Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಹಣ ಅಯ್ತು! ಹೆಂಡ ಅಯ್ತು! ಈಗ ಚಡ್ಡಿ ಮುಂದಿಟ್ಟು ಚುನಾವಣೆನಾ?!

ರಾಜ್ಯದಲ್ಲಿ ಪ್ರಜ್ಞಾವಂತ ಚುನಾವಣೆ ನಡೆಯುತ್ತಿವೆ ಅದರೆ ಅಪ್ರಜ್ಞಾವಂತ ರಾಜಕಾರಣಿಗಳು ಏನು ಮಾಡುತ್ತಿದ್ದಾರೆ

ಇಲ್ಲಿಯ ತನಕ ಪ್ರತಿ ಚುನಾವಣೆಯಲ್ಲಿ ಹಣ,ಹೆಂಡ ನೀಡಿ ಮತದಾರರನ್ನು ಖರೀದಿ ಮಾಡುವುದು ವಾಡಿಕೆ ಅಗಿತ್ತು ಅದರೆ ಇವಾಗ ಚಡ್ಡಿಯನ್ನು ಮುಂದಿಟ್ಟು ರಾಜಕೀಯ ಪಕ್ಷಗಳು ಚುನಾವಣೆ ಎದುರಿಸುತ್ತಿವೆ ,ಹಾಗಾದರೆ ಎಲ್ಲಿಗೆ ಬಂದು ನಮ್ಮ ರಾಜ್ಯ ರಾಜಕೀಯ ?

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಹೋದರತೆ ಧಕ್ಕೆ ತರುವ ಅನೇಕ ಘಟನೆಗಳು ಸದ್ದಿಲ್ಲದೇ ಸುದ್ದಿ ಮಾಡುತ್ತಿವೆ,

ರಾಜ್ಯದಲ್ಲಿ ಹಿಜಾಬ್,ಹಲಾಲ್-ಜಟ್ಕಾ,ಹಿಂದೂ ದೇವಾಲಯದಲ್ಲಿ ಮುಸ್ಲಿಂರರಿಗೆ ವ್ಯಾಪಾರ ನಿರ್ಬಂಧ,ಅಝಾನ್,ಪಠ್ಯ ಪುಸ್ತಕ ಕೆಸರೀಕರಣ,ಮಂದಿರದೊಳಗೆ ಮಸೀದಿ ,ಮಸೀದಿ ಒಳಗೆ ಮಂದಿರ ಹೀಗೆ ಸುದ್ದಿಗಳು ರಾರಾಜಿಸುತ್ತಿವೆ,ಮತ್ತೆ ಇವಾಗ ಚಡ್ಡಿ ಸುಡುವ ಕಾರ್ಯಕ್ರಮ ಮತ್ತು ಚಡ್ಡಿ ಸರಬರಾಜು ಮಾಡುವ ಕಾರ್ಯಕ್ರಮ ಜೊರಾಗಿದೆ,

ಇವುಗಳಿಂದ ರಾಜ್ಯದ ಅರ್ಥಿಕತೆ ಏನು ಲಾಭ? ಬಡವನಿಗೆ ಏನು ಲಾಭ?

ರಾಜ್ಯದಲ್ಲಿ ಕಳೆದ ಐದು ವರ್ಷದ ಬೆಳೆವಣಿಗೆ ನೋಡಿದರೆ

1 ವರ್ಷ ಅಪರೇಷನ್ ಕಮಲದಲ್ಲಿ

2 ವರ್ಷ ಕೋವಿಡ್ ನಲ್ಲಿ

1 ವರ್ಷ ಕೊಮುವಾದಿ ಸಂಘರ್ಷದಲ್ಲಿ

ಇನ್ನು ಮುಂದಿನ 1 ವರ್ಷ ಚುನಾವಣೆಯಲ್ಲಿ  ಹಾಗಾದರೆ ರಾಜ್ಯದ ಅಭಿವೃದ್ದಿ ಎಲ್ಲಿಗೆ ಹೋಯಿತ್ತು ?

ಬಡ ಜನರಿಗೆ ಬದುಕುವುದಕ್ಕೆ ಬೇಕಾಗಿದ್ದು ಮಂದಿರ ಮಸೀದಿಗಳು ಅಲ್ಲ ,

ಉದ್ದ ಉದ್ದದ ಬಜೆಟ್ ಮಂಡನೆ ದುಡ್ಡು ಯಾರ ಪಾಲಾಯಿತ್ತು?

ಅಡಳಿತಾತ್ಮಕ ಪಕ್ಷಗಳ ತಪ್ಪುಗಳನ್ನು ತೋರಿಸಬೇಕಿದ್ದ ವಿರೋಧ ಪಕ್ಷದವರು ಚಡ್ಡಿ ಸುಡುವ ಕಾರ್ಯಕ್ರಮದಲ್ಲಿ ಬ್ಯೂಸಿ ಅಗಿದ್ದಾರೆ,ಅಡಳಿತ ಪಕ್ಷದವರು ಚಡ್ಡಿ ಸರಬರಾಜು ಮಾಡುತ್ತಿದ್ದಾರೆ,

ಗೌಪ್ಯವಾಗಿ ಇಡಬೇಕಿದ್ದ ಚಡ್ಡಿ ನಮ್ಮ ರಾಜ್ಯದಲ್ಲಿ ಬಹಿರಂಗಕ್ಕೆ ಬಂತು…