Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಈ ಫೋಟೋದಲ್ಲಿ ಮುಖ ಮರೆಮಾಚಿರುವ ಮಹಿಳೆಯು ಸುಮಾರು  ಆರು ತಿಂಗಳಲ್ಲಿ 27 ಲಕ್ಷ ರೂಪಾಯಿ ಹಣ ಗಳಿಸಿದ್ದಾಳೆ ಅಂದ್ರೆ ನೀವು ಕಣ್ಣುಮುಚ್ಚಿ ನಂಬಲೇಬೇಕು. ಆದರೆ, ಆಕೆ ಹಣ ಸಂಪಾದಿಸಿದ ರೀತಿ ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡುತ್ತೆ

ಹೌದು, ಈಕೆ ಸಾಮಾನ್ಯದವಳಲ್ಲ. ಏಕೆಂದರೆ, ಈಕೆ ಖತರ್ನಾಕ್​ ಕಳ್ಳಿ. ಬಸ್ಸುಗಳೇ ಈಕೆಯ ಟಾರ್ಗೆಟ್​. ಜನರಿಂದ ತುಂಬಿ ತುಳುಕುತ್ತಿದ್ದ ಬಸ್ಸುಗಳನ್ನು ಏರುತ್ತಿದ್ದ ಈಕೆ ಬರಿಗೈಯಲ್ಲಿ ವಾಪಸ್​ ಬಸ್ಸಿನಿಂದ ಇಳಿಯುತ್ತಿದ್ದಳು. ಆದರೆ, ಆಕೆಯ ಪಾಕೆಟ್​ನಲ್ಲಿ ಮಾತ್ರ ಮಹಿಳೆಯರ ಚಿನ್ನದ ಒಡವೆಗಳೇ ತುಂಬಿರುತ್ತಿದ್ದವು. ಇದೇ ರೀತಿ ಕಳ್ಳತನ ಮಾಡಿ ಆರೇ ತಿಂಗಳಲ್ಲಿ ಈಕೆ  ಸುಮಾರು 27 ಲಕ್ಷ ರೂಪಾಯಿ ಬೆಲೆ ಬಾಳುವ ಒಡವೆಗಳನ್ನು ಕದ್ದಿದ್ದಾಳೆ.

ಈ ಖತರ್ನಾಕ್​ ಕಳ್ಳಿಯನ್ನು ಬಂಧಿಸಲಾಗಿದೆ. ಈಕೆ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯವಳು. ಆರ್ಮೂರ್ ಪಟ್ಟಣದ ಪೊಲೀಸರು ಕಿಲಾಡಿ ಲೇಡಿಯನ್ನು ಬಂಧಿಸಿದ್ದಾರೆ. ಆರೋಪಿಯ ಹೆಸರು ಯಾದಲಕ್ಷ್ಮಿ.ಎಂದು ಗುರುತಿಸಲಾಗಿದೆ , ಈಕೆಯ ಬಳಿ 27.50 ಲಕ್ಷ ರೂಪಾಯಿ ಬೆಲೆ ಬಾಳುವ 55 ತೊಲ ಬಂಗಾರವನ್ನು ಪೋಲಿಸರು  ವಶಕ್ಕೆ ಪಡೆದಿದ್ದಾರೆ. ಬಸ್ಸುಗಳಲ್ಲಿ ಪ್ರಯಾಣಿಕರನ್ನೇ ಟಾರ್ಗೆಟ್​ ಮಾಡುವ ಈ ಖತರ್ನಾಕ್​ ಕಳ್ಳಿ ತನ್ನ ದುಷ್ಕೃತ್ಯದಿಂದ ಅನೇಕ ಮಂದಿಗೆ ನಿದ್ರೆ ಇಲ್ಲದ ರಾತ್ರಿ ಕಳೆಯುವಂತೆ ಮಾಡಿದ್ದಾಳೆ ಅಂತ ಮಾಹಿತಿ ಹೋರಬಿದ್ದಿದ್ದೆ,