Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಫಸಲ್ ಬೀಮಾ ಯೋಜನೆ : ಔರದ್ /ಕಮಲನಗರ ತಾಲ್ಲೂಕಿನ ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರ  ಎಂ, ಎ,ಕೆ  ಅನ್ಸಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಈ ಯೋಜನೆಯಡಿ ತಿಳಿಸಿರುವ ಔರದ ತಾಲ್ಲೂಕು  ಮುಖ್ಯ ಬೆಳೆಗಳು ತೋಗರಿ( ಮ,ಆ) ಸೋಯಅವರೆ( ಮ,ಆ)  ಇತರ ಬೆಳೆಗಳು  ಉದ್ದು( ಮ,ಆ)  ,ಎಳ್ಳು( ಮ,ಆ)   ಜೋಳ( ಮ,ಆ) , ಹತ್ತಿ( ಮ,ಆ)  ,ಹೆಸರು  ( ಮ,ಆ)

ಕಮಲನಗರ  ತಾಲ್ಲೂಕು ಮುಖ್ಯ ಬೆಳೆಗಳು ತೊಗರಿ( ಮ,ಆ)  ,ಸೋಯಾ ಅವರೆ ( ಮ,ಆ),ಇತರ ಬೆಳೆ ಬೆಳೆಗಳು  ಉದ್ದು( ಮ,ಆ)  ,ಎಳ್ಳು( ಮ,ಆ)   ಜೋಳ( ಮ,ಆ) , ಹೆಸರು  ( ಮ,ಆ)

ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು.

:ಬೆಳೆ ವಿಮೆಯನ್ನು ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕಗಳು ಇಂತಿವೆ:

ಜೋಳಕ್ಕೆ (ಮಳೆಯಾಶ್ರಿತ) ಜುಲೈ.31, ಹತ್ತಿ ಬೆಳೆಗೆ (ನೀರಾವರಿ/ಮಳೆಯಾಶ್ರಿತ) ಜುಲೈ.31,   ಉದ್ದು (ಮಳೆಯಾಶ್ರಿತ) ಜುಲೈ.31,ಹೆಸರು (ಮಳೆಯಾಶ್ರಿತ) ಜುಲೈ.31, ನೆಲಗಡಲೆ (ಮಳೆಯಾಶ್ರಿತ) ಜುಲೈ.31 ಸೋಯಾಅವರೆ (ನೀರಾವರಿ ) ಜುಲೈ.31 ,ತೊಗರಿಗೆ (ಮಳೆಯಾಶ್ರಿತ) ಆ.16, ಎಳ್ಳು (ಮಳೆಯಾಶ್ರಿತ) ಜುಲೈ 31, ಕೊನೆಯ ದಿನಾಂಕವಾಗಿದೆ ,

ಈ ಮೇಲ್ಕಂಡ ನಿಗದಿಪಡಿಸಿದ ಅವಧಿಯೊಳಗೆ ರೈತರು ಬ್ಯಾಂಕುಗಳಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ತಿಳಿಸಿದ್ದು, ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‍ಗಳು/ಸಾರ್ವಜನಿಕ ಸೇವಾ ಕೇಂದ್ರಗಳನ್ನು ( Common Service Centers) ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಬೆಳೆ ಸಾಲ ಪಡೆದ ರೈತರು ಇಚ್ಛೆ ಪಡದೇ ಇದ್ದಲ್ಲಿ ತಮ್ಮ ವ್ಯಾಪ್ತಿಯ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೊಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಛಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.

pasala bhim yojane

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮತ್ತು ತಾಲ್ಲೂಕು ಮಟ್ಟದ ವಿಮಾ ಸಿಬ್ಬಂದಿ ದೂರವಾಣಿ ಸಂಖ್ಯೆ 9741168044,ವಿಮಾ ಸಂಸ್ಥೆಯ ಉಚಿತ ದೂರವಾಣಿ ಸಂಖ್ಯೆ :1800-200-5142ಗೆ   ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

for more information visit :https://pmfby.gov.in/