Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ರೈತರ ಜಮೀನುಗಳಿಗೆ ಕೃಷಿ ಅಧಿಕಾರಿಗಳ ಭೇಟಿ

ಗದಗ ತಾಲೂಕಿನಾದ್ಯಂತ ಹೆಸರು ಹಾಗೂ ಶೇಂಗಾ ಬೆಳೆ ಹಳದಿಯಾಗುತ್ತಿರುವದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ .ಈ ಹಿನ್ನಲೆಯಲ್ಲಿ ಗದಗ ಕೃಷಿ ಅಧಿಕಾರಿಗಳು ತಾಲೂಕಿನ ಗ್ರಾಮಗಳಾದ ಹರ್ಲಾಪೂರ ಲಕ್ಕುಂಡಿ ತಿಮ್ಮಾಪೂರ ಸಂಭಾಪೂರ  ಗ್ರಾಮಗಳ ರೈತರ ಜಮೀನುಗಳಿಗೆ ತೆರಳಿ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.

ರೈತರಿಗೆ ಹಳದಿ ನಂಜಾಣು ರೋಗದ ಬಗ್ಗೆ ಸಲಹೆ


ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಹೆಸರು ಮತ್ತು ಶೇಂಗಾವನ್ನು ಸುಮಾರು 25 ಸಾವಿರಕ್ಕೂ ಅಧಿಕ ಹೈಕ್ಟರ ಪ್ರದೇಶದಲ್ಲಿ ಬೀತನೆ ಯಾಗಿದೆ.
ಹೆಸರು ಹಾಗೂ ಶೇಂಗಾ ಬೆಳೆಗಳಿಗೆ ಕೀಟನಾಶಕ ಸಿಂಪಡನೆ ಮಾಡಿದ್ದಲ್ಲಿ ಉತ್ತಮ ಫಸಲನ್ನು ಪಡೆಯಬಹುದೆಂದು ಕೃಷಿ ಅಧಿಕಾರಿ ವೀರಣ್ಣ ಗಡಾದ ಸಲಹೆ ನೀಡಿದ್ದಾರೆ
.ಅವರು ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರಿಂದ ಬೆಳೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿದ್ದು ಉತ್ತಮ ಬೆಳೆ ಬಂದಿದೆ . ಆದರೆ ಈಗ ಹಳದಿ ನಂಜಾಣು ರೋಗ ಸೇರಿದಂತೆ ಅನೇಕ ಕೀಟ ಹಾಗೂ ರೋಗಭಾದೆ ಅಲ್ಲಲ್ಲಿ ಕಂಡು ಬರುತ್ತಿದೆ ಎಂದರು.

ತಾಲೂಕಿನ ಕೆಲವು ಗ್ರಾಮದ ಕಡೆಗಳಲ್ಲಿ ಸತತ ಮಳೆ ಸುರಿಯುತ್ತಿರುವದರಿಂದ ತಂಪು ವಾತಾವರಣ ಹೆಚ್ಚಾಗಿ ಹೆಸರು ಹಾಗೂ ಶೇಂಗಾ ಬೆಳೆಗಳಿಗೆ ಹಳದಿ ನಂಜಾಣು ರೋಗ ಕಂಡುಬಂದಿದ್ದು ರೈತರು ತಮ್ಮ ಜಮೀನಿನಲ್ಲಿ  ಹಳದಿ ಬಣ್ಣದ ಬೆಳೆಗಳಿದ್ದರೆ ಅದನ್ನು ಮೊದಲು ಕಿತ್ತು ಭೂಮಿಯಲ್ಲಿ ಹುಳಬೇಕು.
ಇದು ಅಂಟು ರೋಗವಾಗಿರುವದರಿಂದ ಗಿಡದಿಂದ ಗಿಡಕ್ಕೆ ಹರಡುತ್ತಾ ಹೋಗುತ್ತದೆ
.ನಿಯಂತ್ರಣ ಮಾಡಲು ಅಂತಾಹ ರೋಗಿಷ್ಟ ಗಿಡಗಳನ್ನು  ಕಿತ್ತು ಹಾಕಬೇಕು ಹಾಗೂ
ಎಲೆ ತಿನ್ನುವ ಕೀಟ ಬಾದೆಗಳಿಗಾಗಿ ಡೈಯೊಮಿಥೋಯೇಟ್ 1.7 ml ಮೊನೊಕ್ರೊಟೊಪಾಸ್ 1ml ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಹಾಗೂ ಇದರ ಜೋತೇಗೆ ಬೇವಿನ ಎಣ್ಣೆಯನ್ನು ಕೀಟಗಳ ನಿಯಂತ್ರಣಕ್ಕಾಗಿ ಸಿಂಪಡಿಸಿದರೆ ಎಲೆ ತಿನ್ನುವ ಕೀಟ ಬಾದೆಗಳು ನಿಯಂತ್ರಣದಲ್ಲಿ ಬರುತ್ತವೆ ಎಂದರು   ಹೇಳಿದರು.
ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್ ಹ್ಯಾಪ್ ಮೂಲಕ ತಾವು ಬೆಳೆದ ಬೆಳೆಗಳನ್ನು ತಮ್ಮ ಮೊಬೈಲ್ ಫೋನ್ ಮೂಲಕ ಪೋಟೋ ತೆಗೆದು ಬೆಳೆಯನ್ನು ಸಮೀಕ್ಷೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ ಆರ್ ನಾರಾಯಣರೆಡ್ಡಿ ಬಣದ ಗದಗ ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಅವರು ಮಾತನಾಡಿ ಪ್ರಸ್ತುತ ವರ್ಷದ ಗದಗ ಬೆಟಗೇರಿ ಹೋಬಳಿಯಲ್ಲಿ ಮುಂಗಾರು ಬೆಳೆಗಳಾದ ಹೆಸರು ಶೇಂಗಾ ಬೆಳೆಗಳಿಗೆ ಹಳದಿ ನಂಜಾಣು ರೋಗದ ಲಕ್ಷಣಗಳು ಕಂಡುಬರುತ್ತವೆ ಬೆಳೆಗಳು ರೋಗಕ್ಕೆ ತುತ್ತಾಗಿ ರೈತರು ಖರ್ಚು ಮಾಡಿದಷ್ಟು ಬೆಳೆ ಬರುತ್ತಿಲ್ಲ ಸರ್ಕಾರ ಮಧ್ಯ ಪ್ರವೇಶಿಸಿ ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳ ಮೂಲಕ ವರದಿ ಪಡೆದು ರೈತರಿಗೆ ಸುಕ್ತು ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆತ್ಮ ಯೋಜನೆ ಸಹಾಯಕರಾದ ರುದ್ರಪ್ಪ, ಹಾಗೂ ರೈತರಾದ ಶರಣಪ್ಪ ಜೋಗಿನ, ಶೇಖಪ್ಪ ಗಾಜಿ ,ಉದಯ ಗಂಗರಾತ್ರಿ ,ಹೊನ್ನಕೆರಪ್ಪ ಬೀಚಗಲ್ಲ, ಮಾರುತಿ ಗಾಜಿ, ಪ್ರಕಾಶ ಕುಂಬಾರ, ಮತ್ತು ಕೃಷಿ ಮಿತ್ರ ವೆಂಕಟೇಶ ಪೂಜಾರ, ಜಗದೀಶ ಸತ್ಯಪ್ಪನವರ ಇನ್ನೂ ಮುಂತಾದ ರೈತರು ಪಾಲ್ಗೊಂಡಿದ್ದರು.