Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಪತ್ರಕರ್ತರ ಸನ್ಮಾನ ಸಮಾಜಕ್ಕೆ ಸನ್ಮಾನಿಸಿದಂತೆ –ಗುರುಬಸವ ಪಟ್ಟ ದೇವರು

ಪತ್ರಕರ್ತರು ಸಮಾಜದ ಕಣ್ಣು, ಸಮಾಜದ ಏಳಿಗೆಗಾಗಿ ದುಡಿಯುವಂತವರು ಸದಾ ಸಮಾಜದ ಚಿಂತಕರು ಹಾಗಾಗಿ ಪತ್ರಕರ್ತರಿಗೆ ಸನ್ಮಾನಿಸಿದರೆ ಸಮಾಜಕ್ಕೆ ಗೌರವ ಕೊಟ್ಟಿದ ಹಾಗೆ ಎಂದು ಭಾಲ್ಕಿ ಹಿರೇಮಠದ ಪೂಜ್ಯಶ್ರೀ ಗುರುಬಸವ ಪಟ್ಟದೇವರು ಹೇಳಿದರು.

ಸಂತಪೂರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ಪತ್ರಕರ್ತರ ಸೇವೆ ಅಮೋಘಯಾಗಿದೆ. ಜನರು ಹಾಗೂ ಸಮಾಜದವರು ದಾರಿ ತಪ್ಪದಂತೆ ಪತ್ರಿಕಾ ಮಾಧ್ಯಮದವರು ಮಾಡುತ್ತಿರುವ ಕಾರ್ಯ ಶ್ರೇಷ್ಠ. ಭ್ರಷ್ಟಾಚಾರ, ಮೋಸಗಾರಿಕೆ ಇನ್ನಿತರ ಕಾರ್ಯಗಳು ನಡೆಯದಂತೆ ಸಮಾಜ ಸರಿಯಾಗಿ ನಡೆಯಬೇಕಾದರೆ ಪತ್ರಿಕಾರಂಗದವರು ಮೂಲ ಕಾರಣಭೂತರು ಹಾಗಾಗಿ ಅವರಿಗೆ ಸಲ್ಲಿಸುವ ಗೌರವ ಸಮಾಜ, ನಾಡ,ರಾಷ್ಟ್ರಕ್ಕೆ ಗೌರವ ತೋರಿಸಿದಂತೆ ಎಂದರು.

ಹಿರಿಯ ಪತ್ರಕರ್ತ ಗುರುನಾಥ್ ವಡ್ಡೆ ಮಾತನಾಡಿ ಸಂತಪುರ್ ಸಿದ್ದರಾಮೇಶ್ವರ ಕಾಲೇಜಿನವರು ಸನ್ಮಾನಿಸುತ್ತಿರುವುದು ನಮಗೆ ಬಹಳ ಸಂತೋಷ ತಂದಿದೆ. ಸದಾ ವಿದ್ಯಾರ್ಥಿಗಳ ಏಳಿಗೆಯನೇ ಬಯಸುವಂಥವರು ಇವರ ಕಾರ್ಯ ಹೀಗೆ ಸಾಗಲಿ ಎಂದು ಶುಭ ಹಾರೈಸಿದರು.

ಪ್ರಾಂಶುಪಾಲ್ ನವೀಲಕುಮಾರ್ ಉತ್ಕಾರ್ ಪ್ರಸ್ತಾವಿಕ ಮಾತನಾಡಿ ಪತ್ರಕರ್ತ ಬಾಂಧವರು ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟುವಂತವರಿಗೆ ಸನ್ಮಾನಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.

ಪತ್ರಕರ್ತರಾದ ಮನ್ಮಥಪ್ಪ ಸ್ವಾಮಿ, ಶರಣಪ್ಪ ಚಿಟ್ಮೆ, ಶಿವಕುಮಾರ್ ಮುಕ್ತೆದಾರ, ಅಮರ ಸ್ವಾಮಿ, ಸುನಿಲ್ ಜಿರೋಬೆ, ಸಂತೋಷ್ ಚಾಂಡೆಸುರೆ, ರಿಯಾಜ್ ಪಾಶಾ, ಸೂರ್ಯಕಾಂತ್ ಎಕಲಾರೆ, ಚನ್ನಬಸವ ಮುಕ್ತೆದಾರ್, ರವಿ ಮಠಪತಿ, ರಾಮದಾಸ್ ಪಾಟೀಲ್, ಅಲೀಮ್ ಪಾಶಾ, ಲಕ್ಷ್ಮಣ್ ರಾಠೋಡ್, ಶೇಕ್. ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಈರಮ್ಮ ಕಟಗಿ, ಸ್ವಾತಿ ಸಿರಂಜಿ, ಅಂಬಿಕಾ ವಿಶ್ವಕರ್ಮ,ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ ಇತರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 52 ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.