Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಇಂದು ಔರಾದ ನಾಲಂದಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ ಮನ್ಮಥ ಡೊಳೆ ಅವರಿಗೆ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಎಬಿವಿಪಿ ಔರಾದ ಶಾಖೆ ಹಾಗೂ ಜಿಲ್ಲಾ ಉಪನ್ಯಾಸಕರ ಸಂಘದ ಅದ್ಯಕ್ಷ ಓಂಕಾರ ಸೂರ್ಯವಂಶಿ ಮತ್ತು ನಾಲಂದಾ ಪ್ರೌಢ ಶಾಲೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದ ಅದ್ಯಕ್ಷರಾದ ಓಂಕಾರ ಸೂರ್ಯವಂಶಿ ಮಾತನಾಡಿ ನಮ್ಮ ಸಂಘದಲ್ಲಿ ನಾವು ಚುಣಾವಣೆ ಮಾಡದೆ ಜಿಲ್ಲೆಯ ಎಲ್ಲಾ ಪ್ರಾಚಾರ್ಯರ ಅಭಿಪ್ರಾಯ ಪಡೆದು ಅಚ್ಚುಕಟ್ಟಾಗಿ ಪ್ರಾಮಾಣಿಕ ಸೇವೆ ಮಾಡುವರಿಗೆ ಹಾಗೂ ತನು ಮನ ಧನ ದಿಂದ ಸಂಘದ ಕೇಲಸ ನಿರ್ವಹಿಸುವ ಸೂಕ್ತ ವ್ಯಕ್ತಿ ಡಾ ಮನ್ಮಥ ಡೊಳೆ ನಿರ್ವಹಿಸುತ್ತಾರೆ ಎಂದು ಅವರಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಮೂರು ವರ್ಷದ ಈ ಅವಧಿಯು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಡಾ ಮನ್ಮಥ ಡೊಳೆ ಎಂದರು.ಈ ಸಂಧರ್ಭದಲ್ಲಿ ಪ್ರೌಢ ಶಾಲೆ ಪ್ರಾಚಾರ್ಯ ವಿಶಂಬರಾವ ಕಾಂಬಳೆ,ಅಶೋಕ ಶೇಂಭೆಳ್ಳಿ,ಅಂಬಾದಾಸ ನಳಗೆ,ನೌನಾಥ ಕೊಳಿ,ಕಾಲೇಜಿನ ಉಪನ್ಯಸಕರಾದ ನರಸಿಂಗರಾವ ಬೆಲ್ದಾಳೆ,ಗುಣವಂತ ಮಾಶಟ್ಟಿ,ಮಲ್ಲಿಕಾರ್ಜುನ ಪೂಜಾರಿ,ಪ್ರಕಾಶ ಬಸಲಿಂಗ,ದಿಲೀಪ್ ತಾರೆ,ಎನ್ ಟಿ ಚಿಟ್ಮೆ,ಜೆ ಎಸ್ ಬಿರಾದಾರ,ಸತ್ಯವಾನ ಬಿರಾದಾರ,ಸುನೀಲ ವಾಘಮಾರೆ,ಹಾಗೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.