Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕ್ರಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಔರಾದ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ. ಔರಾದ ಹಾಗೂ ಕಮಲನಗರ ತಾಲುಕಿನಲ್ಲಿ ನಡಿಯುತ್ತಿರುವ ಪ್ರಗತಿ ಹಾಗೂ ಕೌಶಲ್ಯ ಕೇಂದ್ರಗಳ ಸಂಯೋಜಕಿಯರ ವಿಶೇಷ ಸಭೆ ಜರುಗಿತು. ಈ ಸಂದರ್ಭದಲ್ಲಿ ವಿಶೇಷ ವಕ್ತಾರರಾಗಿ ಆಗಮಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕ್ರಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರು, ವಿಕಾಸ ಅಕಾಡೆಮಿಯ ಸಂಸ್ಥಾಪಕರಾದ ಬಸವರಾಜ ಪಾಟೀಲ ಸೇಡಂ ಮಾತನಾಡಿ ಸಂಘದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾವಯವ ಕೃಷಿ, ಸ್ವಉದ್ಯೋಗ ತರಬೇತಿ, ಕೌಶಲ್ಯ ಕೇಂದ್ರಗಳಂತಹ ಯೋಜನೆಗಳನ್ನು ಜಾರಿಗೆ ಗೊಳಿಸಲಾಗಿದೆ, ಎಂಟು ವರ್ಷದಿಂದ ಹನ್ನೆರಡು ವರ್ಷದೊಳೊಗಿನ ಮಕ್ಕಳ್ಳಿಕೆ ಉತ್ತಮ ಸಂಸ್ಕಾರ ನಿಡಿದಲ್ಲಿ ಆದರ್ಶ ಕುಟುಂಬ, ಆದರ್ಶ ಗ್ರಾಮದ ನಿರ್ಮಾಣ ಸಾಧ್ಯ ಈ ನಿಟ್ಟಿನಲ್ಲಿ ಪ್ರತಿ ಹಳ್ಳಿಯಲ್ಲೂ ಬಾಲಸಂಸ್ಕಾರ ಕೇಂದ್ರ ಪ್ರಾರಂಭಿಸಲಾಗಿದೆ ಈ ನಿಟ್ಟಿನಲ್ಲಿ ಎಲ್ಲಾ ಪ್ರಗತಿ ಹಾಗೂ ಕೌಶಲ್ಯ ಕೇಂದ್ರಗಳ ಸಂಯೋಜಕಿಯರು ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದು ಸಲಹೆ ನಿಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರೇವಣಸಿದ್ದಪ್ಪ ಜಲಾದೇ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಔರಾದ ತಾಲೂಕಿನ ವಿಕಾಸ ಅಕಾಡೆಮಿಯ ಸಂಚಾಲಕರಾದ ಗುರುನಾಥ್ ವಟಗೇ, ಕಮಲನಗರ ತಾಲುಕಿನಲ್ಲಿ ವಿಕಾಸ ಅಕಾಡೆಮಿಯ ಸಂಚಾಲಕರಾದ ಯಶವಂತ್ ಬಿರಾದಾರ ಉಪಸ್ಥಿತರಿದ್ದರು. ಗುರುಕುಲ ಶಾಲಾ ಸಂಸ್ಥಾಪಕರಾದ ಗುಂಡಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಸಂಘದ ಜಿಲ್ಲಾ ಪ್ರಮುಖರಾದ ರೇವಣಸಿದ್ದ ಜಾಡರ್ ನಿರುಪಿಸಿದರು. ಜಿಲ್ಲಾ ಸಂಚಾಲಕರಾದ ಪ್ರಶಾಂತ ಸಿಂಧೆ ಸ್ವಾಗತಿಸಿದರು. ಕಮಲನಗರ ಸಂಚಾಲಕರಾದ ಮಾಹದೇವ ಮಸ್ಕಲ್ ವಂದಿಸಿದರು. ಈ ಸಂದರ್ಭದಲ್ಲಿ ಕಮಲನಗರ ಹಾಗೂ ಔರಾದ ತಾಲೂಕಿನ ಸಂಘದ ತಾಲೂಕ ಸಂಚಾಲಕರು, ಪ್ರಗತಿ ಹಾಗೂ ಕೌಶಲ್ಯ ಕೇಂದ್ರದ ಸಂಯೋಜಕಿಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.