Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಶಾಲೆಗೆ ಚಕ್ಕರ್ ಹಾಕಿ ಸಚಿವರ ಬರ್ತಡೆ ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ಕಾರಿ ಶಾಲೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಬಿಇಒಗೆ ದೂರು ಸಲ್ಲಿಸಿದ್ದಾರೆ

ಶಾಲೆಗೆ ಅನಧಿಕೃತ ಗೈರುಹಾಜರಿ ಹಾಕಿ ಸಚಿವರ ಖಾಸಗಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡರ ನಿಯೋಗದಿಂದ ಮನವಿ ಪತ್ರ ನೀಡಲಾಯಿತು .


ಇಲ್ಲಿಯ ಕೆಲ ಶಿಕ್ಷಕರು ಪದೇ ಪದೇ ಬಿಜೆಪಿ ಕಾರ್ಯಕ್ರಮಗಳಲ್ಲಿ ಓಡಾಡುತ್ತಿದ್ದಾರೆ ಇವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳುರ ಮಾತನಾಡಿ ಸರ್ಕಾರಿ ಶಾಲಾ ಶಿಕ್ಷಕರು ಬಿಜೆಪಿ ಏಜೆಂಟರ ಕೆಲಸ ಮಾಡುತ್ತಿದ್ದಾರೆ. ತಮ್ಮ ಸೇವೆಗೆ ಗೈರಾಗಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.

ಶಾಲೆಗೆ ಚಕ್ಕರ್ ಹಾಕಿ ಸಚಿವರ ಬರ್ತಡೆ ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ಕಾರಿ ಶಾಲೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ

ಮುಖಂಡರಾದ ಸುನಿಲ್ ಮಿತ್ರ, ರತ್ನದೀಪ್ ಕಸ್ತೂರೆ,NSUI ಕೊಡಲಿಗೆ ತಾಲೂಕ ಅಧ್ಯಕ್ಷರಾದ ಚಂದು ಡಿ ಕೆ, ಹರಿದೇವ ಸಂಗನಾಳ, ಬಾಲಾಜಿ ಕಾಸಲೆ, ಅನಿಲ ವಡಿಯರ, ಕಾಶಿನಾಥ್ ರಾಠೋಡ, ಸೂರ್ಯಕಾಂತ್ ಕಾಂಬ್ಳೆ, ಮುಂತಾದವರು ಉಪಸ್ಥಿತರಿದ್ದರು.