Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಶಾಮ ಪ್ರಸಾದ್ ಮುಖರ್ಜಿ ಅವರ ಆದರ್ಶರಾಗಿ : ರಾಮಶೇಟ್ಟಿ ಪನ್ನಾಳೆ

ಈ ದೇಶ ಕಂಡ ಧೀಮಂತ ನಾಯಕ, ರಾಜನೀತಿಜ್ಞ, ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯ ನಿಮಿತ್ತ ಭಾಜಪ ಚಿಂತಾಕಿ ಮಹಾ ಶಕ್ತಿ ಕೇಂದ್ರ ವತಿಯಿಂದ ಮಂಡಲ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ ಅವರ ನೇತೃತ್ವದಲ್ಲಿ ಆಚರಿಸಲಾಯಿತು.

ಔರಾದ ತಾಲೂಕಿನ ನಾಗಮಪಲ್ಲಿ ಗ್ರಾಮದಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಸಸಿ ನೆಟ್ಟು ಬಳಿಕ ಸೀಡ್ ಬಾಲ್ ಗಳನ್ನು ರಚಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.

ಭಾಜಪಾ ಮಂಡಲ ಅಧ್ಯಕ್ಷರಾದ ಶ್ರೀ ರಾಮಶೇಟ್ಟಿ ಪನ್ನಾಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಅಭಿಯಾನದ ಪ್ರಕ್ರಿಯೆಯು ಔರಾದ ಮಂಡಲದ ವತಿಯಿಂದ 1ಲಕ್ಷ ಸೀಡ್ ಬಾಲ್ ಹಾಗೂ 5 ಸಾವಿರ ಸಸಿ ನೆಡುವ ಸಂಕಲ್ಪ ಹೊಂದಿದೆ ಜೊತೆಗೆ ಕೆರೆಗಳ ಸ್ವಚ್ಚತಾ ಕಾರ್ಯ ಮತ್ತು ಪರಿಸರ ಉಳಿವಿಗಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಖರ್ಜಿ ಯವರ ತ್ಯಾಗ ಬಲಿದಾನಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡೋಣ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ ಮಾತನಾಡಿ ಶಾಮ ಪ್ರಸಾದ ಮುಖರ್ಜಿಯವರ ಜೀವನ ಚರಿತ್ರೆ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.
ಈ ಸಂಧರ್ಭದಲ್ಲಿ ದಯಾನಂದ ಹಳಿಖೇಡೆ ಚಿಂತಾಕಿ ಮಹಾ ಶಕ್ತಿ ಕೇಂದ್ರದ ಅದ್ಯಕ್ಷ ರವಿಂದ್ರ ರೆಡ್ಡಿ ಪಕ್ಷದ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.