Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಈಶ್ವರಪ್ಪ, ! ನಿನ್ನ ಹೆಂಡತಿಯನ್ನೂ ಕಂಟ್ರೋಲ್​ ಮಾಡೋಕೆ ಆಗದಿದ್ದರೆ ಓಡಿಹೋಗ್ತಾಳೆ ! ನೀವು ನೆಟ್ಟಗೆ ಇಟ್ಟುಕೊಂಡು ಕಂಟ್ರೋಲ್​ ಮಾಡದೆ ಹೋದ್ರೆ ನಿನ್​ ಹೆಂಡ್ತೀನೂ ಓಡಿ ಹೋಗ್ತಾಳೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಇಂದು  ಲೇವಡಿ ಮಾಡಿದ್ದಾರೆ.

ಠಾಕ್ರೆ ವಿರುದ್ಧ ಕೆಂಡಕಾರುವ ಭರದಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಯಾವ ಪಕ್ಷದಲ್ಲಿ ಶಿಸ್ತು, ನಾಯಕತ್ವ ಇರುವುದಿಲ್ಲವೋ ಆ ಪಕ್ಷ ಪ್ರಜಾಪ್ರಭುತ್ವದಲ್ಲಿ ಉಳಿಯುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿನ ರಾಜಕೀಯ ವಿದ್ಯಮಾನಗಳ ಕುರಿತು ವಿಶ್ಲೇಷಿಸಿದರು.

ಸಿಎಂ ಸ್ಥಾನಕ್ಕಾಗಿ ಬಾಳಾಸಾಹೇಬ್​ ಠಾಕ್ರೆ ಮಗ ಉದ್ಧವ್​ ಹಿಂದುತ್ವವನ್ನೇ ಮಾರಾಟ ಮಾಡಿದರು. ಈಗ ನೋಡಿದರೆ ಶಿವಸೇನೆ ಶಾಸಕರನ್ನು ಹೈಜಾಕ್​ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಕೇವಲ ಶಾಸಕರಷ್ಟೇ ಅಲ್ಲ, ನಿನ್ನ ಹೆಂಡತಿಯನ್ನೂ ಕಂಟ್ರೋಲ್​ ಮಾಡೋಕೆ ಆಗದಿದ್ದರೆ ಓಡಿಹೋಗ್ತಾಳೆ ಎಂದು ಠಾಕ್ರೆಗೆ ಲೇವಡಿ ಮಾಡಿದ್ದಾರೆ