Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರ ಜೂನ್ 30 (ಕರ್ನಾಟಕ ವಾರ್ತೆ): ಬಸವಕಲ್ಯಾಣ ತಾಲ್ಲೂಕಿನಲ್ಲಿ 2019-20 ನೇ ಸಾಲಿನಲ್ಲಿ ಮುಂಗಾರು ಮತ್ತು
ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗಾಗಿ ನೊಂದಾಯಿಸಿದ ರೈತರ ಒಟ್ಟು 353 ಅರ್ಜಿ ತಿರಸ್ಕೃತಗೊಂಡಿರುವುದಕ್ಕೆ
ಆಕ್ಷೇಪಣೆ ಸಲ್ಲಿಸಲು 15 ದಿವಸ ಕಾಲವಕಾಶ ನೀಡಲಾಗಿದೆ
.


 ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೇಂದ್ರ ಸರಕಾರದ ಮಾರ್ಗದರ್ಶನದಂತೆ
ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ರೈತರ ಬೆಳೆ ವಿಮೆಗೆ ನೊಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ
ಸರಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆ ಆಗಿರುವ ಪ್ರಸ್ತಾವನೆಗಳಿಗೆ ಸಂರಕ್ಷಣೆ
ತಂತ್ರಾAಶದಲ್ಲಿ ವಿಮಾ ಪರಿಹಾರ ಲೆಕ್ಕ ಹಾಕಲಾಗಿದೆ.


ತಾಳೆಯಾಗದೆ ಇರುವ ಪ್ರಸ್ತಾವನೆಗಳನ್ನು ಸಂರಕ್ಷಣೆ ತಂತ್ರಾAಶದಲ್ಲಿ ಪರಿಶೀಲಿಸಲಾಗಿ ಮುಂಗಾರು ಹಂಗಾಮಿನಲ್ಲಿ
ತಿರಸ್ಕೃತಗೊಂಡ 184, ಹಿಂಗಾರು ಹಂಗಾಮಿನಲ್ಲಿ 169 ಪ್ರಸ್ತಾವನೆಗಳನ್ನು ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಗೆ
ಕಳುಹಿಸಲಾಗಿದೆ. ಪ್ರಸ್ತುತ ತಿರಸ್ಕೃತಗೊಂಡ ಪ್ರಸ್ತಾವನೆಗಳ ರೈತರ ಪಟ್ಟಿಯನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ
ಪ್ರದರ್ಶಿಸಲಾಗಿದ್ದು, ಸದರಿ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ
ಪಂಚಾಯತಗಳಲ್ಲಿ ಪ್ರದರ್ಶಿಸಲಾಗುವುದು.


ಆದಕಾರಣ ಸಂಬAಧಪಟ್ಟ ರೈತರು ಆಕ್ಷೇಪಣೆ ಇದ್ದಲ್ಲಿ ಮಾತ್ರ ಮಾಹಿತಿಯನ್ನು ಪ್ರಕಟಿಸಿದ ದಿನಾಂಕದಿAದ 15 ದಿನಗಳ
ಒಳಗಾಗಿ ತಮ್ಮ ಮನವಿಯೊಂದಿಗೆ ಬೆಳೆ ವಿಮೆಗೆ ನೋಂದಣಿಯಾಗಿರುವ ಬೆಳೆಯನ್ನು ಬೆಳೆದಿರುವ ಕುರಿತು ಅಗತ್ಯ
ದಾಖಲಾತಿಗಳನ್ನು ಸಂಬAಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ದಾಖಲಾತಿಗಳು ಸಲ್ಲಿಸಬಹುದಾಗಿದೆ.
2019-20ನೇ ಸಾಲಿನ ಪಹಣಿ ಪತ್ರಿಕೆಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು. ಬೆಂಬಲ ಬೆಲೆ
ಪ್ರಯೋಜನ ಪಡೆದಿದ್ದಲ್ಲಿ ರಶೀದಿ ಸಲ್ಲಿಸುವುದು.

ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಮಾರುಕಟ್ಟೆಗೆ
ಮಾರಾಟ ಮಾಡಿದ್ದಲ್ಲಿ ಸದರಿ ದಾಖಲೆ ಸಲ್ಲಿಸುವುದು. ಮಾಹಿತಿ ಪ್ರಕಟಿಸಿದ 15 ದಿನಗಳ ಒಳಗಾಗಿ ಯಾವುದೇ
ಆಕ್ಷೇಪಣೆಗಳು ರೈತರಿಂದ ಬಂದಿಲ್ಲದಿದ್ದರೆ ಎಲ್ಲಾ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗುವುದು ಎಂದು ಸಹಾಯಕ ಕೃಷಿ
ನಿರ್ದೇಶಕರಾದ ಮಾರ್ಥಂಡ. ಎನ್. ಮಚಕುರಿ ಅವರು ತಿಳಿಸಿದ್ದಾರೆ.