Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಧಾರಕಾರವಾದ ಮಳೆಯ ಹಿನ್ನಲೆಯಲ್ಲಿ ಬೀದರ ಜಿಲ್ಲೆಯಲ್ಲಿ  ನಾಳೆ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಬೀದರ ಜಿಲ್ಲೆಯಲ್ಲಿ ನಾಳೆ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ.ಬೀದರ ಜಿಲ್ಲೆಯಾದ್ಯಂತ (11-07-2022) ರಂದು ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಅದೇಶ ಹೊರಡಿಸಿದ್ದಾರೆ

ಜಿಲ್ಲೆಯ ವಿವಿಧ ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ.ಮತ್ತು ಹಲವು ಕಡೆ ಹೊಲ ಗದ್ದೆಗಳು ಜಲಾವೃತಗೊಂಡಿದ್ದು  ಇನ್ನೂಳಿದ ಅನೇಕ ತಾಲ್ಲೂಕುಗಳಲ್ಲಿ  ಮಳೆ ನೀರಿನಿಂದ ರಸ್ತೆಗಳು ಜಲಾವೃತಗೊಂಡಿದ್ದು, ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿದೆ. ಈ ಹಿನ್ನಲೆಯಲ್ಲಿ ಎಲ್ಲ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಭಾರತೀಯ ಮೆರಿಯೊಲಾಜಿಕಲ್ ಇಲಾಖೆಯಿಂದ  ಎಚ್ಚರಿಕೆ

ಬೀದರ್ ಜಿಲ್ಲೆಯನ್ನು ಹಳದಿ ಎಚ್ಚರಿಕೆಯಿಂದ (30-50 ಮಿಮೀ ನಿರೀಕ್ಷಿತ ಮಳೆ) ಕಿತ್ತಳೆ ಎಚ್ಚರಿಕೆಗೆ (50-70 ಮಿಮೀ ನಿರೀಕ್ಷಿತ ಮಳೆ) ಜುಲೈ 10 ಮತ್ತು ಜುಲೈ 11 ರಂದು ಪರಿವರ್ತಿಸಲಾಗಿದೆ. ಅದಕಾರಣ ಜುಲೈ 11 ರಂದು ಎಲ್ಲಾ ಅಂಗನವಾಡಿಗಳು, ಎಲ್ಲಾ ಶಾಲೆಗಳು ಮತ್ತು ಎಲ್ಲಾ ಕಾಲೇಜುಗಳಿಗೆ ರಜೆ ಘೋಷಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ