಸಂಜೀವ್ ರೆಡ್ಡಿ ನಿರ್ಣಾ, ಮಾರುತಿ ಪಂಚಬಾಯಿ, ಅಹಲ್ಯಾಬಾಯಿ ಅಂಖಾಡೆ, ಜಗನ್ನಾಥ ರೆಡ್ಡಿ ಎಖ್ಖೆಳ್ಳಿ, ಚನ್ನಪ್ಪ ಸೊಪ್ಪಣ್ಣ, ಶಂಕರರಾವ್ ಪಾಟೀಲ್, ಸುಭಾಷ್ ಖಾಶೆಂಪುರ್, ರಸುಲಸಾಬ್ ಲಶ್ಕರಿ, ಕಲಾವತಿ ಬಸಪ್ಪ, ಮಲ್ಲಿಕಾರ್ಜುನ ರಾಜಗೇರಾ, ಬಸವರಾಜ ಬನ್ನಳ್ಳಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿದ್ದರು.