Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ವ್ಯಕ್ತಿಗಳ ಜೊತೆ ಸ್ನೇಹ ಬೆಳೆಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಹಣದ ಜೊತೆ ಮಾನ-ಮರ್ಯಾದೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಕೆಲ ಯುವತಿಯರ ಸೌಂದರ್ಯಕ್ಕೆ ಮರುಳಾಗಿ ಅವರ ಬಲೆ ಬಿದ್ದರಂತೂ ಅದರಿಂದ ಹೊರಬರಲು ಹರಸಾಹಸ ಪಡಬೇಕಾಗುತ್ತದೆ ,

ಪ್ರಸುತ್ತ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಹಿಂದೆ ಬಿದ್ದ ಅಮಾಯಕ  ವ್ಯಕ್ತಿಯೊಬ್ಬರು  ಹಣ ಕಳೆದುಕೊಂಡು ಪರದಾಡುತ್ತಿರುವ ಪ್ರಕರಣ ಬೆಂಗಳೂರು  ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ಸುಂದರವಾಗಿರುವುದನ್ನು ನೋಡಿ ಮರುಳಾದ ಸಂತ್ರಸ್ತ ಆಕೆಯೊಂದಿಗೆ ಮೊದಲು ಚಾಟಿಂಗ್ ​ ನಂತರ ವಿಡಿಯೋ ಕಾಲ್​ ಮಾಡಲು ಶುರುಮಾಡಿದ

 ಇವರ ಇಬ್ಬರ ನಡುವೆ ತುಂಬಾ ಸಲುಗೆ ಬೆಳೆದಾಗ ಯುವತಿಯೊಂದಿಗೆ ಸಂತ್ರಸ್ತ ವ್ಯಕ್ತಿ ಫುಲ್ ಖುಷಿಯಾಗಿ   ಅಶ್ಲೀಲ ವಿಡಿಯೋ ಕಾಲ್​ ಸಹ ಮಾಡಿದ್ದಾನೆ. ಆದರೆ, ಅವಳು ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡಿರುವುದು ಸಂತ್ರಸ್ತ ವ್ಯಕ್ತಿ ಗೆ ಗೊತ್ತೇ ಇಲ್ಲ. ಆ ಯುವತಿಯ ಸೌಂದರ್ಯಕ್ಕೆ ಮರುಳಾಗಿ ಬೆತ್ತಲಾದ ಸಂತ್ರಸ್ತನಿಗೆ ನಂತರ ಎದುರಾಗಿದ್ದು, ಸಂಕಷ್ಟಗಳ ಸರಮಾಲೆ.

ವಿಡಿಯೋ ರೆಕಾರ್ಡ್​ ಮಾಡಿಕೊಂಡಿದರಿಂದ ಯುವತಿ, ವಿಡಿಯೋ ರೆಕಾರ್ಡ್ ಲೀಕ್ ಮಾಡುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಸಾಕಷ್ಟು ಹಣ ನೀಡಿದ್ದ ಸಂತ್ರಸ್ತ ಒಂದು ಹಂತದಲ್ಲಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಆಕೆಯ ಜೊತೆಗಿದ್ದ ಸೈಬರ್​ ಖದೀಮರು ಹಿಡಿದಿದ್ದು ಮಾತ್ರ ಬೇರೆ ದಾರಿ. ವಿಡಿಯೋ ಕಾಲ್ ಮಾಡಿದ್ದ ಸುಂದರಿ ಸಾವಿಗೀಡಾಗಿದ್ದಾಳೆ ಅನ್ನೋ ಕತೆ ಸಹ ಆ ಖದೀಮರು  ಕಟ್ಟಿದರು.

ಆ ಯುವತಿಯ ಸಾವಿಗೆ ನೀನೆ ಕಾರಣ ಅಂತ ಕರೆ ಮಾಡಿ ಹೇಳಿದರು. ಅಲ್ಲದೆ, ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಅಂತಾ ಸುಳ್ಳು ಕೂಡ ಹೇಳಿದರು. ಗೂಗಲ್​ನಲ್ಲಿ ಸಿಗುವ ಸಿಬಿಐನಲ್ಲಿ ದಾಖಲಾಗಿರುವ ಪ್ರಕರಣಗಳ ಲಿಸ್ಟ್ ತೆಗೆದು ಅದರಲ್ಲಿ ದೂರುದಾರನ ಹೆಸರು ಹಾಕಿ, ಅದನ್ನು ತೋರಿಸಿ ವಿಚಾರಣೆಗೆ ಬರುವಂತೆ ಹೇಳಿ ಹಂತ ಹಂತವಾಗಿ ಆ ಸಂತ್ರಸ್ತನಿಂದ 5 ಲಕ್ಷ ರೂಪಾಯಿಗು ಅಧಿಕ ಹಣ ವಸೂಲಿ ಮಾಡಿದ್ದಾರೆ.

ನಿರಂತರ ಕಿರುಕುಳದಿಂದ ಬೇಸತ್ತ ಸಂತ್ರಸ್ತ ಕಡೆಗೆ ಸ್ನೇಹಿತರೊಬ್ಬರಿಗೆ ನಡೆದ ವಿಷಯವನ್ನೆಲ್ಲ ತಿಳಿಸಿ, ಆಗ್ನೇಯ ವಿಭಾಗದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಕ್ಷ ಲಕ್ಷ ಪೀಕಿರುವ ಸುಂದರಿ ಹಾಗೂ ಆಕೆಯ ಗ್ಯಾಂಗ್​ಗಾಗಿ ಬಲೆ ಬೀಸಿದ್ದಾರೆ ಎಂದು ಮಾಹಿತಿ