Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಗೋಮಾತ ,ನಮ್ಮ ಮಾತ ಎನ್ನುವ ಸಚಿವರೇ ಎಲ್ಲಿದ್ದಿರೀ ?

ಪಶುಗಳ ಪಾಲನೆ, ಪೋಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ  ಅದರೆ ಇಂದಿಗೂ ಕೆಲವು ಕಡೆ ವೈದ್ಯರ ನಿರ್ಲಕ್ಷ್ಯದಿಂದ ಮೂಕ ಪ್ರಾಣಿಗಳು ಸಂಕಷ್ಟ ಅನುಭವಿಸುವಂತಾಗುತ್ತಿರುವುದು ನೋವಿನ ಸಂಗತಿ ಅಗಿದೆ ,

 ಈ ಘಟನೆ ಬೇರೆ ಜಿಲ್ಲೆಯಲ್ಲಿ ಅದರೆ ಸುಮ್ಮನಾಗಿಬಹುದಾಗಿತ್ತು ಅದರೆ ಇದು ನಡೆದಿದ್ದು ಪಶು ಸಂಗೋಪನಾ ಇಲಾಖೆ ಸಚಿವರ ತವರು ಜಿಲ್ಲೆ ಬೀದರನಲ್ಲಿ ಪ್ರತಿ ದಿನ ಪಶು ಸಂಗೋಪನೆ ಸಚಿವರು ತಮ್ಮ ಮನೆಗೆ ಹೋಗುವಾಗ  ಇದೇ ಗ್ರಾಮದ ಮೇಲಿಂದ ಹಾದು ಹೋಗುತ್ತಾರೆ ಅದರೂ ಕೂಡ ಸಚಿವರು ಇತ್ತ ಕಡೆ ಗಮನ ಹರಿಸಿಲ್ಲ

ಪಶು ಆಸ್ಪತ್ರೆಗಳ ನಿರ್ವಹಣೆ, ಚಿಕಿತ್ಸೆ ಕಚೇರಿ ಕೆಲಸ ಅಧಿಕಾರಿಗಳು ಉತ್ತಮವಾಗಿ ನಿರ್ವಹಿಸದೇ, ಸರ್ಕಾರದ ಕೋಟಿ ಕೋಟಿ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,ಹೌದು, ಬೀದರ್ ಜಿಲ್ಲೆಯ ಮರಖಲ್ ಗ್ರಾಮದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಔಷಧಿಗಳಿವೆ. ಆದರೆ ಆ ಔಷಧಿಗಳು ಪಶುಗಳಿಗೆ ಉಪಯೋಗಕ್ಕೆ ಬಾರದೆ  ಹಾಳಾಗುತ್ತಿವೆ .

 ಇಲ್ಲಿಯ ಪಶು ವೈದ್ಯರು ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಪಶುಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ ಈ ಆಸ್ಪತ್ರೆಯನ್ನು ಅವಲಂಬಿಸಿದ ಸುತ್ತಮುತ್ತಲಿನ ಊರುಗಳಾದ  ಮರಖಲ್, ಚಿಕ್ಕಪೇಟ್, ಬೇನಕನಳ್ಳಿ ಸೇರಿ ಇನ್ನೂ ಅನೇಕ ಹಳ್ಳಿಗಳ ರೈತರು ತಮ್ಮ ಜಾನುವಾರುಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ತರುತ್ತಾರೆ.

ಆದರೆ ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಸಿಗದೆ ರೈತರು ಬಂದ ದಾರಿಯಲ್ಲೇ  ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮನೇಕೊಪ್ಪ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಇತ್ತ ಗಮನ ಹರಿಸಿ ಪಶು ಆಸ್ಪತ್ರೆ ಕುರಿತು ಮಾಹಿತಿ ಪಡೆದು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ,