Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಹುಬ್ಬಳ್ಳಿ : ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ಖಂಡಿಸಿ ರಾಜ್ಯಾದ್ಯಂತ ಇಂದು ಕೂಡ ಕಾಂಗ್ರೆಸ್ ಪ್ರತಿಭಟನೆ ತೀವ್ರಗೊಳಿಸಿದೆ. ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಮಹಾನಗರ ಹಾಗೂ ಗ್ರಾಮೀಣ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಗೂ ಮುಂಚೆ ಸ್ಟೇಷನ್ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಡಿಕೆ ಶಿವಕುಮಾರ್ ಮಾಲಾರ್ಪಣೆ ಮಾಡಿ ಮರೆವಣಿಗೆ ಚಾಲನೆ ನೀಡಿದರು.
ಸ್ಟೇಶನ್ ರಸ್ತೆ ಪ್ರಾರಂಬಿಸಿ ಲಾಮಿಂಗ್ಟನ್ ರೊಡ ಮುಖಾಂತರ ಮೆರವಣಿಗೆಯು ಕಿತ್ತೂರ ಚೆನ್ನಮ್ಮ ವರ್ತುಳಕ್ಕೆ ಆಗಮಿಸಿ ಡಿ ಕೆ ಶಿವಕುಮಾರ ಮತ್ತು ಕಾಂಗ್ರೆಸ್ ನಾಯಕರು ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಮಾನಸಿಕ ಕಿರುಕುಳ ನೀಡುವ ಉದ್ದೇಶದಿಂದ ಇಡಿ ವಿಚಾರಣೆ ಮಾಡಲಾಗುತ್ತಿದೆ.ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದೆ.ಇಂತಹ ಕುಟುಂಬಕ್ಕೆ ಪ್ರಧಾನಿ ಮೋದಿ ಅಪಕೀರ್ತಿ ತರಲು ಯತ್ನಿಸುತ್ತಿದ್ದಾರೆ ಎಂದರು ಆರೋಪಿಸಿದರು. “ಇಡಿ, ಆದಾಯ ತೆರಿಗೆ ಇಲಾಖೆಗಳನ್ನು ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹಾಲು, ಮೊಸರು ಇನ್ನಿತರ ಅಗತ್ಯ ವಸ್ತುಗಳ ಮೇಲೆ ತೆರೆಗೆ ಹಾಕಿದ್ದಾರೆ.

ಇದರಿಂದ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ನ್ಯಾಶನಲ್ ಹೆರಾಲ್ಡ್ ಒಂದು ಸಂಸ್ಥೆಯಾಗಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿಯವರನ್ನು ಜೈಲಿಗೆ ಹಾಕಿ ಕೇಂದ್ರ ಸರ್ಕಾರವು ಕಾಂಗ್ರೆಸ್ ಮುಗಿಸುವ ಹುನ್ನಾರ ನಡೆಸಿದೆ” ಎಂದರು.ನಂತರ ಮಾತನ್ನು ಮುಂದುವರಿಸುತ್ತಾ ಬ್ರಿಟಿಷ್ ಆಡಳಿತಕ್ಕೆ ಹೆದರದ ಭಾರತೀಯರು ಬಿಜೆಪಿ ಬೆದರಿಕೆಗೆ ಹೆದುರುವುದಿಲ್ಲ ಎಂದರಲ್ಲದೆ ಪೊಲೀಸ್ ಇಲಾಖೆಯಲ್ಲಿ ಲಂಚ ನಡೆಯುತ್ತಿದೆ. ಗೃಹ ಸಚಿವರು, ಉತ್ತರ ಪತ್ರಿಕೆ ತಿದ್ದುವ ಪ್ರಯತ್ನ ಮಾಡುತ್ತಾರೆ. 40 ರಷ್ಟು ಲಂಚದ ಸರ್ಕಾರವಾಗಿದೆ.
ಮಂದಿನ ಚುಣಾವಣೆಯಲ್ಲಿ ನಮ್ಮ ಮತ್ತೆ ಸರ್ಕಾರ ಬರುತ್ತದೆ ಆರೋಪಿಗಳಿಗೆ ಶಿಕ್ಷೆ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.

ಲಕ್ಷ ಜನರು ಖಾದಿ ಧ್ವಜವನ್ನು ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯ ಮಹೋತ್ಸವ ಮಾಡಬೇಕು ಎಂದು ತಿಳಿಸಿದರು.ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಕಾಂಗ್ರೆಸ್ ಮುಖಂಡರುಗಳಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಎ.ಎಂ.ಹಿಂಡಸಗೇರಿ, ಎಂ.ಎಸ್.ಅಕ್ಕಿ, ಎನ್.ಎಚ್.ಕೋನರೆಡ್ಡಿ, ದೊರೆರಾಜ್ ಮಣಿಕುಂಟ್ಲಾ, ಸದಾನಂದ ಡಂಗನವರ, ಶಾಕೀರ ಸನದಿ, ರಾಬರ್ಟ್ ದದ್ದಾಪುರಿ, ವಿನೋದ ಅಸೂಟಿ, ರಜತ ಉಳ್ಳಾಗಡ್ಡಿಮಠ, ಅಲ್ತಾಫ್ ಕಿತ್ತೂರ, ಸತೀಶ ಮೆಹರವಾಡೆ, ಮಹೇಶ ದಾಬಡೆ, ಬಶೀರ ಗೂಡಮಾಲ್, ರಾಜಶೇಖರ ಮೆಣಸಿನಕಾಯಿ, ಇಮ್ರಾನ್ ಯಲಿಗಾರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸುಧೀರ್ ಕುಲಕರ್ಣಿ ಬಿ ವಿ ನ್ಯೂಜ ಹುಬ್ಬಳ್ಳಿ