Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love



ಬೀದರ: ತಮ್ಮ ಗ್ರಾಮಕ್ಕೆ ರಸಗೊಬ್ಬರ ತಲುಪಿದ್ದರೂ ರೈತರಿಗೆ ಹಂಚಿಕೆಯಾಗುತ್ತಿಲ್ಲ ಎಂಬ ದೂರು ಹೇಳಿದ ರೈತನ ಮಾತಿಗೆ ರಸಗೊಬ್ಬರ ಖಾತೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಉಡಾಫೆಯ ಮಾತನಾಡಿದರೆಂಬ ಕಾರಣಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ,.

ಇವರಿಬ್ಬರ ನಡುವಿನ ಫೋನ್ ಸಂಭಾಷಣೆಯ ರಿಕಾರ್ಡ್ ವೈರಲ್ ಆಗಿದೆ ನಮ್ಮ ಊರಲ್ಲಿ ಗೊಬ್ಬರ ಸಿಗುತ್ತಿಲ್ಲ ಸರ್ ಅಂತ ರೈತ ಪ್ರಶ್ನೆ ಕೇಳಿದ್ದಕ್ಕೆ ಮೊದಲು ಕೊಡಿಸೋಣ ಎಂದು ಆರಂಭಿಸಿದ ಸಚಿವರು ಆಮೇಲೆ ನಾನೇನು ಮಾಡಲಿ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳು ಹೋಗು ಎಂದು ದಬಾಯಿಸಿದ್ದಾರೆ.

ರಸಗೊಬ್ಬರ ಕೇಳಿದ ರೈತನಿಗೆ ಬೀದರ್ ಸಂಸದ ಭಗವಂತ ಖೂಬಾ ಅವರಿಂದ ಉಡಾಫೆ ಉತ್ತರ

ನಾನೊಬ್ಬನೇ ಇಲ್ಲ ಸಾವಿರಾರು ಜನ ನೌಕರರು ಇದಾರೆ ಅವರು ನೋಡಿಕೊಳ್ಳುತ್ತಾರೆ ಹೋಗು ಅಲ್ಲಿಗೆ ನನ್ನ ಕೆಲಸ ಗೊಬ್ಬರವನ್ನು ರಾಜ್ಯಕ್ಕೆ ಕಳಿಸೋದಿದೆ, ಕಳಿಸಿದ್ದೇನೆ ಅಷ್ಟೇ. ಅಲ್ಲಿನ ಶಾಸಕ ಇದಾನಲ್ಲ ಅವನ್ನ ಕೇಳು ಎಂದು ಶಾಸಕರ ವಿರುದ್ಧ ಏಕವಚನ ಶಬ್ದ ಉಪಯೋಗ ಮಾಡಿದ ಕೇಂದ್ರ ಸಚಿವ. ಅವನ್ನ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ವಾ,..?ಎಂದು ಉಡಾಫೆ ಉತ್ತರ ನೀಡಿದರು.

 ಇದಕ್ಕೆ ಉತ್ತರವಾಗಿ ರೈತ, ಮುಂದಿನ ಬಾರಿ ಹೇಗೆ ಆರಿಸಿ ಬರುತ್ತೀರಿ ನೋಡಿ ಎನ್ನುತ್ತಾನೆ. ಚುನಾವಣೆಯಲ್ಲಿ ಹೇಗೆ ಗೆದ್ದು ಬರಬೇಕೆಂದು ನನಗೆ ಗೊತ್ತಿದೆ. ಅಲ್ಲಿನ ಶಾಸಕರು ಇದಾರೆ, ಅಧಿಕಾರಿಗಳು ಇದಾರೆ ಅವರಿಗೆ ಹೋಗಿ ಕೇಳು. ಭಾರತ ಸರ್ಕಾರದ ಮಂತ್ರಿ ಇದ್ದೇನೆ, ರಾಜ್ಯಗಳನ್ನ ಮಾತ್ರ ನೋಡಿಕೊಳ್ಳುತ್ತೇನೆ. ಏನ್ ಮಾಡಿಕೊಳ್ಳುತ್ತೀಯಾ ಮಾಡಿಕೋ ಹೋಗು ಎಂದು ಕ್ಷೇತ್ರದ ಜನರಿಗೆ ಉಡಾಫೆ ಉತ್ತರ ನೀಡಿದರು ಖೂಬಾ.




One thought on “ರಸಗೊಬ್ಬರ ಕೇಳಿದ ರೈತನಿಗೆ ಬೀದರ್ ಸಂಸದ ಭಗವಂತ ಖೂಬಾ ಅವರಿಂದ ಉಡಾಫೆ ಉತ್ತರ

Comments are closed.