Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

*ಔರಾದ, ಕಮಲನಗರ ತಾಲ್ಲೂಕುಗಳನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಲು ಆಗ್ರಹಿಸಿದ:- ಗೋಪಿಕೃಷ್ಣ ಗುಡೆನವರ್…

ಬೀದರ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಾಕಷ್ಟು ಹಾನಿ ಸಂಭವಿಸಿದೆ. ಔರಾದ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಇಲ್ಲಿನ ಹಲವಾರು ರಸ್ತೆಗಳು, ಬ್ರಿಜ್ ಕಂ ಬ್ಯಾರೇಜ್ ಗಳು, ಕೆರೆ-ಕಟ್ಟೆಗಳು ಹಾಳಾಗಿದ್ದು, ಮಳೆ ನೀರು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿವೆ.

ಬಿತ್ತನೆಯಾದ ಸೋಯಾಬೀನ್ ಹಾಗೂ ಇನ್ನಿತರೆ ಎಲ್ಲ ಬೆಳೆಗಳು ನಾಶವಾಗಿ ರೈತರು ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ. ನೂರಾರು ಮನೆಗಳು ಕುಸಿದು ಬಿದ್ದಿದ್ದರಿಂದ ಸಾರ್ವಜನಿಕರು ಸಾಕಷ್ಟು ಆತಂಕದಲ್ಲಿದ್ದಾರೆ. ಪ್ರವಾಹದಲ್ಲಿ ಅನೇಕ ಜನರು ಮಳೆಯ ಅನಾಹುತದಿಂದ ಮರಣ ಹೊಂದಿದ್ದಾರೆ.

ಕಳೆದ ಒಂದು ವಾರದಿಂದ ನಿರಂತರ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳನ್ನು ಕೂಡಲೇ ಸಮರ್ಪಕವಾಗಿ ಸಮೀಕ್ಷೆ ಮಾಡಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಔರಾದ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಯೋಜಕರಾದ ಗೋಪಿಕೃಷ್ಣ ಗುಡೆನವರ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರಂತರ ಸುರಿದ ಭಾರಿ ಮಳೆಯಿಂದಾಗಿ ಸಾವಿರಾರು ರೈತರ ಹೋಲಗಳು ಬಹುತೇಕ ಜಲಾವೃ ತ್ತವಾಗಿದ್ದು ರೈತರು ಬೆಳೆದ ಬೆಳೆಗಳು ಕಣ್ಣ ಮುಂದೆಯೇ ನಾಶವಾಗುತ್ತಿವೆ. ರೈತರು ಮತ್ತಷ್ಟು ಸಂಕಷಕ್ಕೆ ಸಿಲುಕುವಂತಾಗಿದೆ ಇನ್ನೂ ಹಲವು ಕಡೆ ರೈತರ ಹೊಲದಲ್ಲಿರುವ ಫಲವತ್ತಾದ ಮಣ್ಣನು ಕೊಚ್ಚಿಕೊಂಡು ಹಳ್ಳ ಕೊಳ್ಳಗಳ ಪಾಲಾಗಿದೆ. ಇದರಿಂದಾದ ರೈತರ ಫಲವತ್ತಾದ ಭೂಮಿಗಳು ಬರಡು ಬಂಜರು
ಭೂಮಿಯಂತಾಗಿವೆ. ಹಿಂದುಳಿದ ತಾಲೂಕು ಹಣೆಪಟ್ಟಿ ಕಟ್ಟಿಕೊಂಡಿರುವ ಔರಾದ ತಾಲೂಕಿನ ರೈತರು ಬಡವರು ಕೂಲಿ ಕಾರ್ಮಿಕರು ಮತ್ತು ಅನೇಕ ಜನರು ಪರಿತಪಿಸುವಂತಾಗಿದೆ, ಸರಕಾರ ಕೂಡಲೇ ಈ ಕಡೆ ಗಮನಹರಿಸಿ ರೈತರಿಗೆ ಹೆಚ್ಚುವರಿ ಪರಿಹಾರ ಘೋಷಿಸಬೇಕು ಮತ್ತು ಮಳೆಯಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಶೀಘ್ರದಲ್ಲಿ ವಸತಿ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿ ಕೊಡುವ ವ್ಯವಸ್ಥೆ ಮಾಡಬೇಕು ಪ್ರವಾಹದಿಂದ ಕೊಚ್ಚಿಕೊಂಡು ಹೋದ ಮೃತರ ಕುಟುಂಬಸ್ಥರಿಗೆ ಸರಕಾರದಿಂದ ಕೂಡಲೇ ಪರಿಹಾರ ಧನ ವಿತರಿಸಬೇಕು ಎಂದರು. ಈಗಾಗಲೇ ಸಾಲ ಮಾಡಿ ಬಿತ್ತನೆ ಮಾಡಿ ಬರುವ ಬೆಳೆಯನ್ನು ನಂಬಿಕೊಂಡಿದ್ದ ರೈತ ಶಂಖದ ಹುಳು ಕಾಟದಿಂದ ಬಹುತೇಕ ಹೊಲಗಳಲ್ಲಿನ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದ ರಿಂದ ಮತ್ತೆ ಎರಡು ಬಾರಿ ಬಿತ್ತನೆ ಮಾಡಿದರೂ ಸಹ ಮತ್ತೆ
ಇದೇ ಪರಿಸ್ಥಿತಿ ಉಂಟಾಗಿದೆ ಬೆಳೆ ಚಿಗುರೊಡೆಯುವ ಹಂತದಲಲಿಯೇ ಈ ಹುಳುವಿನ ಕಾಟ ದಿಂದ ಸೋಯಾ, ಅವರೆ, ಹೆಸರು, ಉದ್ದು ಬೆಳೆ ನಾಶವಾಗಿದೆ . ಇದರಿಂದಾಗಿ ಸಂಪೂರ್ಣವಾಗಿ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಹೆಚ್ಚಿನ ಪರಿಹಾರ ಧನವನ್ನು ನೀಡುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.ಅಲ್ಲದೆ
ಔರಾದ ಹಾಗೂ ಕಮಲನಗರ ಎರಡೂ ತಾಲ್ಲೂಕುಗಳನ್ನು ಕೂಡಲೇ ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ, ತುರ್ತು ಪರಿಹಾರ ಅನುದಾನ ಮತ್ತು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ತಿಳಿಸುತ್ತಾರೆ ….

        ಇತಿ ನಿಮ್ಮ ವಿಶ್ವಾಸಿ

ಔರಾದ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಯೋಜಕರಾದ ಗೋಪಿಕೃಷ್ಣ ಗುಡೆನವರ್
97418 5455