Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಔರಾದ ಬಿಸಿಎಮ್ ವಸತಿ ನಿಲಯದ ಮಕ್ಕಳು ರಾಷ್ಟ ಮಟ್ಟಕ್ಕೆ ಆಯ್ಕೆ

ಔರಾದ ಪಟ್ಟಣದ ಬಿಸಿಎಮ್ ಬಾಲಕಿಯರ ವಸತಿ ನಿಲಯದ ಏಳು ವಿದ್ಯಾರ್ಥಿನಿಯರು ರಾಷ್ಟ ಮಟ್ಟಕ್ಕೆ ಆಯ್ಕೆ ಬೆಳಗಾವಿಯಲ್ಲಿ ದಿನಾಂಕ 27ರಂದು ನಡೆದ ಪೆಂಕಾಕ್ ಸಿಲಾತ್ ದಕ್ಷಿಣ ವಲಯ ಟೂರ್ನಿಯಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ ಔರಾದ ತಾಲೂಕಿನ ಮಕ್ಕಳು

ಬೀದರ್ ಜಿಲ್ಲೆಯ ಔರಾದ ತಾಲೂಕಿನ ಏಳು ಮಕ್ಕಳು ರಾಷ್ಟ್ರಮಟ್ಟದ ಪೆಂಕಾಕ್ ಸಿಲಾತ್ ಮುಕ್ತ ಚಾಂಪಿಯನ್‍ಷಿಪ್ ಟೂರ್ನಿಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಬೆಳಗಾವಿಯಲ್ಲಿ ನಡೆದ ದಕ್ಷಿಣ ವಲಯ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿ ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಸಂಗೀತಾ ಬಿರಾದಾರ ಔರಾದ ಕಛೇರಿಯಲ್ಲಿ ವಿದ್ಯಾರ್ಥಿ ನಿಯರಿಗೆ ಸನ್ಮಾನಿಸಿ ಸಿಹಿತಿನಿಸಿ ಗೌರವಿಸಿದ್ದಾರೆ
ಟೆಂಡಿಂಗ್‍ನಲ್ಲಿ ಸುಪ್ರಿಯಾ ತಂ ಸಂಜುಕುಮಾರ (ಬೆಳ್ಳಿ), ಶಿಲ್ಪಾ ಉತ್ತಮ (ಕಂಚು), ವೈಷ್ಣವಿ ಮಲ್ಲು ಆರ್ (ಕಂಚು), ವೈಷ್ಣವಿ ಮಲ್ಲು ಆರ್ (ಕಂಚು),ಪೂಜಾ ಬಾಬುರಾವ ಕಂಚಿನ ಪದಕಗಳನ್ನು ಜಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ದಕ್ಷಿಣ ವಲಯ ಟೂರ್ನಿಯಲ್ಲಿ ವಸತಿ ನಿಲಯದ ಮಕ್ಕಳು ಉತ್ತಮ ಸಾಧನೆ ತೋರಿ ಮೆಚ್ಚುಗೆ ಗಳಿಸಿದ್ದಕ್ಕೆ ತಾಲೂಕು ಅಧಿಕಾರಿ ಸಂಗೀತಾ ಬಿರಾದಾರ,ನಿಲಯ ಮೆಲ್ವಚಾಲಕೆ ವಾಣಿ ಶ್ರೀ, ಕಛೇರಿ ಸಿಬಂಧಿ ವಿಜಯಕುಮಾರ್, ಪ್ರಭುರಾವ,ಶಿವಕುಮಾರ್ ಮಾಳಗೆ ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು.