Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಇಬ್ಬರು ಸಚಿವರ ಸ್ವಂತ ಕ್ಷೆತ್ರದಲ್ಲಿ
ಕೇಸರಿ ನಿಂದ ಕೂಡಿರುವ ಶಾಲಾ ಅವರಣ
ವರದಿ :ಅಂಬಾದಾಸ ಎಸ್ ನಳಗೆ
ಔರಾದ : ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿ ಬರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಆದರ್ಶ ವಿದ್ಯಾಲಯ, ಸರ್ಕಾರಿ ಪದವಿ ಕಾಲೇಜು, ಬಿ ಆರ್ ಸಿ ಕಚೇರಿ, ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಒಟ್ಟು 10 ಎಕ್ಕರೆ ಒಂದೇ ಸ್ಥಳದಲ್ಲಿದ್ದು ಎರಡು ಸಾವಿರ ಮಕ್ಕಳು ಕೆಸರಿನಲ್ಲಿ ಶಾಲೆಗೆ ಹೋಗುವ ದುರಸ್ತಿತಿ ಔರಾದ ಪಟ್ಟಣದಲ್ಲಾಗಿದೆ.
ಆದರ್ಶ ವಿದ್ಯಾಲಯದಲ್ಲಿ ಒಟ್ಟು 400 ವಿದ್ಯಾರ್ಥಿಗಳು, ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 280 ವಿದ್ಯಾರ್ಥಿಗಳು, ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ,ಮರಾಠಿ, ಉರ್ದು ಮೂರು ಮಾಧ್ಯಮದ ಒಟ್ಟು 601 ವಿದ್ಯಾರ್ಥಿಗಳು ,ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 442 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು.
ಒಟ್ಟು 2000 ವಿದ್ಯಾರ್ಥಿಗಳು ಆವರಣದ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದು ವಿದ್ಯಾರ್ಥಿಗಳು ಮಳೆಗಾಲ ಬಂದರೆ ಶಾಲೆಗೆ ಹೋಗುವುದು ಬೇಡ ಅನ್ನುವಂತ ಭಯ ಪಟ್ಟಣದ ಆದರ್ಶ ವಿದ್ಯಾಲಯದ ಅವರಣ ನೋಡಿದರೆ ಗೊತ್ತಾಗುತ್ತದೆ.
ಕೆಸರು ಗದ್ದೆಯಲ್ಲಿ ನಡೆದುಕೊಂಡು ಶಾಲಾ ಕೊಟ್ಟಡಿಗೆ ಹೋಗುವಂತ ಕಷ್ಟಕರ ಸಂಗತಿಯಾಗಿದೆ ಎನ್ನುತ್ತಾರೆ ಮಕ್ಕಳು.
ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಸಿಬ್ಬಂದಿಗಳಿಗು ತುಂಬಾ ಸಮಸ್ಯೆ ಉಂಟಾಗಿದೆ ದಿನನಿತ್ಯ ಕಛೇರಿ ಕೇಲಸಕ್ಕೆ ಅಲೆದಾಡುವ ಶಿಕ್ಷಕರು ಕೇಸರಿ ನಲ್ಲಿಯೇ ಬರುವಂತಾಗಿದೆ ಎನ್ನುತ್ತಾರೆ ಶಿಕ್ಷಕ ಮಹಾದೇವ .
ಸುಮಾರು ವರ್ಷಗಳಿಂದ ಈ ವ್ಯವಸ್ಥೆ ಈ ಆವರ್ಣದಲ್ಲಿದ್ದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ಇದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ ಏಕೆ ಎನ್ನುತ್ತಾರೆ ಪಾಲಕರು.
ಉತ್ತಮವಾದಂತ ತರಗತಿ ಕೋಣೆಗಳಿದ್ದು ಆದರೆ ಸ್ವಲ್ಪ ಮಳೆ ಸುರಿದರು ರಸ್ತೆ ಹಾಗೂ ಸುತ್ತಮುತ್ತಲಿನ ನೀರು ಶಾಲಾ ಆವರಣದಲ್ಲಿ ಸಂಗ್ರಹವಾಗಿ ಕೆಸರಿನ ಗದ್ದೆಯಾಗುತ್ತಿದೆ ಇದರಿಂದ ಮಕ್ಕಳು ಓಡಾಡಲು ತೊಂದರೆ ಅನುಭವಿಸುವಂತಾಗಿದೆ ಕೆಲ ವಿದ್ಯಾರ್ಥಿಗಳು ಜಾರಿಬಿದ್ದು ಗಾಯ ಮಾಡಿಕೊಂಡಿದ್ದಾರೆ ಆಟಕ್ಕು ತೊಂದರೆಯಾಗಿದೆ ಸಾಂಕ್ರಮಿಕ ರೋಗದ ಭೀತಿಯು ಆವರಿಸಿದೆ ಇದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ ಕೂಡಲೇ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತು ಶಾಲಾ ಮೈದಾನವನ್ನು ಸಮತಟ್ಟು ಮಾಡಿ ನೀರು ನಿಲ್ಲದಂತೆ ಹಾಗೂ ರಸ್ತೆ ನಿರ್ಮಾಣದಲ್ಲಿ ತೊಡಗಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.


ಬೈಟ್:1
ಸೂಮಾರು ಬಾರಿ ಜನಪ್ರತಿನಿಧಿ ಅವರಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದೆನೆ ರಸ್ತೆ ವ್ಯವಸ್ಥೆ ಮಾಡಿಸುತ್ತೆನೆ ಎಂದು ಹೇಳಿ ಹೊಗುತ್ತಾರೆ ಮೂರು ವರ್ಷದಿಂದ ಯಾವುದೆ ಸ್ಪಂದನೆ ದೊರೆತಿಲ್ಲ ಮಕ್ಕಳ ಸಮಸ್ಯೆ ಆಲಿಸಿ ಕೂಡಲೆ ವ್ಯವಸ್ಥೆ ಕಲ್ಪಿಸಬೇಕು

ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರುಗಳು
ಮಾಧವ ಜಿ ಬಿಜಾಪೂರೆ .

ಬೈಟ್ 2:
ಮಳೆಗಾಲ ಬಂದರೆ ಕೆಸರಿನಲ್ಲಿಯೆ ಶಾಲೆಗೆ ಹೋಗಿ ಪಾಠ ಮಾಡಬೆಕಾಗುತ್ತದೆ ಆಟ ಆಡುವದಕ್ಕೂ ಸಮಸ್ಯೆ ಆಗುತ್ತಿದೆ ನಮ್ಮ ಬೈಸೈಕಲ್ ಕೂಡ ಬೇರೆಕಡೆ ನಿಲ್ಲಿಸಿ ಬರುತ್ತಿದ್ದೆವೆ ದಯವಿಟ್ಟು ಅವರಣ ಸ್ವಚ್ಛ ಗೊಳಿಸಬೇಕು.

ಅಂತರಿಕ್ಷ ಬಿರಾದಾರ
ಆದರ್ಶ ವಿದ್ಯಾಲಯ ವಿದ್ಯಾರ್ಥಿ