Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬೀದರ ಜೂನ್ 30 (ಕರ್ನಾಟಕ ವಾರ್ತೆ): 2022-23ನೇ ಸಾಲಿನಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಿಂದ
ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ನೇರ ಸಾಲ, ಅರಿವು ಶೈಕ್ಷಣಿಕ ಸಾಲ (ನವಿಕರಣ)
ಯೋಜನೆಯಡಿಯಲ್ಲಿ ಪ್ರವರ್ಗ-1ರ ಅಡಿಯಲ್ಲಿ ಬರುವ ಕ್ರಮ ಸಂಖ್ಯೆ 53(ಎ) ಯಿಂದ 53(ವ್ಹಿ) ವರೆಗಿನ ಉಪ್ಪಾರ ಮತ್ತು
ಇದರ ಉಪಜಾತಿಗಳಿಗೆ ಸೇರಿದ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಲ ಮತ್ತು ಸಹಾಯಧನ ಸೌಲಭ್ಯ
ಪಡೆಯಬಯಸುವುದರಿಂದ ಅರ್ಜಿ ಆಹ್ವಾನಿಸಲಾಗಿದೆ
.


ಅರ್ಹರು ವೆಬ್‌ಸೈಟ್  www.suvidha.karnataka.gov.in  ಮೂಲಕ ಮಾತ್ರವೆ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ
ಸಲ್ಲಿಸಲು ಆಗಸ್ಟ್ 12 ಕೊನೆಯ ದಿನಾಂಕ ಆಗಿರುತ್ತದೆ. ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಛೇರಿ,
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ(ನಿ)/ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ
ವ್ಯವಸ್ಥಾಪಕರ ಕಛೇರಿ, ನಂ. 9-8-175/5ಬಿ, ಬಿವ್ಹಿಬಿ ಕಾಲೇಜ ರೋಡ, ಮೈಲೂರ ಕ್ರಾಸ್, ಬಸವನಗರ ಬೀದರ


ನಿಗಮದ ವೆಬ್‌ಸೈಟ್  https://upparadevelopment.karnataka.gov.in  ರಲ್ಲಿ ಪಡೆಯಬಹುದಾಗಿದೆ ಅಥವಾ
ನಿಗಮದ ಸಹಾಯವಾಣಿ ನಂ. 7026288888ಗೆ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಸಂಪರ್ಕಿಸಬಹುದಾಗಿದೆ
ಎಂದು ಬೀದರ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.