Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ ಪಟ್ಟಣದ ಕಸ್ತೂರೆ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ವೈದ್ಯರ ದಿನಾಚರಣೆ ನಿಮಿತ್ಯ ವೈದ್ಯ ದಿನಾಚರಣೆ ಆಚರಿಸಲಾಯಿತು.

ಕಸ್ತೂರೆ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾತು ಈ ಸಂಧರ್ಭದಲ್ಲಿ ಹೈದ್ರಾಬಾದ್ ನ ಅನುಭವಿ ವೈದ್ಯರಾದ ಡಾ.ಸಂತೋಷ .ಕೆ. ಜನರಲ್ ಮೆಡಿಸಿನ್ ಮತ್ತು ಬೀದರಿನ ಡಾ.ಪಲ್ಲವಿ ಮಠಪತಿ ಗೈನಿಕ ಸರ್ಜನ್ ತಿಂಗಳಿನ ಮೊದಲನೆ ಸೋಮವಾರ ಹಾಗೂ ನಾಲ್ಕನೇ ಸೋಮವಾರ ಔರಾದ ತಾಲೂಕಿನ ರೋಗಿಗಳಿಗೆ ಉಚಿತ ತಪಾಸಣೆಗೆ ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕಿ ಡಾ.ಅಶ್ವಿನಿ ಕಸ್ತೂರೆ ಮಾತನಾಡಿ ತಾಲೂಕಿನ ಜನತೆಯ ಸೇವೆಯೆ ನಮ್ಮ ಗುರಿ ನಮ್ಮ ತಾಲೂಕಿನ ಬಡ ರೋಗಿಗಳಿಗೆ ಅಂತರಾಜ್ಯಕ್ಕೆ ಹಾಗೂ ಇತರೆ ಆಸ್ಪತ್ರೆಗೆ ಹೊಗುವದನ್ನು ಕಷ್ಟದ ಸಂಗತಿಯಾಗಿದೆ ನಮ್ಮ ಆಸ್ಪತ್ರೆಯಲ್ಲಿ ಅನುಭವಿ ವೈದ್ಯರು ಪ್ರತಿ ತಿಂಗಳು ಮೊದಲನೆಯ ಸೋಮವಾರ ಹಾಗೂ ನಾಲ್ಕನೇ ಸೋಮವಾರ ಉಚಿತ ತಪಾಸಣೆ ಮಾಡಲಾಗುವದು ಎಲ್ಲರೂ ಇಲ್ಲಿನ ಸೌಲಭ್ಯಗಳಾದ ECG ಹಾಗೂ 2D ECO ಟೆಸ್ಟಿಂಗ್ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಆಡಳಿತ ವ್ಯವಸ್ಥಾಪಕ ಶಿವರಾಜ ಕಸ್ತೂರೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು