Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ ಪಟ್ಟಣದಲ್ಲಿ ಶನಿವಾರ ನಡೆದ ತಾಲೂಕು ಕಸಾಪ ಹಾಗೂ ಮಹಾ ಶಕ್ತಿ ಕೇಂದ್ರ ವತಿಯಿಂದ ತಾಲೂಕಿನ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕು ತಹಶಿಲ್ದಾರ ಅರುಣ ಕುಮಾರ ಕುಲಕರ್ಣಿ ಮಾತನಾಡಿ ಪತ್ರಕರ್ತರು ನಿಜವಾದ ಘಟನೆಗಳಿಗೆ ಆದ್ಯತೆ ನೀಡಬೇಕು ನಿಖರವಾದ ವರದಿ ಮಾಡುವ ಮೂಲಕ ವಳ್ಳೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಮಾಧ್ಯಮದ ಬಗ್ಗೆ ವಿಶೇಷ ಉಪನ್ಯಾಸ ಮಂಡಿಸಿದ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸಂಜುಕೂಮಾರ ತಾಂದಳೆ ಮಾತನಾಡಿ ವಿಶ್ವದಲ್ಲಿಯೇ ಸುಮಾರು 150ವರ್ಷಗಳ ಹಿಂದೆ ಸ್ಥಾಪಿತವಾದ ಪತ್ರಿಕಾ ಮಾಧ್ಯಮ ತನ್ನದೆ ಆದ ಛಾಪು ಮುಡಿಸಿಕೊಂಡು ಸಮಾಜದಲ್ಲಿ ನಡೆಯುತ್ತಿರುವ ನ್ಯಾಯ – ಅನ್ಯಾಯ ಗಳನ್ನು ಎತ್ತಿ ತೋರಿಸುವ ಕೇಲಸ ಮಾದ್ಯಮದಾಗಿದೆ.ಪ್ರಜಾಪ್ರಭುತ್ವ ದಲ್ಲಿ ವ್ಯವಸ್ಥೆಯಲ್ಲಿ ಸರಿ ತಪ್ಪುಗಳನ್ನು ತಿದ್ದುವ ಜೊತೆಗೆ ಸಮಾಜದ ಸ್ವಸ್ಥ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಅನೇಕ ಸವಾಲುಗಳನ್ನು ಎದುರಿಸಿ ಕೇಲಸ ಮಾಡಬೇಕಾಗಿದೆ ಪತ್ರಕರ್ತರು ವಿಶೇಷವಾಗಿ ಸರಕಾರಿ ಶಾಲಾ ಕಾಲೇಜುಗಳ ಸಮಸ್ಯೆ ಎತ್ತಿ ಹಿಡಿಯುವಲ್ಲಿ ಮುಂದಾಗಬೇಕು ಎಂದು ನುಡಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಡಾ ಮನ್ಮಥ ಡೊಳೆ ಮಾತನಾಡಿ ಪತ್ರಕರ್ತರು ತಮ್ಮ ಸ್ವಂತ ಬಲದಿಂದ ಓಣಿಯಲ್ಲಿನ ಸಮಸ್ಯೆ ದಿಲ್ಲಿವರೆಗೆ ಕೊಂಡೊಯುವಂತ ಕೇಲಸ ಮಾಡುತ್ತಾರೆ ಪತ್ರಕರ್ತರ ಸೇವೆ ಅನನ್ಯವಾಗಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಶಾಲಿವಾನ ಉದಗೀರೆ ,ಕಸಾಪ ಗೌರವ ಅದ್ಯಕ್ಷ ಹಿರಿಯ ಜೀವಿ ಡಾ ಕಲ್ಲಪ್ಪಾ ಉಪ್ಪೆ, ಯುವ ಉದ್ಯಮಿ ಶ್ರೀ ನಿವಾಸ ಖೂಬಾ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವಕುಮಾರ್ ಘಾಟೆ, ಪತ್ರಕರ್ತರ ಸಂಘದ ತಾಲೂಕು ಅದ್ಯಕ್ಷ ಶರಣಪ್ಪಾ ಪಾಟೀಲ್, ಧರ್ಮಸ್ಥಳ ಯೋಜನಾಧಿಕಾರಿ ರಾಘವೇಂದ್ರ, ಪಿ ಎಸ್ ಐ ಉಪೇಂದ್ರ,ಆನಂದ ದ್ಯಾಡೆ, ಸಂದೀಪ್ ಪಾಟೀಲ್,ಅಶೋಕ ಅಲಮಾಜೆ,ಹಾಗೂ ತಾಲೂಕಿನ ಪತ್ರಕರ್ತ ಬಾಂಧವರು ಉಪಸ್ಥಿತರಿದ್ದರು ನಾಗನಾಥ ಶಂಕು ನಿರೂಪಿಸಿದರು, ಅಶೋಕ ಶೇಂಭೆಳ್ಳಿ ಸ್ವಾಗತಿಸಿದರು ಕಸಾಪ ಯುವ ಘಟಕ ಅದ್ಯಕ್ಷ ಅಂಬಾದಾಸ ನಳಗೆ ವಂದಿಸಿದರು.