Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬೀದರ ತಾಲ್ಲೂಕಿನಲ್ಲಿ ಸತತವಾಗಿ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಚಿಮಕೊಡ್ ಗ್ರಾಮದಲ್ಲಿ ಲಕ್ಷ್ಮೀ ಸುಭಾಷ ಅವರ ಮನೆ ಕುಸಿದಿದ್ದು ಮಾಜಿ ಸಚಿವರು, ಹಾಲಿ ಉತ್ತರ ಕ್ಷೇತ್ರದ ಶಾಸಕರಾದ ರಹೀಂಖಾನ್ ಅವರು ಧೀಡಿರನೇ ಸ್ಥಳಕ್ಕೆ ಭೇಟಿ ನೀಡಿ 10 ಸಾವಿರ ರೂ.ಚೆಕ್ ನೀಡುವ ಮೂಲಕ ತುರ್ತು ಪರಿಹಾರ ಕಲ್ಪಿಸುವದರ ಜೊತೆಗೆ ಕುಸಿದಿರುವ ಮನೆಯನ್ನು ಶೀಘ್ರದಲ್ಲಿಯೇ ಹೊಸದಾಗಿ ನಿರ್ಮಿಸಿ ಕೊಡುವದಾಗಿ ಭರವಸೆ ನೀಡಿದರು.

rahim khan

ಗ್ರಾಮದಲ್ಲಿ ಶಂಕರ ಶಿವಲಿಂಗಪ್ಪ ಮತ್ತು 3-4 ಮನೆಗಳು ಕುಸಿದಿದ್ದು ಶೀಘ್ರದಲ್ಲಿಯೇ ಪರಿಹಾರ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ರೆವನ್ಯೂವ್ ಇನ್ಸ್‌ಪೆಕ್ಟರ್ ರಮೇಶರಾವ್, ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್, ಲ್ಯಾಂಡ್ ಸರ್ವರ್ (ತಲಾಟಿ) ಲಕ್ಷ್ಮೀ, ಗ್ರಾಮದ ಪಿ.ಡಿ.ಓ ಸೂರ್ಯಕಾಂತ ಪಾಟೀಲ್, ರಮೇಶ ಮೂಲಗೆ, ರಾಜು ಪಾಟೇಲ್, ಜೈರಾಜ ಚಿಲ್ಲರ್ಗಿ, ಅಕ್ಷಯ ವರದಾನ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.