Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love
ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಿ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ರೈತರಿಗೆ ಇಂಧನದ ವೆಚ್ಚ ನೀಡಲಿದೆ ಸರ್ಕಾರಕೃಷಿ ಇಲಾಖೆಯ ವತಿಯಿಂದ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಿ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ರೈತರಿಗೆ ಇಂಧನದ ವೆಚ್ಚದ ಮೇಲೆ ಸಹಾಯಧನವನ್ನು ನೀಡಲಾಗುತ್ತಿದೆ.

ಪ್ರತಿ ಎಕರೆಗೆ ರೂ. 250 ರಂತೆ ಗರಿಷ್ಠ 5 ಎಕರೆಯವರೆಗೆ ಡಿ.ಬಿ.ಟಿ (DBT) ಮೂಲಕ ಡೀಸೆಲ್‌ ಸಹಾಯಧನ ನೀಡುವ “ರೈತಶಕ್ತಿ” ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.ರೈತರ ಹಿಡುವಳಿ ಆಧಾರದ ಮೇಲೆ ಗರಿಷ್ಕ 5 ಎಕರೆಯವರೆಗೆ ಡೀಸೆಲ್‌ ಸಹಾಯಧನ ಒದಗಿಸಲಿದ್ದು, ಫ್ರೂಟ್‌ ಪೋರ್ಟಲ್‌ನಲ್ಲಿ (FRUITS Portal) ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ಸಹಾಯಧನ ವರ್ಗಾವಣೆಯಾಗಲಿದೆ.
ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ಜಮೀನಿನ ಎಲ್ಲಾ ಸರ್ವೇ ನಂಬರ್‌ಗಳ ವಿಸ್ತೀರ್ಣವನ್ನು ಫೂಟ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಬೇಕು.ಇದುವರೆಗೆ ಫೂಟ್ ತಂತ್ರಾಂಶದಲ್ಲಿ (FRUITS Portal) ನೋಂದಣಿ ಮಾಡಿಕೊಳ್ಳದ ರೈತರು ಕೂಡಲೇ ನೋಂದಣಿ ಮಾಡಿಸಿಕೊಳ್ಳುವಂತೆ ಚಿಂತಾಕಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ

FRUITS ಪೋರ್ಟಲ್ ನಲ್ಲಿ ನೊಂದಣಿಗೊಂಡ ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಯೋಜನೆಯು ಅರ್ಹತಾಧಾರಿತ ಯೋಜನೆಯಾಗಿರುವುದರಿಂದ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.

ಫೂಟ್ ತಂತ್ರಾಂಶದಲ್ಲಿ (FRUITS Portal) ನೋಂದಣಿ ಮಾಡಿಕೊಳ್ಳದ ರೈತರು ಕೂಡಲೇ ನೋಂದಣಿ ಮಾಡಿಸಿ, ಪ್ರತಿ ಎಕರೆಗೆ ರೂ. 250 ರಂತೆ ಗರಿಷ್ಠ 5 ಎಕರೆಯವರೆಗೆ ಡಿ.ಬಿ.ಟಿ (DBT) ಮೂಲಕ ಡೀಸೆಲ್‌ ಸಹಾಯಧನ ನೀಡುವ “ರೈತಶಕ್ತಿ” ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.ಇದರ ಲಾಭ ರೈತರು ಪಡೆದುಕೊಳ್ಳಬೇಕು

ಅಂಬರೇಶ ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಚಿಂತಾಕಿ