Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ್ ಪಟ್ಟಣದ ಕುಮಾರ್ ಪ್ಯಾಲೇಸ್ ಸನೀಹದ ಸೇತುವೆ ಸಮೀಪ ನಿಲ್ಲಿಸಿದ ಲಾರಿಯೊಂದು ಕಳ್ಳತನವಾಗಿರುವ ಮಾಹಿತಿ ಬುಧವಾರ ಮುಂಜಾನೆ ಬೆಳಕಿಗೆ ಬಂದಿದೆ.

ಲಾರಿ ಸಂಖ್ಯೆ ಎಪಿ ೨೩ ಡಬ್ಲೂ ೬೬೭೭ ಆಗಿದ್ದು, ಅಂದಾಜು ಎಳು ಲಕ್ಷದ ೫೦ಸಾವಿರ ರೂಗಳದಾಗಿದೆ. ಲಾರಿ ಮಾಲಿಕ ಸ್ಥಳಿಯ ಪಟ್ಟಣದ ನಿವಾಸಿ ಪ್ರಭು ಮಾಣಿಕಗೌಡಾ ಅವರಿಗೆ ಸೇರಿದ ಲಾರಿ ಕಳ್ಳತನವಾಗಿದೆ.

ಲಾರಿ ಮಾಲಿಕ ಪ್ರಭು ಗೌಡಾ ಅವರು ಕಳೆದ ೩೦ ವರ್ಷಗಳಿಂದ ಇದೇ ವೃತ್ತಿ ಮಾಡಿಕೊಂಡು ಬಂದಿದ್ದು, ನಿರಂತರ ಮಳೆ ಇರುವ ಕಾರಣ ದಿನಾಲು ನಿಲ್ಲಿಸುವ ಸ್ಥಳದಲ್ಲಿಯೇ ಲಾರಿ ನಿಲ್ಲಿಸಿದ್ದಾರೆ. ಆದರೇ ಬುಧವಾರ ಮುಂಜಾನೆ ಎದ್ದು ಲಾರಿ ಕ್ಲೀನ್ ಮಾಡಲು ಹೋದಾಗ ಆ ಸ್ಥಳದಲ್ಲಿ ಲಾರಿ ಕಾಣದೇ ಕಂಗಾಲಾಗಿದ್ದಾರೆ. ಕೂಡಲೇ ಔರಾದ್ ಪೊಲೀಸ್ ಠಾಣೆಯಲ್ಲಿ ಕಳ್ಳತನವಾದ ಲಾರಿ ಬೇಗನೇ ಪತ್ತೆಮಾಡಿಕೊಡಬೇಕು ಎಂದು ನೀಡಿದ ಮನವಿ ಮೇರೆಗೇ ಪಿಎಸ್ ಐ ಉಪೇಂದ್ರ ನೇತ್ರತ್ವದÀ ತಂಡ ಲಾರಿಯ ಶೋಧನೆಗೆಗಾಗಿ ಬಲೆ ಬೀಸಿದೆ.