Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರ : ಔರಾದ(ಬಾ) ತಾಲ್ಲೂಕಿನ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಸೋಯಾಅವರೆ ಬೆಳೆಗೆ ಬಸವನ (ಶಂಖದ)
ಹುಳು ಬಾಧೆ ಕಂಡುಬAದಿದ್ದು, ತಾಲ್ಲೂಕಿನಲ್ಲಿ ವಿವಿಧಡೆ ಸೋಯಾಬಿನ್ ಬಿತ್ತನೆ ಕಾರ್ಯ ಪ್ರಗತಿಯಲ್ಲಿರುತ್ತದೆ. ವಾರದ ಹಿಂದೆ
ಬಿತ್ತನೆ ಕೈಗೊಂಡು ಜಮೀನಿನಲ್ಲಿ ಸೋಯಾಅವರೆ ಬೆಳೆ ಮೊಳಕೆ ಒಡೆಯುವ ಹಂತದಲ್ಲಿರುವಾಗ ಹುಳುವಿನ ಬಾಧೆ ಕಾಣಿಸಿರುವುದು
ರೈತರಲ್ಲಿ ಆಂತಕ ಮೂಡಿಸಿರುತ್ತದೆ.


 ತಾಲ್ಲೂಕಿನಲ್ಲಿ ಅತ್ಯಧಿಕ ಸೋಯಾಬಿನ್ ಬೆಳೆಯಲ್ಲಿ ಬೆಳೆಯಾಗುತ್ತಿದೆ. ಪ್ರಸಕ್ತ 55000 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ
ಕೈಗೊಳ್ಳಲಾಗುವ ಈ ಬೆಳೆ ಮುಂಗಾರು ಹಂಗಾಮಿನ ಒಟ್ಟು ಕ್ಷೇತ್ರದ ಅರ್ಧದಷ್ಟಿದೆ ಇದರ ನಡುವೆ ಬೀದರ ಜಿಲ್ಲೆಯಲ್ಲಿ
ಸೋಯಾಅವರೆ ತೋಗರಿ, ಹೆಸರು ಹಾಗು ಉದ್ದು ಬೆಳೆಗಳಿಗೆ ಬಸವನ ಹುಳುವಿನ ಬಾಧೆ ಕಂಡುಬAದಿರುತ್ತದೆ.
 ಪ್ರಯುಕ್ತ ರೈತರು ಪೀಡೆಗೆ ಆಸರೆಯಾಗುವ ಅಡಗು ತಾಣಗಳಾದ ಹುಲ್ಲು, ಬಿದ್ದ ಕಸಕಡ್ಡಿ ಮುಂತಾದವುಗಳನ್ನು ತೆಗೆದು
ಸ್ವಚ್ಚವಾಗಿಡಬೇಕು, ಹೊಲದಲ್ಲಿ ಅಲ್ಲಲ್ಲಿ ಕೃಷಿ ತ್ಯಾಜ್ಯಗಳ ಗುಂಪು ಹಾಕುವುದರಿಂದ ಹುಳುಗಳು ಆಸರೆಗಾಗಿ ಅಡಗಿ ಕೂಡುತ್ತವೆ ಈ
ಗುಂಪುಗಳನ್ನು ಸುಡಬೇಕು, ಹೊಲದ ನಡೆದಾಡುವ ಕಟ್ಟೆ ಅಥವಾ ಅರಣಿಯ ಆರಂಭದಲ್ಲಿ (ಗಡಿ ಗುಂಟ) ಹರಳು (ದಪ್ಪ) ಉಪ್ಪನ್ನು
ಸುರಿಯಬೇಕು. ಸಾಯಂಕಾಲ ಅಥವಾ ಮುಂಜಾನೆ ಸಮಯದಲ್ಲಿ ಕೈಯಿಂದ ಆರಿಸಿ ಗೋಣೆ ಚೀಲದಲ್ಲಿ ಕಲೆಹಾಕಿ ಬಸವನ
ಹುಳುಗಳ ಮೇಲೆ ಉಪ್ಪು ಹಾಕುವುದರಿಂದ ನಾಶಪಡಿಸಬಹುದಾಗಿದೆ
.

ಹಾಗೂ ಹೊಲದಲ್ಲಿ ಅಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿ ಚೀಲ
ಹರಡಿ ಅಥವಾ ಕಳಿತ ಕಸ ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳ ಮೇಲೆ ಬ್ಲೀಚಿಂಗ್ ಪುಡಿ (8-10 ಕಿ.ಗ್ರಾ. ಪ್ರತಿ
ಎಕರೆಗೆ) ಧೂಳಿಕರಿಸಿ ನಾಶಪಡಿಸಬಹುದು ಮತ್ತು ಮೆಟಾಲ್ಡಿಹೈಡ್ (2.5ಶೇ) ಮಾತ್ರೆಗಳನ್ನು ಎಕರೆಗೆ 2 ಕಿ.ಗ್ರಾಂ ನಂತೆ ಹೊಲದಲ್ಲಿ
ಎರೆಚಿದಲ್ಲಿ ಬಸವನ ಹುಳುಗಳು ಈ ಮಾತ್ರೆಗಳಿಗೆ ಆಕರ್ಷಿತವಾಗಿ ಸಾಯುತ್ತವೆ. ಹಾಗೂ ಅಕ್ಕಿ ಅಥವಾ ಗೋಧಿ ತೌಡು 10
ಕಿ.ಲೋ 5 ಕಿ.ಲೋ ಬೆಲ್ಲ ಮತ್ತು ತಕ್ಕ ಮಟ್ಟಿಗೆ ನೀರನ್ನು (6-7.5 ಲೀ) ಬೆರೆಸಿ 36 ಗಂಟೆ ಮುಚ್ಚಿ ಇಡಬೇಕು, ಮರು ದಿನ ಸಂಜೆ
ಮಿಥೋಮಿಲ್ 40 ಎಸ್.ಪಿ. ಕೀಟನಾಶಕವನ್ನು (250 ಗ್ರಾಂ) ಮಿಶ್ರಣ ಮಾಡಿ ಸಾಯಂಕಾಲ ಸಂಜೆ 5 ಗಂಟೆಯ ನಂತರ ಹೊಲದ
ಸುತ್ತ ಅಂಚಿನಲ್ಲಿ ಅಥವಾ ಸಾಲುಗಳಲ್ಲಿ ಚೆಲ್ಲಿದಲ್ಲಿ ಬಸವನ ಹುಳುವಿನ ಬಾಧೆಯ ನಿರ್ವಹಣೆ ಮಾಡಬಹುದಾಗಿದೆ
.

ಬಸವನ (ಶಂಖದ)ಹುಳು


 ಸೂಚನೆ: ಸತ್ತ ಹುಳುಗಳನ್ನು ಮರುದಿನವೇ ಆರಿಸಿ 3 ಅಡಿ ಆಳದ ಗುಂಡಿಯಲ್ಲಿ ಹೂಳಬೇಕು, ಈ ರೀತಿ ಮಾಡುವುದರಿಂದ ಸತ್ತ
ಹುಳುವಿನ ಹೊಟ್ಟೆಯಲ್ಲಿರುವ ಮೊಟ್ಟೆಗಳನ್ನು ನಾಶ ಮಾಡಿದಂತಾಗುತ್ತದೆ. ಮಿಥೋಮಿಲ್ ವಿಷಪಾಷಾಣವನ್ನು ಬಳಸಿದ ಯಾವುದೇಬೆಳೆಗಳಲ್ಲಿ ಇತರೆ ಸಾಕು ಪ್ರಾಣಿಗಳು ಹಾಗೂ ಜಾನುವಾರುಗಳು ಈ ವಿಷಪಾಷಾಣದ ತುಣುಕುಗಳನ್ನು ತಿನ್ನದಂತೆ
ಎಚ್ಚರವಹಿಸಬೇಕು ಹಾಗೂ ಆನಂತರ ಮಣ್ಣಿನ ಪುಡಿ ಅಥವಾ ನೀರನ್ನು ಚೆಲ್ಲಿ ನಿಷ್ಕಿçÃಯಗೊಳಿಸಬೇಕು.


 ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ವಿಜ್ಞಾನಿಗಳು ತಾಲ್ಲೂಕಿನ ಸಹಾಯಕ ಕೃಷಿ
ನಿರ್ದೇಶಕರು ಅಥವಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಔರಾದ(ಬಾ) ಕೃಷಿ
ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.